ಎರಡೂ ದೇಶಗಳ ನಡುವೆ ಕ್ರಿಕೆಟ್ ಸಾಮರಸ್ಯ ಮೂಡಿಸಲು ಜುಲೈ-ಆಗಸ್ಟ್'ನಲ್ಲಿ ಕಾಬೂಲ್ ಮತ್ತು ಲಾಹೋರ್'ನಲ್ಲಿ ತಲಾ ಒಂದೊಂದು ಟಿ20 ಫ್ರೆಂಡ್ಲಿ ಮ್ಯಾಚ್'ಗಳನ್ನು ಆಡಲು ನಿಶ್ಚಯಿಸಲಾಗಿತ್ತು. ಜೊತೆಗೆ, ಆಫ್ಘಾನಿಸ್ತಾನದ ಆಟಗಾರರಿಗೆ ತರಬೇತಿ ಕ್ಯಾಂಪ್'ಗಳನ್ನು ಪಾಕ್ ಕ್ರಿಕೆಟ್ ಮಂಡಳಿ ವ್ಯವಸ್ಥೆ ಮಾಡುವುದಿತ್ತು.

ಕಾಬೂಲ್(ಜೂನ್ 01): ನಿನ್ನೆ ಕಾಬೂಲ್'ನಲ್ಲಿ ಕಾರ್ ಬಾಂಬ್ ಸ್ಫೋಟಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಯನ್ನೇ ರದ್ದುಗೊಳಿಸಲು ಆಫ್ಘಾನಿಸ್ತಾನ ನಿರ್ಧರಿಸಿದೆ. ಆಫ್ಘನ್ ಕ್ರಿಕೆಟ್ ಮಂಡಳಿಯು ಈ ವಿಚಾರವನ್ನು ಟ್ವಿಟ್ಟರ್'ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಪಂದ್ಯಗಳನ್ನು ರದ್ದುಗೊಳಿಸಲು ಕಾಬೂಲ್ ಬಾಂಬ್ ಸ್ಫೋಟ ಘಟನೆಯೇ ಕಾರಣ ಎಂದು ಅದು ಎಲ್ಲಿಯೂ ಹೇಳಿಲ್ಲವಾದರೂ, ಟ್ವೀಟ್'ನಲ್ಲಿ ಕಾಬೂಲ್ ಬ್ಲಾಸ್ಟ್ ಅನ್ನು ಟ್ಯಾಗ್ ಆಗಿ ಬಳಸಿದೆ.

ಎರಡೂ ದೇಶಗಳ ನಡುವೆ ಕ್ರಿಕೆಟ್ ಸಾಮರಸ್ಯ ಮೂಡಿಸಲು ಜುಲೈ-ಆಗಸ್ಟ್'ನಲ್ಲಿ ಕಾಬೂಲ್ ಮತ್ತು ಲಾಹೋರ್'ನಲ್ಲಿ ತಲಾ ಒಂದೊಂದು ಟಿ20 ಫ್ರೆಂಡ್ಲಿ ಮ್ಯಾಚ್'ಗಳನ್ನು ಆಡಲು ನಿಶ್ಚಯಿಸಲಾಗಿತ್ತು. ಜೊತೆಗೆ, ಆಫ್ಘಾನಿಸ್ತಾನದ ಆಟಗಾರರಿಗೆ ತರಬೇತಿ ಕ್ಯಾಂಪ್'ಗಳನ್ನು ಪಾಕ್ ಕ್ರಿಕೆಟ್ ಮಂಡಳಿ ವ್ಯವಸ್ಥೆ ಮಾಡುವುದಿತ್ತು. ಮುಂಬರುವ ದಿನಗಳಲ್ಲಿ ಎರಡೂ ದೇಶಗಳ ನಡುವೆ ಜೂನಿಯರ್ ಮತ್ತು ಸೀನಿಯರ್ ಕ್ರಿಕೆಟ್ ತಂಡಗಳ ಕ್ರಿಕೆಟ್ ಪ್ರವಾಸಗಳನ್ನು ಕೈಗೊಳ್ಳುವ ಯೋಜನೆಯೂ ಇತ್ತು. ಈಗ, ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸಲು ಆಫ್ಘಾನಿಸ್ತಾನ ನಿರ್ಧರಿಸಿದೆ.

ನಿನ್ನೆಯ ಕಾಬೂಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪಾಕ್ ಮೂಲದ ಉಗ್ರರ ಕೈವಾಡ ಇರುವ ಶಂಕೆ ಇದೆ. ಈ ಕಾರಣಕ್ಕೆ ಆಫ್ಘಾನಿಸ್ತಾನ ಈ ನಿರ್ಧಾರ ಕೈಗೊಂಡಿರಬಹುದೆನ್ನಲಾಗಿದೆ.

Scroll to load tweet…