Asianet Suvarna News Asianet Suvarna News

ಚಹಾ ಅಂಗಡಿಯಿಂದ ಕ್ರಿಕೆಟ್ ಮೈದಾನದವರೆಗೆ...!: IPL ಬಿಡ್ಡಿಂಗ್'ನಲ್ಲಿ ಈ ಕ್ರಿಕೆಟಿಗನಿಗೆ ಸಿಕ್ಕಿದ್ದು 3 ಕೋಟಿ!

ಥಂಗರಾಸೂ ನಟರಾಜನ್, ಈ ಕ್ರಿಕೆಟಿಗನ ಹೆಸರನ್ನು ನೀವು ಯಾವತ್ತಾದರೂ ಕೇಳಿದ್ದೀರಾ? ಬಹುಶಃ ಬಹುತೇಕ ಮಂದಿ ಈ ಹೆಸರು ಕೇಳಿರಲಿಕ್ಕಿಲ್ಲ, ನಟರಾಜನ್'ನನ್ನು ಕೆಲವರಷ್ಟೇ ಬಲ್ಲವರಿರಬಹುದು. ಆದರೆ ಇದೀಗ ಈ ಕ್ರಿಕೆಟಿಗ IPL ನಲ್ಲಿ ಮ್ಯಾಜಿಕ್ ಮಾಡಲು ಸಜ್ಜಾಗಿದ್ದಾರೆ. ಯಾಕೆಂದರೆ ತಮಿಳುನಾಡಿನ ಈ ಕ್ರಿಕೆಟಿಗನನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಮೂರು ಕೋಟಿಗೆ ಖರೀದಿಸಿದೆ. ಒಂದೆಡೆ ಕ್ರಿಕೆಟ್ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ದಿಗ್ಗಜರೇ ಈ ಬಾರಿಯ IPLನಲ್ಲಿ ಬಿಕರಿಯಾಗಿಲ್ಲವೆಂದಾದರೆ, ಇತ್ತ ಜನರಿಗೆ ಹೊಸಬರಾಗಿರುವ ಥಂಗರಾಸೂ ನಟರಾಜನ್ ಬರೋಬ್ಬರಿ 3 ಕೋಟಿಗೆ ಬಿಕರಿಯಾಗಿದ್ದಾನೆ. ಈತನ ಬೇಸ್ ಪ್ರೈಸ್ 50 ಲಕ್ಷವಿತ್ತಾದರೂ, ಬಿಡ್ಡಿಂಗ್'ನಲ್ಲಿ ಇವರ ಹೆಸರು ಬರುತ್ತಿದ್ದಂತೆಯೇ KKR ತಂಡದ ಪರವಾಗಿ ವಿರೇಂದ್ರ ಸೆಹ್ವಾಗ್ ನಟರಾಜನ್'ನನ್ನು 3 ಕೋಟಿಗೆ ಖರೀದಿಸಿದ್ದಾರೆ.

A Journey Of Natarajan From Tea Stoll To Cricket Ground

ನವದೆಹಲಿ(ಫೆ.21): ಥಂಗರಾಸೂ ನಟರಾಜನ್, ಈ ಕ್ರಿಕೆಟಿಗನ ಹೆಸರನ್ನು ನೀವು ಯಾವತ್ತಾದರೂ ಕೇಳಿದ್ದೀರಾ? ಬಹುಶಃ ಬಹುತೇಕ ಮಂದಿ ಈ ಹೆಸರು ಕೇಳಿರಲಿಕ್ಕಿಲ್ಲ, ನಟರಾಜನ್'ನನ್ನು ಕೆಲವರಷ್ಟೇ ಬಲ್ಲವರಿರಬಹುದು. ಆದರೆ ಇದೀಗ ಈ ಕ್ರಿಕೆಟಿಗ IPL ನಲ್ಲಿ ಮ್ಯಾಜಿಕ್ ಮಾಡಲು ಸಜ್ಜಾಗಿದ್ದಾರೆ. ಯಾಕೆಂದರೆ ತಮಿಳುನಾಡಿನ ಈ ಕ್ರಿಕೆಟಿಗನನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಮೂರು ಕೋಟಿಗೆ ಖರೀದಿಸಿದೆ. ಒಂದೆಡೆ ಕ್ರಿಕೆಟ್ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ದಿಗ್ಗಜರೇ ಈ ಬಾರಿಯ IPLನಲ್ಲಿ ಬಿಕರಿಯಾಗಿಲ್ಲವೆಂದಾದರೆ, ಇತ್ತ ಜನರಿಗೆ ಹೊಸಬರಾಗಿರುವ ಥಂಗರಾಸೂ ನಟರಾಜನ್ ಬರೋಬ್ಬರಿ 3 ಕೋಟಿಗೆ ಬಿಕರಿಯಾಗಿದ್ದಾನೆ. ಈತನ ಬೇಸ್ ಪ್ರೈಸ್ 50 ಲಕ್ಷವಿತ್ತಾದರೂ, ಬಿಡ್ಡಿಂಗ್'ನಲ್ಲಿ ಇವರ ಹೆಸರು ಬರುತ್ತಿದ್ದಂತೆಯೇ KKR ತಂಡದ ಪರವಾಗಿ ವಿರೇಂದ್ರ ಸೆಹ್ವಾಗ್ ನಟರಾಜನ್'ನನ್ನು 3 ಕೋಟಿಗೆ ಖರೀದಿಸಿದ್ದಾರೆ.

ಕಠಿಣ ಪರಿಶ್ರಮಪಟ್ಟ ಕ್ರಿಕೆಟಿಗ ನಟರಾಜನ್

ನಟರಾಜನ್ ಓರ್ವ ಕ್ರಿಕೆಟಿಗನಾಗಲು ಕಠಿಣ ಪರಿಶ್ರಮಪಟ್ಟಿದ್ದಲ್ಲದೆ ಹಲವಾರು ಸಂಘರ್ಷಗಳನ್ನೆದುರಿಸಿದ್ದಾರೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಉತ್ತಮ ಸ್ಥಳದಲ್ಲಿ ಟ್ರೈನಿಂಗ್ ಪಡೆಯುವ ಅವಕಾಶ ನಟರಾಜನ್'ಗೆ ಲಭಿಸಿರಲಿಲ್ಲ. ಇವನ ತಂದೆ ಓರ್ವ ಕೂಲಿ ಕಾರ್ಮಿಕನಂತೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಚಹಾ ಅಂಗಡಿಯನ್ನು ನಡೆಸುತ್ತಿದ್ದಾರೆ. ಪ್ರಾರಂಭದಲ್ಲಿ ನಟರಾಜನ್ ಕೂಡಾ ತಾಯಿಯೊಂದಿಗೆ ಚಹಾ ಅಂಗಡಿಯಲ್ಲಿ ಕೆಲಸ ಮಾಡಿ, ಹೆತ್ತವರಿಗೆ ಸಹಾಯ ಮಾಡುತ್ತಿದ್ದರು. ಇಷ್ಟೇ ಅಲ್ಲದೆ ಮನೆ ಮನೆಗೆ ಹಾಲು ಹಾಗೂ ಪೇಪರ್ ಹಾಕುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದರು. ಆದರೆ ಕ್ರಿಕೆಟಿಗನಾಗುವ ಕನಸು ಕಂಡಿದ್ದ ನಟರಾಜನ್ ಇಂತಹ ಪರಿಸ್ಥಿತಿಯಲ್ಲೂ ಪರಿಶ್ರಮಪಟ್ಟು ತನ್ನ ಕನಸನ್ನು ನನಸಾಗಿಸಿದ್ದಾರೆ. ಈ ಮೂಲಕ ಜೀವನದಲ್ಲಿ ಎದುರಾಗಿದ್ದ ಎಲ್ಲಾ ಅಡಚಣೆಗಳ ವಿರುದ್ಧ ಹೋರಾಡಿ ಗೆದ್ದಿದ್ದಾರೆ.

ಟೆನಿಸ್ ಬಾಲ್ ಕ್ರಿಕೆಟ್'ನಿಂದ ಆರಂಭ

ಪ್ರಾರಂಭದಲ್ಲಿ ಲೋಕಲ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯ ಆಡುತ್ತಿದ್ದ ನಟರಾಜನ್ ಮೊದಲು ಕೇವಲ ಕ್ರಿಕೆಟ್ ಮೇಲಿನ ಪ್ರೀತಿಯಿಂದ ಆಡುತ್ತಿದ್ದರು. ಈ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯದಲ್ಲಿ ನಟರಾಜನ್ ಓರ್ವ ಅದ್ಭುತ ಬೌಲರ್ ಆಗಿ ಹೆಸರು ಪಡೆದುಕೊಂಡರು. ಇನ್ನು 18ರ ಹರೆಯದಲ್ಲಿ ಈತ ಲೆದರ್ ಬಾಲ್'ನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ ನಟರಾಜನ್, ಇದನ್ನೇ ಮುಂದುವರೆಸಿ 2011-12ರಲ್ಲಿ ಕ್ರಿಕೆಟಿಗನಾಗುವ ಕನಸಿನೊಂದಿಗೆ ಚೆನ್ನೈಗೆ ಶಿಫ್ಟ್ ಆದರು. ಇಲ್ಲಿ ಬಿಎಸ್'ಎನ್'ಎಲ್ ಪರವಾಗಿ ಆಡಲಾರಂಭಿಸಿ ತನ್ನ ಮಾರಕ ಬೌಲಿಂಗ್'ನಿಂದ ಪ್ರತಿಯೊಬ್ಬರ ಗಮನಸೆಳೆದರು. ನಟರಾಜನ್ ಅದ್ಭುತ ಯಾರ್ಕರ್ ಎಸೆತಕ್ಕೆ ಫೇಮಸ್ ಆಗಿದ್ದಾರೆ.

ಶಂಕಿತ ಬೌಲಿಂಗ್ ಆ್ಯಕ್ಷನ್'ನಿಂದಾಗಿ ಹೊರ ಬೀಳಬೇಕಾಯ್ತು!

ದಿನಗಳೆದಂತೆ ನಟರಾಜನ್ ಅದ್ಭುತ ಪ್ರದರ್ಶನ ನೀಡಲಾರಂಭಿಸಿರು, ಹೀಗಾಗಿ 2015ರ ತಮಿಳುನಾಡಿನ ರಣಜಿ ತಂಡಕ್ಕೆ ನಟರಾಜನ್'ನನ್ನು ಆಯ್ಕೆ ಮಾಡಲಾಗಿತ್ತು. 2015ರ ಜನವರಿ 5 ರಂದು ಬಂಗಾಳ ತಂಡದ ವಿರುದ್ಧ ತನ್ನ ಚೊಚ್ಚಲ ಪ್ರಥಮ ಶ್ರೇಣಿ ಪಂದ್ಯವನ್ನಾಡಿದ ನಟರಾಜನ್ ಈ ಪಂದ್ಯದ ಮೊದಲ ಇನ್ನಿಂಗ್ಸ್'ನಲ್ಲೇ ವಿರೋಧಿಗಳ ಮೂರು ವಿಕೆಟ್ ಕಸಿದುಕೊಂಡಿದ್ದರು. ಆದರೆ ಈ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ ಯಾಕೆಂದರೆ ಶಂಕಿತ ಬೌಲಿಂಗ್'ನಿಂದಾಗಿ ಇವರನ್ನು ತಂಡದಿಂದ ಹೊರಗಿಡಲಾಯಿತು. ಈ ಸಂದರ್ಭದಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲೇ ಕ್ರಿಕೆಟ್ ವೃತ್ತಿ ಜೀವನ ಕೊನೆಗಾಣಲಿದೆ ಎಂಬ ಭಾವನೆ ನಟರಾಜನ್'ರ ಮನಸು ಹೊಕ್ಕಿತ್ತು. ಹೀಗಾಗಿ ಮನೆಗೆ ಹಿಂತಿರುಗಿ ತಂದೆ ತಾಯಿಗೆ ಸಹಾಯ ಮಾಡುವ ನಿರ್ಧಾರವನ್ನೂ ತೆಗೆದುಕೊಂಡಿದ್ದರು. ಇದೇ ಸಮಯದಲ್ಲಿ ನಟರಾಜನ್'ರನ್ನು ಸಮಾಧಾನಪಡಿಸಿದ ಕೋಚ್, ಅವರ ಬೌಲಿಂಗ್ ಶೈಲಿಯನ್ನು ಸುಧಾರಿಸಲು ಸಹಾಯ ಮಾಡಿದರು.

ಒಂದು ವರ್ಷದ ಬಳಿಕ ತಂಡಕ್ಕೆ ಮರಳಿದ ನಟರಾಜನ್

ಸುಮಾರು ಒಂದು ವರ್ಷ ಕ್ರಿಟೆಟ್ ಲೋಕದಿಂದ ದೂರವಿದ್ದ ನಟರಾಜನ್'ಗೆ ಮತ್ತೊಮ್ಮೆ ತಮಿಳುನಾಡು ಪ್ರೀಮಿಯರ್ ಲೀಗ್'ನಲ್ಲಿ ಅವಕಾಶ ಸಿಕ್ಕಿತು. ಡಿಂಡೀಗುಲ್ ಡ್ರ್ಯಾಗನ್ ಪರವಾಗಿ ಆಟವಾಡಲು ಆರಂಭಿಸಿದ ನಟರಾಜನ್, ಆ ಲೀಗ್'ನ 7 ಪಂದ್ಯಗಳಲ್ಲಿ ಒಟ್ಟು 10 ವಿಕೆಟ್ ಕಬಳಿಸಿದ್ದರು. ಮುಂದೆ 2016-17 ಸೆಷನ್'ನಲ್ಲಿ ತಮಿಳುನಾಡು ರಣಜಿ ತಂಡದಲ್ಲಿ ಆಡಲು ನಟರಾಜನ್'ನನ್ನು ಮತ್ತೊಮ್ಮೆ ಆಯ್ಕೆ ಮಾಡಲಾಯ್ತು.

ಸುಮಾರು 21 ತಿಂಗಳುಗಳ ಬಳಿಕ ನಟರಾಜನ್ ತನ್ನ ಎರಡನೇ ರಣಜಿ ಟ್ರೋಫಿ ಪಂದ್ಯವನ್ನಾಡಿದರು. ಅಕ್ಟೋಬರ್ 13ರಂದು ರೈಲ್ವೇ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ ನಟರಾಜನ್ 6 ವಿಕೆಟ್ ಕಸಿದುಕೊಂಡಿದ್ದರು. ತಮಿಳುನಾಡು ಈ ಪಂದ್ಯದಲ್ಲಿ 174 ರನ್'ಗಳ ಗೆಲುವು ಸಾಧಿಸಿತ್ತು. ಅಕ್ಟೋಬರ್ 20ರಂದು ುತ್ತರ ಪ್ರದೇಶದ ವಿರುದ್ಧ ನಡೆದ ಪಂದ್ಯದಲ್ಲೂ ತನ್ನ ಮಾರಕ ಬೌಲಿಂಗ್'ನಿಂದಾಗಿ 4 ವಿಕೆಟ್ ಕಬಳಿಸಿದ್ದರು.

ತಮಿಳುನಾಡಿನ ಥಂಗರಾಸೂ ನಟರಾಜನ್ ಈವರೆಗೆ 9 ಪ್ರಥಮ ಶ್ರೇಣಿ ಪಂದ್ಯಗಳನ್ನಾಡಿದ್ದು, ಸುಮಾರು 33 ರ ಸರಾಸರಿಯಲ್ಲಿ 27 ವಿಕೆಟ್'ಗಳನ್ನು ಕಬಳಿಸಿದ್ದಾರೆ. ಇನ್ನು ಟಿ-20 ಪಂದ್ಯದ ಕುರಿತಾಗಿ ಹೇಳಬೇಕೆಂದರೆ ಒಟ್ಟು 5 ಪಂದ್ಯಗಳಲ್ಲಿ 4 ವಿಕೆಟ್ ಇವರ ಪಾಲಾಗಿದೆ.

Follow Us:
Download App:
  • android
  • ios