ಕಾನ್ಪುರ(ಸೆ.21): ತವರಿನಲ್ಲಿಕಳೆದಹದಿನೈದುಟೆಸ್ಟ್ ಸರಣಿಗಳಲ್ಲಿಕೇವಲಒಂದನ್ನಷ್ಟೇಸೋತಿರುವಆತಿಥೇಯಭಾರತ, ಪ್ರವಾಸಿನ್ಯೂಜಿಲೆಂಡ್ ವಿರುದ್ಧದಮೂರುಟೆಸ್ಟ್ ಸರಣಿಯಮೊದಲಐತಿಹಾಸಿಕಪಂದ್ಯಕ್ಕೆಸಜ್ಜಾಗಿನಿಂತಿದ್ದು, ಸರಣಿಯಲ್ಲಿಜಯದಆರಂಭಕಾಣುವವಿಶ್ವಾಸದಲ್ಲಿದೆ.
ಮುಂದಿನಆರುತಿಂಗಳಅವಧಿಯಲ್ಲಿತವರಿನಲ್ಲಿ 13 ಟೆಸ್ಟ್ ಆಡಲಿರುವಭಾರತ, ಕಿವೀಸ್ ವಿರುದ್ಧದಈಸರಣಿಯನ್ನುಗಂಭೀರವಾಗಿಪರಿಗಣಿಸಿದೆ. ಕನ್ನಡಿಗಅನಿಲ್ ಕುಂಬ್ಳೆಟೀಂಇಂಡಿಯಾದನೂತನಕೋಚ್ ಆದನಂತರದಲ್ಲಿನಡೆದವೆಸ್ಟ್‌ಇಂಡೀಸ್ ವಿರುದ್ಧದಟೆಸ್ಟ್ ಪಂದ್ಯಸರಣಿಯನ್ನು 2-0 ಅಂತರದಿಂದಗೆದ್ದಭಾರತ, ಸಹಜವಾಗಿಯೇನ್ಯೂಜಿಲೆಂಡ್ ವಿರುದ್ಧವೂಇದೇಗೆಲುವಿನಅಭಿಯಾನಮುಂದುವರೆಸುವವಿಶ್ವಾಸದಲ್ಲಿದೆ.
ಐತಿಹಾಸಿಕಪಂದ್ಯ
ಇಲ್ಲಿನಗ್ರೀನ್ ಪಾರ್ಕ್ಕ್ರೀಡಾಂಗಣದಲ್ಲಿನಡೆಯಲಿರುವಪಂದ್ಯವುಟೀಂಇಂಡಿಯಾಪಾಲಿಗೆಮಹತ್ವಪೂರ್ಣವೆನಿಸಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 500ನೇಪಂದ್ಯಆಡುತ್ತಿರುವಭಾರತತಂಡದಲ್ಲಿಹಬ್ಬದವಾತಾವರಣನಿರ್ಮಾಣವಾಗಿದೆ. ಈಸಾಧನೆಯೊಂದಿಗೆ 500 ಮತ್ತುಇಲ್ಲವೇಅದಕ್ಕೂಹೆಚ್ಚಿನಪಂದ್ಯಗಳನ್ನಾಡಿದವಿಶ್ವದನಾಲ್ಕನೇರಾಷ್ಟ್ರಎಂಬಕೀರ್ತಿಗೆಭಾರತಭಾಜನವಾಗಲಿದೆ. ವೆಸ್ಟ್‌ಇಂಡೀಸ್ (517), ಆಸ್ಪ್ರೇಲಿಯಾ (791) ಮತ್ತುಇಂಗ್ಲೆಂಡ್ (976) ಅತಿಹೆಚ್ಚುಟೆಸ್ಟ್ ಆಡಿರುವಮೊದಲಮೂರುರಾಷ್ಟ್ರಗಳು. ಅಂದಹಾಗೆಭಾರತತಂಡದಈಚಾರಿತ್ರಿಕಟೆಸ್ಟ್ ಪಂದ್ಯಕ್ಕೆಎಲ್ಲಮಾಜಿನಾಯಕರುಗಳನ್ನುಬಿಸಿಸಿಐಆಹ್ವಾನಿಸಿದ್ದು, ಭಾರತಕ್ರಿಕೆಟ್‌ಗೆಕೊಡುಗೆನೀಡಿದದಿಗ್ಗಜರೆಲ್ಲಾಇದಕ್ಕೆಸಾಕ್ಷಿಯಾಗಲಿದ್ದಾರೆ. ಇದೇಗ್ರೀನ್ ಪಾರ್ಕ್ನಲ್ಲಿಭಾರತ 22 ಪಂದ್ಯಗಳನ್ನಾಡಿದ್ದು, 6ರಲ್ಲಿಗೆಲುವುಕಂಡಿದ್ದರೆ, 3ರಲ್ಲಿಸೋತಿದೆ. ಅಂದಹಾಗೆಪಿಚ್ ಸಂಪೂರ್ಣತಿರುವುಮತ್ತುಸ್ವಿಂಗ್‌ನಿಂದಕೂಡಿರಲಿದೆಎಂದುಪಿಚ್ ಕ್ಯುರೇಟರ್ ಹೇಳಿದ್ದಾರೆ.
ಭಾರತದಪ್ರಭುತ್ವ
ಭಾರತದಲ್ಲಿನ್ಯೂಜಿಲೆಂಡ್ ಇಲ್ಲೀವರೆಗೆ 31 ಪಂದ್ಯಗಳನ್ನಾಡಿದ್ದು, ಈಪೈಕಿ 13ರಲ್ಲಿಸೋಲನುಭವಿಸಿದರೆ, 2ರಲ್ಲಿಗೆಲುವುಸಾಧಿಸಿದೆ. ಅಂತೆಯೇಮಿಕ್ಕ 16 ಪಂದ್ಯಗಳುಡ್ರಾಕಂಡಿವೆ. ಇನ್ನುತವರಿನಲ್ಲಿಕಿವೀಸ್ ಎದುರುಭಾರತ 13 ಪಂದ್ಯಗಳನ್ನುಗೆದ್ದುಪ್ರಭುತ್ವಮೆರೆದಿದೆ. ನಾಲ್ಕುವರ್ಷಗಳಹಿಂದೆಭಾರತಪ್ರವಾಸಕೈಗೊಂಡಿದ್ದನ್ಯೂಜಿಲೆಂಡ್ ವಿರುದ್ಧಎಂ.ಎಸ್. ಧೋನಿಸಾರಥ್ಯದಟೀಂಇಂಡಿಯಾಎರಡುಟೆಸ್ಟ್ ಸರಣಿಯನ್ನುಗೆದ್ದಿತ್ತು.
ಭರವಸೆಯಲ್ಲಿಕೊಹ್ಲಿ
ಇನ್ನುಕೆರಿಬಿಯನ್ ಪ್ರವಾಸದಲ್ಲಿವೃತ್ತಿಬದುಕಿನಚೊಚ್ಚಲದ್ವಿಶತಕಬಾರಿಸಿಮಿಂಚುಹರಿಸಿದವಿರಾಟ್ ಕೊಹ್ಲಿತವರಿನಲ್ಲಿನಸರಣಿಯಲ್ಲಿಯೂಇದೇಆಕರ್ಷಕಬ್ಯಾಟಿಂಗ್ ಮುಂದುವರೆಸುವಭರವಸೆಯಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದಏಳುಇನ್ನಿಂಗ್ಸ್‌ಗಳಲ್ಲಿಐದುಬಾರಿ 50+ ರನ್ ಸೇರಿದಂತೆ 85.20ರಸರಾಸರಿಯಲ್ಲಿಕೊಹ್ಲಿ 426 ರನ್ ದಾಖಲಿಸಿದ್ದಾರೆ. ಅವರೊಂದಿಗೆಕನ್ನಡಿಗಕೆ.ಎಲ್. ರಾಹುಲ್ ಕಿವೀಸ್ ಸರಣಿಯಲ್ಲಿಪ್ರಮುಖಪಾತ್ರವಹಿಸಲುಸಜ್ಜಾಗಿದ್ದಾರೆ. ಇನ್ನುಬೌಲಿಂಗ್‌ನಲ್ಲಿಸ್ಪಿನ್ ಮಾಂತ್ರಿಕಆರ್. ಅಶ್ವಿನ್ ಕಿವೀಸ್ ವಿರುದ್ಧದನಾಲ್ಕುಇನ್ನಿಂಗ್ಸ್‌ಗಳಲ್ಲಿಮೂರುಬಾರಿ 5 ವಿಕೆಟ್ ಸಾಧನೆಯಲ್ಲದೆ, 13.11ರಸರಾಸರಿಯಲ್ಲಿ 18 ವಿಕೆಟ್ ಗಳಿಸಿದ್ದಾರೆ. ಅಶ್ವಿನ್ ಜತೆಗೆರವೀಂದ್ರಜಡೇಜಾಕೂಡಕಿವೀಸ್‌ಗೆಸವಾಲಾಗಿಪರಿಣಮಿಸುವಸಂಭವವಿದೆ.
ಸ್ಪಿನ್‌ಗೆದಿಟ್ಟಉತ್ತರದನಿರೀಕ್ಷೆ
ಯುವಹಾಗೂಅನುಭವಿಆಟಗಾರರನ್ನುಒಳಗೊಂಡಿರುವನ್ಯೂಜಿಲೆಂಡ್ ಈಬಾರಿಭಾರತದವಿರುದ್ಧಪಕ್ಕಾಲೆಕ್ಕಾಚಾರದಆಟಕ್ಕೆಒತ್ತುನೀಡಿದೆ. ಎಲ್ಲಕ್ಕಿಂತಮಿಗಿಲಾಗಿಭಾರತದಪ್ರಬಲಸ್ಪಿನ್ ಬೌಲಿಂಗ್‌ಗೆದಿಟ್ಟಉತ್ತರನೀಡಲುಕಿವೀಸ್ ನಿರ್ಧರಿಸಿದೆ. ನಾಯಕಕೇನ್ ವಿಲಿಯಮ್ಸನ್ ಅಲ್ಲದೆನೀಲ್ ವಾಗ್ನರ್, ಟಿಮ್ ಸೌಥೀ, ಟ್ರೆಂಟ್ ಬೌಲ್ಟ್, ಇಶ್ ಸೋಧಿಸೇರಿದಂತೆಇನ್ನೂಅನೇಕರುಐಪಿಎಲ್‌ನಲ್ಲಿಆಡಿದ್ದುಇಲ್ಲಿನವಾತಾವರಣಕ್ಕೆಹೊಂದಿಕೊಂಡುಆಡುವವಿಶ್ವಾಸದಲ್ಲಿದ್ದಾರೆ. ಇನ್ನುಇತ್ತೀಚಿನಟೂರ್ನಿಗಳಲ್ಲಿಕಳಪೆಫಾಮ್‌ರ್‍ನಲ್ಲಿರುವಮಾರ್ಟಿನ್ ಗುಪ್ಟಿಲ್ ಲಯಕಂಡುಕೊಳ್ಳಬೇಕಾದಒತ್ತಡದಲ್ಲಿದ್ದರೆ, ಅನುಭವಿಆಟಗಾರರಾಸ್ ಟೇಲರ್ ನ್ಯೂಜಿಲೆಂಡ್‌ಗೆಬಲತುಂಬಬೇಕಿದೆ.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಲೋಕೇಶ್ ರಾಹುಲ್, ಶಿಖರ್ ಧವನ್, ಚೇತೇಶ್ವರಪೂಜಾರ, ಅಜಿಂಕ್ಯರಹಾನೆ, ಮುರಳಿವಿಜಯ್, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್, ವೃದ್ಧಿಮಾನ್ ಸಾಹ, ರವೀಂದ್ರಜಡೇಜಾ, ಮೊಹಮದ್ ಶಮಿ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾಮತ್ತುಉಮೇಶ್ ಯಾದವ್.
ನ್ಯೂಜಿಲೆಂಡ್:ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಡಗ್ ಬ್ರಾಸ್‌ವೆಲ್, ಮಾರ್ಕ್ಕ್ರೆಗ್, ಮಾರ್ಟಿನ್ ಗುಪ್ಟಿಲ್, ಟಾಮ್ ಲಾಥಮ್, ಜಿಮ್ಮಿನೀಶಮ್, ಹೆನ್ರಿನಿಕೋಲಸ್, ಲೂಕ್ ರೊಂಚಿ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಮ್ಯಾಟ್ ಹೆನ್ರಿ, ರಾಸ್ ಟೇಲರ್, ನೀಲ್ ವಾಗ್ನರ್ ಮತ್ತುಬಿ.ಜೆ. ವಾಟ್ಲಿಂಗ್.
ಪಂದ್ಯಆರಂಭ:ಮುಂಜಾನೆ 9.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
