Asianet Suvarna News Asianet Suvarna News

ಅಫ್ಘಾನ್‌ಗೆ ತಲೆಬಾಗಿದ ಶ್ರೀಲಂಕಾ ಏಷ್ಯಾ ಕಪ್​ನಿಂದಲೇ ಔಟ್​​..!

ಸತತ ಎರಡು ಸೋಲು ಅನುಭವಿಸಿದ ಶ್ರೀಲಂಕಾ ಏಷ್ಯಾ ಕಪ್​ ಟೂರ್ನಿಯಿಂದ ಹೊರ ಬಿದ್ದಿದೆ. ಬಾಂಗ್ಲಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 137 ರನ್​ಗಳ ಸೋಲು ಅನುಭವಿಸಿದ್ದ ಸಿಂಹಳೀಯರು, ನಿನ್ನೆ ನಡೆದ 2ನೇ ಪಂದ್ಯದಲ್ಲಿ ಕ್ರಿಕೆಟ್​ ಶಿಶು ಅಫ್ಘಾನ್​ ವಿರುದ್ಧ 91 ರನ್​​ಗಳ ಸೋಲು ಅನುಭವಿಸಿತು.

Afghanistan knock Sri Lanka out of Asia Cup after upset win
Author
Bengaluru, First Published Sep 18, 2018, 11:15 AM IST

ಅಬುಧಾಬಿ, (ಸೆ.18): ಸತತ ಎರಡು ಸೋಲು ಅನುಭವಿಸಿದ ಶ್ರೀಲಂಕಾ ಏಷ್ಯಾ ಕಪ್​ ಟೂರ್ನಿಯಿಂದ ಹೊರ ಬಿದ್ದಿದೆ. ಬಾಂಗ್ಲಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 137 ರನ್​ಗಳ ಸೋಲು ಅನುಭವಿಸಿದ್ದ ಸಿಂಹಳೀಯರು, ನಿನ್ನೆ (ಸೋಮವಾರ) ನಡೆದ 2ನೇ ಪಂದ್ಯದಲ್ಲಿ ಕ್ರಿಕೆಟ್​ ಶಿಶು ಅಫ್ಘಾನ್​ ವಿರುದ್ಧ 91 ರನ್​​ಗಳ ಸೋಲು ಅನುಭವಿಸಿತು. ಈ ಮೂಲಕ 5 ಬಾರಿಯ ಏಷ್ಯಾ ಚಾಂಪಿಯನ್​ ಲಂಕಾ, ಗುಂಪು ಹಂತದಲ್ಲೆ ಟೂರ್ನಿಯಿಂದ ಹೊರ ನಡೆಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಅಫ್ಘಾನ್ ತಂಡ ದಿಟ್ಟ ಬ್ಯಾಟಿಂಗ್​​ ಪ್ರದರ್ಶನ ನೀಡಿತು. ನಿಗದಿತ 50 ಓವರ್​ಗಳಲ್ಲಿ 249 ರನ್ ಗಳಿಸುವ ಮೂಲಕ ಸವಾಲಿನ ಮೊತ್ತ ಕಲೆ ಹಾಕಿತು. ಆರಂಭಿಕರಾದ ಮೊಹಮ್ಮದ್ ಶಹಜಾದ್ ಇಶಾನ್​ ಉಲ್ಲ ತಂಡಕ್ಕೆ ಉತ್ತಮ ಓಪನಿಂಗ್ ನೀಡಿದರು. ಬಳಿಕ ಬಂದ ರಹಮತ್ ಶಾ 72 ರನ್ ಬಾರಿಸುವವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು.

ಅಫ್ಘಾನಿಸ್ತಾನ ನೀಡಿದ್ದ ಗುರಿ ಬೆನ್ನತ್ತಿದ್ದ ಲಂಕಾ, ಆರಂಭದಲ್ಲೇ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟ್ಸ್​​ಮನ್​ ಕುಸಾಲ್ ಮೆಂಡೀಸ್ ಖಾತೆ ತೆರೆಯುವುದಕ್ಕೂ ಮುನ್ನ ಮೊದಲ ಓವರ್​​ನಲ್ಲೇ ಮುಜೀಬ್​ ಉರ್​​​ ರೆಹಮಾನ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಉಪುಲ್ ತರಂಗಾ ಹಾಗೂ ಧನಂಜಯ್ ಡಿ ಸಿಲ್ವಾ ಕೊಂಚ ಪ್ರತಿರೋದ ಹೊಡ್ಡಿದರಾದರೂ ತಂಡವನ್ನ ಗೆಲ್ಲಿಸಿಕೊಡುವಲ್ಲಿ  ವಿಫಲರಾದರು. 

ಅಫ್ಘಾನ್​ ಸ್ಪಿನ್ ಮೋಡಿಗೆ ಲಂಕಾ ಅಂತಿಮವಾಗಿ 41.2 ಓವರ್​ಗಳಲ್ಲಿ 158 ರನ್​​​ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 91 ರನ್​ಗಳ ಸೋಲು ಅನುಭವಿಸಿತು. ಈ ಮೂಲಕ ಏಷ್ಯಾಕಪ್ ಟೂರ್ನಿಯಿಂದಲೇ ಹೊರ ಬಿತ್ತು.

Follow Us:
Download App:
  • android
  • ios