ಇಂದು ರಾಜ್'ಕೋಟ್'ನಲ್ಲಿ ಗುಜರಾತ್ ಲಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿದ್ದು, ಎಬಿಡಿ ಸ್ಥಾನದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಬೆಂಗಳೂರು(ಏ.18): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರವಸೆಯ ಆಟಗಾರ ಎಬಿ. ಡಿವಿಲಿಯರ್ಸ್ ಗಾಯದ ಸಮಸ್ಯೆಯಿಂದಾಗಿ ಇಂದು ನಡೆಯಲಿರುವ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಿಂದ ಹೊರಬಿದ್ದಿದ್ದಾರೆ.
ಈ ಬಗ್ಗೆ ಸ್ವತಃ ಎಬಿಡಿ ಅವರೇ ಟ್ವಿಟರ್'ನಲ್ಲಿ ಮಾಹಿತಿಯನ್ನು ಹೊರಹಾಕಿದ್ದು, ನಾನು ಗಾಯದಿಂದ ಇಂದಿನ ಪಂದ್ಯದಿಂದ ಹೊರಗುಳಿಯುತ್ತಿದ್ದೇನೆ. ಆರ್'ಸಿಬಿಗೆ ಒಳ್ಳೆಯದಾಗಲಿ ಎಂದು ಶುಭಕೋರಿದ್ದಾರೆ.
ಆರ್'ಸಿಬಿ ಇಲ್ಲಿಯವರೆಗೆ ತಾನಾಡಿದ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದೆ. ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಎಬಿಡಿ, ನಂತರದ ಮೂರು ಪಂದ್ಯಗಳಲ್ಲಿ ಅಜೇಯ 89, 19 ಹಾಗೂ 29ರನ್ ಬಾರಿಸಿದ್ದಾರೆ.
ಇಂದು ರಾಜ್'ಕೋಟ್'ನಲ್ಲಿ ಗುಜರಾತ್ ಲಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿದ್ದು, ಎಬಿಡಿ ಸ್ಥಾನದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.