ದುಬೈನಲ್ಲಿ ಆರಂಭವಾಗಿರುವ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಫಿಂಚ್ ಕೊನೆಗೂ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 2012ರಲ್ಲಿ ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಫಿಂಚ್, ಅದಾಗಿ 2 ವರ್ಷಗಳ ಬಳಿಕ ಮೆಲ್ಬೋರ್ನ್’ನಲ್ಲಿ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರು. 

ದುಬೈ[ಅ.07]: ಆಸ್ಟ್ರೇಲಿಯಾ ಕ್ರಿಕೆಟ್’ನ ಸೀಮಿತ ಓವರ್’ಗಳ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಆ್ಯರೋನ್ ಫಿಂಚ್ ಪಾಕಿಸ್ತಾನ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡುವುದರೊಂದಿಗೆ ಬಹುದಿನದ ಕನಸೊಂದನ್ನು ನನಸಾಗಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದುಬೈನಲ್ಲಿ ಆರಂಭವಾಗಿರುವ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಫಿಂಚ್ ಕೊನೆಗೂ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 2012ರಲ್ಲಿ ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಫಿಂಚ್, ಅದಾಗಿ 2 ವರ್ಷಗಳ ಬಳಿಕ ಮೆಲ್ಬೋರ್ನ್’ನಲ್ಲಿ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರು. 93 ಏಕದಿನ ಪಂದ್ಯಗಳನ್ನು ಆಡಿದ ಬಳಿಕ ಇದೀಗ ಟೆಸ್ಟ್ ಪಂದ್ಯವಾಡುತ್ತಿದ್ದಾರೆ. ಈ ಮೂಲಕ ಆ್ಯಂಡ್ರೋ ಸೈಮಂಡ್ಸ್[94 ಪಂದ್ಯ] ಅತಿ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ನಂತರ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಕ್ರಿಕೆಟಿಗ ಎನ್ನುವ ಖ್ಯಾತಿಗೆ ಫಿಂಚ್ ಪಾತ್ರರಾಗಿದ್ದಾರೆ.

ಪದಾರ್ಪಣೆ ಪಂದ್ಯದಲ್ಲಿ ವಿಶ್ವದಾಖಲೆ:

ಆ್ಯರೋನ್ ಫಿಂಚ್ ಅಂತರಾಷ್ರೀಯ ಕ್ರಿಕೆಟ್’ನಲ್ಲಿ 4957 ರನ್ ಬಾರಿಸಿದ್ದು, 5 ಸಾವಿರ ರನ್ ಪೂರೈಸಲು ಕೇವಲ 53 ರನ್’ಗಳ ಅವಶ್ಯಕತೆಯಿದೆ. ಈ ಮೂಲಕ ಟೆಸ್ಟ್ ಪದಾರ್ಪಣೆಗೂ ಮುನ್ನ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎನ್ನುವ ವಿಶ್ವದಾಖಲೆ ಇದೀಗ ಫಿಂಚ್ ಪಾಲಾಗಿದೆ.

ಟೆಸ್ಟ್ ಪದಾರ್ಪಣೆಗೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರಿವರು

ಆ್ಯರೋನ್ ಫಿಂಚ್-ಆಸ್ಟ್ರೇಲಿಯಾ-4957 ರನ್

ವಿಲಿಯಂ ಫೋರ್ಟ್’ಫೀಲ್ಡ್-ಐರ್ಲೆಂಡ್-4694 ರನ್

ಪೌಲ್ ಸ್ಟೈರ್ಲಿಂಗ್-ಐರ್ಲೆಂಡ್-4270 ರನ್

ಮೊಹಮ್ಮದ್ ಶೆಹಜಾದ್-ಆಫ್ಘಾನಿಸ್ತಾನ-4270 ರನ್

ಕೆವಿನ್ ಓ’ಬ್ರಿಯಾನ್-ಐರ್ಲೆಂಡ್-3828 ರನ್