Asianet Suvarna News Asianet Suvarna News

ವಿರಾಟ್ ಹ್ಯಾಟ್ರಿಕ್ ಶತಕ : 3 ಶತಕ ಬಾರಿಸಿದ ಮೊದಲ ಭಾರತೀಯ

ವಿಶ್ವದಲ್ಲಿ ಈ ಸಾಧನೆ ಮಾಡಿದ 10ನೇ ಆಟಗಾರರಲ್ಲಿ ಕೊಹ್ಲಿ ಹೆಸರು ಸೇರ್ಪಡೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ 5 ಏಕದಿನ ಪಂದ್ಯಗಳ ಸರಣಿ ಆಡುತ್ತಿರುವ ಟೀಂ ಇಂಡಿಯಾ ಆಟಗಾರ ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 140, ವಿಶಾಖಪಟ್ಟಣದಲ್ಲಿ ಅಜೇಯ 157, ಈಗ ಪುಣೆಯಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ  107 ರನ್ ಬಾರಿಸಿ ಹ್ಯಾಟ್ರಿಕ್ ವೀರರಾಗಿದ್ದಾರೆ. 

A hat-trick of centuries for King Kohli
Author
Bengaluru, First Published Oct 27, 2018, 9:10 PM IST

ಪುಣೆ[27]: ಭಾರತ ಕ್ರಿಕೆಟ್ ತಂಡದ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ಹಲವು ದಾಖಲೆಗಳಿಗೆ ಮತ್ತೊಂದನ್ನು ಸೇರ್ಪಡೆಗೊಳಿಸಿದ್ದಾರೆ. ಸತತ ಮೂರು ಶತಕ ಶತಕ ಬಾರಸಿದ ಮೊದಲ ಭಾರತೀಯ ಆಟಗಾರನೆಂಬ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. 

ವಿಶ್ವದಲ್ಲಿ ಈ ಸಾಧನೆ ಮಾಡಿದ 10ನೇ ಆಟಗಾರರಲ್ಲಿ ಕೊಹ್ಲಿ ಹೆಸರು ಸೇರ್ಪಡೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ 5 ಏಕದಿನ ಪಂದ್ಯಗಳ ಸರಣಿ ಆಡುತ್ತಿರುವ ಟೀಂ ಇಂಡಿಯಾ ಆಟಗಾರ ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 140, ವಿಶಾಖಪಟ್ಟಣದಲ್ಲಿ ಅಜೇಯ 157, ಈಗ ಪುಣೆಯಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ 107 ರನ್ ಬಾರಿಸಿ ಹ್ಯಾಟ್ರಿಕ್ ವೀರರಾಗಿದ್ದಾರೆ.

ಇದು ವಿರಾಟ್ ಏಕದಿನ ವೃತ್ತಿ ಜೀವನದ 38ನೇ ಶತಕ. 2ನೇ ಏಕದಿನ ಪಂದ್ಯದಲ್ಲಿ 10 ಸಾವಿರ್ ರನ್ ಪೂರೈಸಿ ಹೊಸ ದಾಖಲೆ ಬರೆದಿದ್ದರು. 3ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ನೀಡಿರುವ 283 ರನ್ ಸವಾಲಿಗೆ ಭಾರತ ಇತ್ತೀಚಿನ ವರದಿಗಳಂತೆ 43.3 ಓವರ್ ನಷ್ಟಕ್ಕೆ 225/ 8 ರನ್ ಗಳಿಸಿ ಸೋಲಿನಂಚಿಗೆ ತಲುಪಿದೆ.

Follow Us:
Download App:
  • android
  • ios