ನವ​ದೆ​ಹ​ಲಿ(ಅ.05): ರಿಯೊ ಒಲಿಂಪಿಕ್ಸ್‌ ಕೂಟದಲ್ಲಿ ಉತ್ತಮ ಪ್ರದ​ರ್ಶನ ನೀಡು​ವಲ್ಲಿ ಎಡ​ವಿದ ಭಾರ​ತದ ಶೂಟ​ರ್‌ಗಳನ್ನು ಮಾಜಿ ಶೂಟರ್‌ ಅಭಿ​ನವ್‌ ಬಿಂದ್ರಾ ನೇತೃ​ತ್ವದ ಎನ್‌​ಆ​ರ್‌​ಎಐ ಸಮಿ​ತಿ ತೀವ್ರ ತರಾ​ಟೆಗೆ ತೆಗೆ​ದು​ಕೊಂಡಿದೆ.

ಶೂಟ​ರ್‌​ಗಳ ವೈಫ​ಲ್ಯದ ಹಿಂದಿನ ಕಾರ​ಣ​ವನ್ನು ಪತ್ತೆ​ಹ​ಚ್ಚ​ಲು ಒಲಿಂಪಿಕ್ಸ್‌ನಲ್ಲಿ ಶೂಟ​ರ್‌​ಗಳ ವೈಫ​ಲ್ಯದ ಬೆನ್ನಲ್ಲೇ ಭಾರ​ತೀಯ ರೈಫಲ್ಸ್‌ ಸಂಸ್ಥೆ (ಎ​ನ್‌​ಆ​ರ್‌​ಎ​ಐ​) ವತಿ​ಯಿಂದ ಸಮಿ​ತಿ​ ರಚಿಸಿತ್ತು. ನಾಲ್ವ​ರು ಸದಸ್ಯರ ಈ ಸಮಿ​ತಿಗೆ ಮಾಜಿ ಶೂಟರ್‌ ಅಭಿ​ನವ್‌ ಬಿಂದ್ರಾ ಅಧ್ಯ​ಕ್ಷ​ರಾಗಿದ್ದರು. ಇದೀಗ, ಸಂಸ್ಥೆಯ ಪ್ರತಿ​ಯೊಬ್ಬ ಶೂಟ​ರ್‌ನ ವೈಫ​ಲ್ಯ​ಗಳನ್ನು ಕೂಲಂಕಷವಾಗಿ ಪರಿ​ಶೀ​ಲಿಸಿ ಎನ್‌​ಆ​ರ್‌​ಎ​ಐಗೆ ತನ್ನ ವರದಿ ಸಲ್ಲಿ​ಸಿದೆ. ಅಲ್ಲದೆ, ಗುರಿಕಾರರ ತರಬೇತುದಾರರು ಹಾಗೂ ರಾಷ್ಟ್ರೀಯ ರೈಫಲ್‌ ಸಂಸ್ಥೆ​ಗೂ ಮಾತಿನ ಬರೆ ಎಳೆ​ದಿ​ರುವ ಸಮಿ​ತಿ, ಶೂಟ​ರ್‌​ಗ​ಳನ್ನು ತರ​ಬೇ​ತಿ​ಗೊ​ಳಿ​ಸುವ, ದೊಡ್ಡ ಕ್ರೀಡಾ​ಕೂ​ಟ​ಗ​ಳಿಗೆ ಅಣಿ​ಗೊ​ಳಿ​ಸುವ ವ್ಯವ​ಸ್ಥೆಯೇ ಬದ​ಲಾ​ಗ​ಬೇ​ಕೆಂಬ ಸಲ​ಹೆ​ಯನ್ನೂ ನೀಡಿದೆ.

‘‘ರಿಯೊ ಒಲಿಂಪಿಕ್ಸ್‌ಗಾಗಿ ಯಾವ ರೀತಿ​ಯಲ್ಲಿ ತಯಾರಿ ನಡೆ​ಸ​ಬೇ​ಕಿತ್ತೋ ಆ ಮಟ್ಟಕ್ಕೆ ಸಿದ್ಧ​ಗೊ​ಳ್ಳು​ವಲ್ಲಿ ಶೂಟ​ರ್‌​ಗಳು ಎಡ​ವಿ​ದ್ದಾರೆ. ವಾಸ್ತ​ವ​ ಮರೆತು ಕೇವಲ ಅದೃಷ್ಟದ ಮೇಲೆಯೇ ಅವ​ಲಂಬಿ​ಸಿ​ರು​ವುದು ರಿಯೊ​ ಸ್ಪರ್ಧೆ​ಗಳ ಫಲಿ​ತಾಂಶ​ಗಳು ಹೇಳು​ತ್ತಿವೆ. ಇತ್ತೀ​ಚಿನ ವರ್ಷ​ಗ​ಳಲ್ಲಿ ಅಲ್ಲಲ್ಲಿ ಕೆಲ ಯಶಸ್ಸುಗಳನ್ನು ಕೆಲ​ವಾರು ಶೂಟ​ರ್‌​ಗಳು ದಾಖ​ಲಿ​ಸಿ​ದ್ದರೂ ರಿಯೊ ಒಲಿಂಪಿಕ್ಸ್‌ನಲ್ಲಿ ಅವರೆ​ಲ್ಲರೂ ಪೇಲವ ಎನಿ​ಸಿದ್ದು ವಿಪ​ರ್ಯಾಸ’’ ಎಂದು ಹೇಳಿದೆ. ಮುಖ್ಯವಾಗಿ ಸರ್ಕಾ​ರದ ಹಣ​ವೆಂದರೆ ಹೇಗೆ ಬೇಕಾ​ದರೂ ಚೆಲ್ಲಾ​ಡ​ಬ​ಹು​ದು ಎಂಬ ಮನ​ಸ್ಥಿ​ತಿ​ಯಲ್ಲೇ ಆಟ​ಗಾ​ರರು ಇದ್ದ​ರೆಂದು ಅದು ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿದೆ.

ಹೀನಾ ಸಿಧುಗೂ ಛೀಮಾರಿ :

ಸರ್ಕಾ​ರ ಉನ್ನತ ಮಟ್ಟದ ತರ​ಬೇ​ತಿ​ಗಾಗಿ ನೀಡಿದ ಹಣ​ದಲ್ಲಿ ಉತ್ತಮ ತಯಾರಿ ನಡೆ​ಸುವ ಬದ​ಲಿಗೆ ತನ್ನ ಪತಿ​ ರೋನಕ್‌ ಪಂಡಿ​ತ್‌ ಅವರನ್ನು ಕೋಚ್‌ ಆಗಿ​ಸಿ​ಕೊಂಡಿದ್ದ ಮಹಿಳಾ ಶೂಟರ್‌ ಹೀನಾ ಸಿಧು ಬಗ್ಗೆಯೂ ಸಮಿತಿ ತೀವ್ರ ವಾಗ್ದಾಳಿ ನಡೆ​ಸಿದೆ. ಒಲಿಂಪಿಕ್ಸ್‌ನಂಥ ದೊಡ್ಡ ಕ್ರೀಡಾ​ಕೂ​ಟ ಮುಂದಿ​ದ್ದರೂ ಈ ಸವಾ​ಲನ್ನು ಅರ್ಥ ಮಾಡಿ​ಕೊ​ಳ್ಳದ ಸಿಧು, ರಾಷ್ಟ್ರೀಯ ಕೋಚ್‌ ಪಾವೆಲ್‌ ಸ್ಮಿರ್ನೊವ್‌ ಮಾರ್ಗ​ದ​ರ್ಶ​ನ​ವನ್ನು ನಿರ್ಲ​ಕ್ಷಿಸಿದ್ದು ಅಕ್ಷಮ್ಯ’’ ಎಂದು ಸಮಿ​ತಿಯು ಹೇಳಿದೆ.