ಎಬಿ ಡಿವಿಲಿಯರ್ಸ್ ಅವರ ಅದ್ಭುತ ಪ್ರದರ್ಶನದಿಂದ ಟೆಸ್ಟ್ ಸರಣಿಯಲ್ಲಿ ಭಾರತ ವಿರುದ್ಧ ಆಫ್ರಿಕಾ 2-1 ಅಂತರದಲ್ಲಿ ಸರಣಿ ಜಯಿಸಿತ್ತು. ಇದೀಗ ಮೊದಲ ಟಿ20 ಸೋತಿರುವ ಹರಿಣಗಳ ಪಡೆಗೆ ಎಬಿಡಿ ಅಲಭ್ಯತೆ ದೊಡ್ಡ ಶಾಕ್ ಉಂಟು ಮಾಡಿದೆ.

ಜೊಹಾನ್ಸ್‌ಬರ್ಗ್(ಫೆ.19): ದ.ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಎಡಗಾಲಿನ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಭಾರತ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಕದಿನ ಸರಣಿಯ 5ನೇ ಪಂದ್ಯದಲ್ಲಿ ಡಿವಿಲಿಯರ್ಸ್‌ ಕಾಲಿನ ಮಂಡಿಗೆ ಪೆಟ್ಟು ಮಾಡಿಕೊಂಡಿದ್ದರು. ನೋವು ಹೆಚ್ಚಾಗಿದ್ದರಿಂದ ಡಿವಿಲಿಯರ್ಸ್‌ ಶನಿವಾರ ಅಭ್ಯಾಸ ನಡೆಸಿರಲಿಲ್ಲ. ಡಿವಿಲಿಯರ್ಸ್‌ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಂಡದ ವ್ಯವಸ್ಥಾಪಕ ಮೊಹಮ್ಮದ್ ಮೂಸಜೆ ಹೇಳಿದ್ದಾರೆ. 6 ಏಕದಿನ ಪಂದ್ಯಗಳ ಪೈಕಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಎಬಿಡಿ ಕಣಕ್ಕಿಳಿದಿದ್ದರು.

ಎಬಿ ಡಿವಿಲಿಯರ್ಸ್ ಅವರ ಅದ್ಭುತ ಪ್ರದರ್ಶನದಿಂದ ಟೆಸ್ಟ್ ಸರಣಿಯಲ್ಲಿ ಭಾರತ ವಿರುದ್ಧ ಆಫ್ರಿಕಾ 2-1 ಅಂತರದಲ್ಲಿ ಸರಣಿ ಜಯಿಸಿತ್ತು. ಇದೀಗ ಮೊದಲ ಟಿ20 ಸೋತಿರುವ ಹರಿಣಗಳ ಪಡೆಗೆ ಎಬಿಡಿ ಅಲಭ್ಯತೆ ದೊಡ್ಡ ಶಾಕ್ ಉಂಟು ಮಾಡಿದೆ.