Asianet Suvarna News Asianet Suvarna News

ರವಿಶಾಸ್ತ್ರಿ ಬದಲಿಸುವುದೇ ಒಳ್ಳೆಯದು ಎಂದ ರಾಬಿನ್ ಸಿಂಗ್

ಟೀಂ ಇಂಡಿಯಾ ಕೋಚ್ ಹುದ್ದೆ ಮೇಲೆ ಕಣ್ಣಿಟ್ಟಿರುವ ಮಾಜಿ ಆಲ್ರೌಂಡರ್ ರಾಬಿನ್ ಸಿಂಗ್ ಇದೀಗ ಹಾಲಿ ಕೋಚ್ ರವಿಶಾಸ್ತ್ರಿ ಕಾಲೆಳೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

A change could be good for the side says Robin Singh
Author
Mumbai, First Published Jul 29, 2019, 4:06 PM IST

ನವದೆಹಲಿ(ಜು.29): ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ರಾಬಿನ್ ಸಿಂಗ್, ಭಾರತದ ಹಾಲಿ ಕೋಚ್ ರವಿಶಾಸ್ತ್ರಿ ಕಾಲೆಳೆದಿದ್ದು, ಶಾಸ್ತ್ರಿ ಮಾರ್ಗದರ್ಶನದಲ್ಲೇ ಭಾರತ ಸತತ ಎರಡು ಬಾರಿ ಸೆಮಿಫೈನಲ್‌ನಲ್ಲಿ ಸೋಲನ್ನನುಭವಿಸಿದೆ. ಹೀಗಾಗಿ ತಂಡದ ಹಿತಾದೃಷ್ಟಿಯಿಂದ ಕೋಚಿಂಗ್ ಸಿಬ್ಬಂದಿಯನ್ನು ಬದಲಿಸುವುದು ಒಳ್ಳೆಯದು ಎಂದಿದ್ದಾರೆ.

ಟೀಂ ಇಂಡಿಯಾ ಫೀಲ್ಡಿಂಗ್‌ ಕೋಚ್‌ ರೇಸಲ್ಲಿ ಜಾಂಟಿ ರೋಡ್ಸ್

ಪ್ರಸ್ತುತ ಕೋಚ್ ಮಾರ್ಗದರ್ಶನದಡಿಯಲ್ಲಿ ಭಾರತ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಬಾರಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದೆ, ಹಾಗೆಯೇ ಕಳೆದ ನಾಲ್ಕು ವಿಶ್ವ ಟಿ20 ಚಾಂಪಿಯನ್'ಶಿಪ್‌ನಲ್ಲಿಯೂ ಮುಗ್ಗರಿಸಿದೆ. ಹೀಗಾಗಿ ನಾವೀಗ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಸಜ್ಜಾಗಬೇಕಾಗಿದೆ ಎಂದು ಹೇಳಿದ್ದಾರೆ.

ಕೋಚ್ ಆಯ್ಕೆ: ಕೊಹ್ಲಿ ಮಾತಿಗಿಲ್ಲ ಮನ್ನಣೆ..?

2015ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್'ನಲ್ಲಿ ಟೀಂ ಇಂಡಿಯಾವು ಆಸ್ಟ್ರೇಲಿಯಾ ವಿರುದ್ದ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇನ್ನು 2019ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲೂ ಭಾರತ ತಂಡವು ನ್ಯೂಜಿಲೆಂಡ್‌ಗೆ ಶರಣಾಗಿತ್ತು.

ಕಪಿಲ್‌ ನೇತೃತ್ವದಲ್ಲಿ ಟೀಂ ಇಂಡಿಯಾ ಕೋಚ್‌ ಆಯ್ಕೆ?

ರಾಬಿನ್ ಸಿಂಗ್ ಕೂಡಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಈ ಮೊದಲು 2007 ರಿಂದ 2009ರವರೆಗೂ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಕೆಲಸ ಮಾಡಿದ ಅನುಭವವಿದೆ. ಈ ಅವಧಿಯಲ್ಲಿ ಭಾರತ ತಂಡವು ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. ಅಲ್ಲದೇ 2007ರಲ್ಲಿ ನಡೆದ ಚೊಚ್ಚಲ ವಿಶ್ವಕಪ್ ಟೂರ್ನಿಯನ್ನು ಭಾರತ ಜಯಿಸಿತ್ತು. ಅಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ ಮೊಟ್ಟಮೊದಲ ಬಾರಿಗೆ ತ್ರಿಕೋನ ಸರಣಿ ಗೆದ್ದು ಮೆರೆದಾಡಿತ್ತು.

ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಮಾಜಿ ಕ್ರಿಕೆಟಿಗ ಅನ್ಶುಮಾನ್ ಗಾಯಕ್‌ವಾಡ್ ಮತ್ತು ಶಾಂತಾ ರಂಗಸ್ವಾಮಿ, ಕಪಿಲ್ ದೇವ್ ನೇತೃತ್ವದ ಸಮಿತಿ ನೂತನ ಕೋಚ್ ಆಯ್ಕೆ ಮಾಡಲಿದೆ.

 

Follow Us:
Download App:
  • android
  • ios