ಬೆಂಗಳೂರು(ಮಾ.10): ವಿಶ್ವದ ಶೇ.86ರಷ್ಟುಕ್ರಿಕೆಟ್‌ ಅಭಿಮಾನಿಗಳು ಸೀಮಿತ ಓವರ್‌ (ಏಕದಿನ, ಟಿ20)ಗಿಂತ ಟೆಸ್ಟ್‌ ಕ್ರಿಕೆಟ್‌ ವೀಕ್ಷಿಸಲು ಇಚ್ಛಿಸುತ್ತಾರೆ ಎಂದು ಮ್ಯಾರಿಲ್ಬೋನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ನಡೆಸಿರುವ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 

ಸೌತ್ಆಫ್ರಿಕಾದಲ್ಲಿ ಟೆಸ್ಟ್ ಸರಣಿಗೆ ಗೆದ್ದ ಏಷ್ಯಾದ ಮೊದಲ ತಂಡ ಶ್ರೀಲಂಕಾ!

ಕ್ರಿಕೆಟ್‌ನ ಅತಿ ಹಳೆಯ ಮಾದರಿ ಅಳಿವಿನತ್ತ ಸಾಗಿದೆ ಎನ್ನುವ ಆತಂಕವನ್ನು ಈ ಸಮೀಕ್ಷೆ ದೂರವಾಗಿಸಿದೆ. ‘ಎಂಸಿಸಿ ಟೆಸ್ಟ್‌ ಕ್ರಿಕೆಟ್‌ ಸಮೀಕ್ಷೆ’ ಹೆಸರಿನಲ್ಲಿ 100 ದೇಶಗಳ ಸುಮಾರು 13000 ಅಭಿಮಾನಿಗಳಿಂದ ಅಭಿಪ್ರಾಯ ಸಂಗ್ರಹಿಸಿ, ವರದಿ ಪ್ರಕಟಿಸಲಾಗಿದೆ. 

ಸಮೀಕ್ಷೆ ವೇಳೆ ಟೆಸ್ಟ್‌ ಕ್ರಿಕೆಟ್‌ ಮತ್ತಷ್ಟು ಜನಪ್ರಿಯಗೊಳಿಸಲು ಸಲಹೆಗಳನ್ನು ಸಂಗ್ರಹಿಸಿದ್ದು, ಅನೇಕರು ಟಿಕೆಟ್‌ ದರಗಳ ಕಡಿತ ಹಾಗೂ ಅರ್ಧದಿನದ ಟಿಕೆಟ್‌ ಮಾರಾಟದ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಕಳೆದ ವರ್ಷ ಎಂಸಿಸಿ ನಡೆಸಿದ್ದ ಸಮೀಕ್ಷೆಯಿಂದ ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಕ್ರಿಕೆಟ್‌ ಅಭಿಮಾನಿಗಳಿದ್ದಾರೆ ಎನ್ನುವುದು ತಿಳಿದುಬಂದಿತ್ತು.