2013ರಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ಸಮರ್ಥ್ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ 4500 ರನ್ ಬಾರಿಸಿದ್ದಾರೆ.
ಬೆಂಗಳೂರು(ಜು.11): ಕರ್ನಾಟಕದ ಆರಂಭಿಕ ಬ್ಯಾಟ್ಸ್'ಮನ್ ರವಿಕುಮಾರ್ ಸಮರ್ಥ್ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಭಿನವ್ ಮುಕುಂದ್ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ, ಸಮರ್ಥ್'ಗೆ ಸುವರ್ಣಾವಕಾಶ ಅರಸಿ ಬಂದಿದೆ.
ಬಿಸಿಸಿಐ ತೀರ್ಮಾನ ನನಗೆ ಆಶ್ಚರ್ಯ ಮೂಡಿಸಿದೆ. ಈಗಾಗಲೇ ತಂಡವನ್ನು ಘೋಷಿಸಿದ್ದರಿಂದ ನನಗೆ ಭಾರತ ಎ ತಂಡದಲ್ಲಿ ಸ್ಥಾನ ಸಿಗುತ್ತದೆಂದು ಊಹಿಸಿರಲಿಲ್ಲ. ನಾನು ಇದೇ ಮೊದಲ ಬಾರಿಗೆ ಭಾರತ ಎ ತಂಡಕ್ಕೆ ಆಯ್ಕೆಯಾಗಿರುವುದರಿಂದ ತುಂಬಾ ಸಂತೋಷವಾಗುತ್ತಯಿದೆ. ಆಫ್ರಿಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತೇನೆಂದು ಮೈಸೂರು ಮೂಲದ 24 ವರ್ಷದ ಸಮರ್ಥ್ ಹೇಳಿದ್ದಾರೆ.
2013ರಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ಸಮರ್ಥ್ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ 4500 ರನ್ ಬಾರಿಸಿದ್ದಾರೆ. ಸಮರ್ಥ್ ಆಯ್ಕೆಯಾದ ಸುದ್ದಿ ಹೊರಬೀಳುತ್ತಿದ್ದಂತೆ ಸಹಪಾಠಿ ಕರುಣ್ ನಾಯರ್ ಬಲಗೈ ಬ್ಯಾಟ್ಸ್'ಮನ್ ಸಮರ್ಥ್'ಗೆ ಟ್ವಿಟರ್'ನಲ್ಲಿ ಶುಭಕೋರಿದ್ದಾರೆ.
ಲಾಸ್ಟ್ ಬಿಟ್:
ಭಾರತ ತಂಡವು ಎರಡು ನಾಲ್ಕುದಿನಗಳ ಟೆಸ್ಟ್ ಪಂದ್ಯವನ್ನು ಆಡಲಿದ್ದು ಅದರ ನಾಯಕತ್ವವನ್ನು ಕರುಣ್ ನಾಯರ್ ವಹಿಸಿದ್ದಾರೆ. ಇನ್ನು ಏಕದಿನ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಲಿದ್ದಾರೆ. ಇದರ ಜೊತೆಗೆ ರಾಹುಲ್ ದ್ರಾವಿಡ್ ಕೋಚ್ ಆಗಿರುವುದರಿಂದ ಸಮರ್ಥ್'ಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವಾತಾವರಣ ಸಿಕ್ಕಂತಾಗಿದೆ.
ಆರ್ ಸಮರ್ಥ್'ಗೆ ಸುವರ್ಣ ನ್ಯೂಸ್'ವತಿಯಿಂದ ಅಭಿನಂದನೆಗಳು...
