ಅಡಿಲೇಡ್[ಜ. 16] ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ 299ರನ್​ ಚೇಸಿಂಗ್​  ಮಾಡಿ ಭಾರತ ವಿಜಯಮಾಳೆ ಹಾಕಿಕೊಂಡಿದೆ. ವಿರಾಟ್ ಬ್ಯಾಟಿನಿಂದ ಸಿಡಿದ ಶತಕ ಅನೇಕ ದಾಖಲೆ ಪುಡಿ ಮಾಡಿದೆ.

ಧೋನಿ ಮತ್ತು ವಿರಾಟ್ ಪ್ರದರ್ಶನ ಭಾರತಕ್ಕೆ ಜಯ ತಂದುಕೊಟ್ಟಿದೆ. ಆದರೆ ಬ್ಯಾಟಿಂಗ್​ ನಡೆಸುತ್ತಿದ್ದ ಮಹೇಂದ್ರ ಸಿಂಗ್​ ಧೋನಿ ಮಾಡಿರುವ ಎಡವಟ್ಟುವೊಂದು ಅಂಪೈರ್​ ಹಾಗೂ ಎದುರಾಳಿ ತಂಡದ ಆಟಗಾರ ಗಮನಕ್ಕೆ ಬಂದಿಲ್ಲ!

ಚೇಸಿಂಗ್‌ನಲ್ಲಿ ಧೋನಿ ಈಗಲೂ ನಂ.1- ಕೊಹ್ಲಿಗೆ ಎಷ್ಟನೇ ಸ್ಥಾನ?

ನೇಥನ್​ ಲೀಯಾನ್​ ಎಸೆದ 45ನೇ ಓವರ್​​ನ ಕೊನೆ ಎಸೆತದಲ್ಲಿ ಒಂದು ರನ್​ ತೆಗೆದುಕೊಳ್ಳಲು ಓಡಿರುವ ಧೋನಿ ಅದನ್ನ ಪೂರ್ಣಗೊಳಿಸದೇ ವಾಪಸ್​ ಆಗಿದ್ದಾರೆ. ಇದು ಅಂಪೈರ್​ ಅಥವಾ ಎದುರಾಳಿ ತಂಡದವರ ಗಮನಕ್ಕೆ ಬಂದಿಲ್ಲ. ಕಾಮೆಂಟರಿ ಮಾಡುತ್ತಿದ್ದ ಗಿಲ್​ ಕ್ರಿಸ್ಟ್​ ಇದನ್ನು ಹೇಳಿದ್ದಾರೆ.

ಈ ವೇಳೆ ಭಾರತಕ್ಕೆ 3 ಓವರ್​ಗಳಲ್ಲಿ 25ರನ್ ಬೇಕಿತ್ತು. ಕ್ರೀಸ್ ಅದಲು ಬದಲಾಗಿದ್ದರೆ ಪಂದ್ಯದ ಗತಿ ಬದಲಾಗುತ್ತಿತ್ತು ಎಂಬ ಮಾತು ಇದೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಣುಕು ಹರಿದಾಡುತ್ತಿದ್ದು ಪಂದ್ಯ ಮುಗಿದು ಫಲಿತಾಂಶವೂ ಬಂದಾಗಿದೆ.

\