‘ಕೊಹ್ಲಿ, ಸದ್ಯ ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಖಂಡಿತವಾಗಿಯೂ ತಂಡ ಇಲ್ಲಿ ಇತಿಹಾಸ ಬರೆಯಲು ಕಾತರಿಸುತ್ತಿದೆ.
ಜೋಹಾನ್ಸ್‌ಬರ್ಗ್(ಡಿ.25): ಮುಂಬರುವ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇತಿಹಾಸ ಬರೆಯಲು ಸಕಲ ಪ್ರಯತ್ನ ನಡೆಸಲಿದೆ ಎಂದು ದಕ್ಷಿಣ ಆಫ್ರಿಕಾದ ತಾರಾ ಬ್ಯಾಟ್ಸ್'ಮನ್ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
‘ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಆಗಮಿಸುತ್ತಿರುವುದು ನನ್ನ ಉತ್ಸಾಹ ಹೆಚ್ಚಿಸಿದೆ’ ಎಂದು ವಿಲಿಯರ್ಸ್ ಹೇಳಿದ್ದಾರೆ. ‘ಕೊಹ್ಲಿ, ಸದ್ಯ ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಖಂಡಿತವಾಗಿಯೂ ತಂಡ ಇಲ್ಲಿ ಇತಿಹಾಸ ಬರೆಯಲು ಕಾತರಿಸುತ್ತಿದೆ. ಕೊಹ್ಲಿಯನ್ನು ನಾನು ಮೊದಲು ನೋಡಿದ್ದಕ್ಕೂ, ಈಗಲಿಗೂ ಸಾಕಷ್ಟು ಬದಲಾಗಿದ್ದಾರೆ’ ಎಂದು ವಿಲಿಯರ್ಸ್, ಕೊಹ್ಲಿ ಗುಣಗಳನ್ನು ಕೊಂಡಾಡಿದ್ದಾರೆ. ‘ಭಾರತ ವಿರುದ್ಧ ಸರಣಿ ಭಾರೀ ಪೈಪೋಟಿಯಿಂದ ಕೂಡಿರಲಿದೆ. ಭಾರತ ತಂಡ ಯುವ ಹಾಗೂ ನಿಷ್ಕೃಷ್ಟ ಆಟಗಾರರಿಂದ ಕೂಡಿದ್ದು, ಸವಾಲಿಗೆ ನಾವು ಸಿದ್ಧರಿದ್ದೇವೆ’ ಎಂದು ಎಬಿಡಿ ಹೇಳಿದ್ದಾರೆ.

