ಯಾವ ಟಾಪ್ ಬ್ಯಾಟ್ಸ್’ಮನ್’ಗಳು ಮಾಡದ ಅಪರೂಪದ ದಾಖಲೆ ಫಿಂಚ್ ಮುಡಿಗೆ..!

Aaron Finch Creates a New Record that even many Top Batsman Failed to Achieve
Highlights

ಆರಂಭಿಕ ಬ್ಯಾಟ್ಸ್’ಮನ್ ಆ್ಯರೋನ್ ಫಿಂಚ್ ಹಾಗೂ ಶಾನ್ ಮಾರ್ಶ್ ಆಕರ್ಷಕ ಶತಕದ ಹೊರತಾಗಿಯೂ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲೂ ಆಸ್ಟ್ರೇಲಿಯಾ ಮುಗ್ಗರಿಸಿದೆ.

ಲಂಡನ್[ಜೂ.22]: ಆರಂಭಿಕ ಬ್ಯಾಟ್ಸ್’ಮನ್ ಆ್ಯರೋನ್ ಫಿಂಚ್ ಹಾಗೂ ಶಾನ್ ಮಾರ್ಶ್ ಆಕರ್ಷಕ ಶತಕದ ಹೊರತಾಗಿಯೂ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲೂ ಆಸ್ಟ್ರೇಲಿಯಾ ಮುಗ್ಗರಿಸಿದೆ.
ಆಸ್ಟ್ರೇಲಿಯಾ ನೀಡಿದ್ದ 311 ರನ್’ಗಳ ಗುರಿಯನ್ನು ಇಂಗ್ಲೆಂಡ್ 6 ವಿಕೆಟ್’ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಫಿಂಚ್ ಕೆಲ ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಏನು ಆ ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ..

6. ಆ್ಯರೋನ್ ಫಿಂಚ್ ಏಕದಿನ ಕ್ರಿಕೆಟ್’ನಲ್ಲಿ 11 ಶತಕ ಸಿಡಿಸಿದ್ದಾರೆ. ಆ 11 ಶತಕ ಬಾರಿಸಿದ ಪಂದ್ಯಗಳ ಪೈಕಿ ಆಸ್ಟ್ರೇಲಿಯಾ 6 ಬಾರಿ ಸೋತಿದೆ. ಇದು ಶತಕ ಸಿಡಿಸಿಯೂ ತಂಡವನ್ನು ಗೆಲುವಿನ ದಡ ಸೇರಿಸದ ಬ್ಯಾಟ್ಸ್’ಮನ್ ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೊದಲು ಪಾಂಟಿಂಗ್ 29 ಶತಕ ಸಿಡಿಸಿದ ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಆಸ್ಟ್ರೇಲಿಯಾ ಸೋತಿದೆ.

6. ಫಿಂಚ್ ಏಕದಿನ ಕ್ರಿಕೆಟ್’ನಲ್ಲಿ ಇಂಗ್ಲೆಂಡ್ ವಿರುದ್ಧ 6ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದು ಒಬ್ಬ ಆಟಗಾರು ಇಂಗ್ಲೆಂಡ್ ತಂಡದ ವಿರುದ್ಧ ಬಾರಿಸಿದ ಗರಿಷ್ಠ ಶತಕಗಳಾಗಿವೆ. ಈ ಮೊದಲು ಮಹೇಲಾ ಜಯವರ್ಧನೆ, ರಿಕಿ ಪಾಂಟಿಂಗ್ ಹಾಗೂ ರಾಸ್ ಟೇಲರ್ 5 ಶತಕ ಸಿಡಿಸಿದ್ದರು.

ಇದನ್ನು ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಸೀಸ್ ಕ್ರಿಕೆಟಿಗ ಫಿಂಚ್; ಹೀಗಿತ್ತು ಆ ಕ್ಷಣ

4. ಫಿಂಚ್ ಇಂಗ್ಲೆಂಡ್ ವಿರುದ್ಧ ಬಾರಿಸಿದ 6 ಶತಕಗಳಲ್ಲಿ ಆಸ್ಟ್ರೇಲಿಯಾ ತಂಡವು 4 ಬಾರಿ ಸೋತಿದೆ.   
ಈ ಮೊದಲು ಸಂಗಕ್ಕರ ಭಾರತದ ವಿರುದ್ಧ, ಸಚಿನ್ ತೆಂಡುಲ್ಕರ್ ಪಾಕಿಸ್ತಾನದ ವಿರುದ್ಧ 4 ಏಕದಿನ ಶತಕ ಸಿಡಿಸಿದ್ದರು ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಫಿಂಚ್ ಸಂಗಕ್ಕರ ಮತ್ತು ತೆಂಡುಲ್ಕರ್ ಸಾಧನೆಯನ್ನು ಸರಿಗಟ್ಟಿದ್ದಾರೆ.
 

loader