ಪಿವಿ ಸಿಂಧು ಮದುವೆ ಮಾಡ್ಕೋಡಿ..ಇಲ್ಲಾ ಕಿಡ್ನಾಪ್ ಮಾಡ್ತೇನೆ/ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ 70 ರ ವೃದ್ಧ/ ಜಿಲ್ಲಾಡಳಿತವೇ ಮದುವೆ ಮಾಡಿಸಬೇಕು

ಚೆನ್ನೈ[ಸೆ. 17] ಸಿನಿಮಾ ನಟ-ನಟಿಯರಿಗೆ, ಕ್ರೀಡಾ ಪಟುಗಳಿಗೆ ಮದುವೆ ಪ್ರಪೋಸಲ್ ಗಳು ಬರುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬ ವೃದ್ಧ ತಾನು ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅವರನ್ನು ಮದುವೆಯಾಗಬಯಸುತ್ತೇನೆ ಎಂದು ಅರ್ಜಿ ಸಲ್ಲಿಸಿದ್ದಾರೆ.

ತಮಿಳುನಾಡಿನ ರಾಮನಾಥಪುರಂನ 70 ವರ್ಷದ ವೃದ್ಧ ಮಲೈಸ್ವಾಮಿ ಬಾಡ್ಮಿಂಟನ್​ ತಾರೆಯನ್ನು ಮದುವೆಯಾಗಬೇಕು ಎಂಬ ಇಚ್ಛೆ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ.

ಸಿಂಧುಗೆ ವಿಶ್ವ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!

24 ವರ್ಷ ಪಿವಿ ಸಿಂಧು ಅವರನ್ನು ಮದುವೆಯಾಗಬೇಕು ಎಂಬ ಇಚ್ಛೆಯನ್ನು ನಾನು ಹೊಂದಿದ್ದು ಜಿಲ್ಲಾಡಳಿತ ಸಿದ್ಧತೆಗಳನ್ನು ನಡೆಸಬೇಕು. ಒಂದು ವೇಳೆ ಜಿಲ್ಲಾಡಳಿತ ಈ ಸಿದ್ಧತೆಗೆ ಮುಂದಾಗದಿದ್ದರೆ, ನಾನು ಸಿಂಧು ಅವರನ್ನು ಅಪಹರಿಸಿ, ಮದುವೆಯಾಗುತ್ತೇನೆ ಎಂಬ ಎಚ್ಚರಿಕೆಯನ್ನು ವೃದ್ಧ ಅಭಿಮಾನಿ ನೀಡಿದ್ದಾರೆ.

ರಾಮನಾಥಪುರಂನಲ್ಲಿ ನಡೆದ ಜಿಲ್ಲಾಧಿಕಾರಿಯೊಂದಿಗೆ ಸಾರ್ವಜನಿಕರ ವಾರದ ಸಭೆಯಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಗ್ರಾಮಸ್ಥರ ಸಮಸ್ಯೆ ಕುರಿತು ದೂರು ಆಲಿಕೆ ಸಭೆಯಲ್ಲಿ ಕೈಯಲ್ಲಿ ಅರ್ಜಿ ಹಿಡಿದು ಬಂದ ವೃದ್ಧ ಪಿವಿ ಸಿಂಧು ಅವರ ಫೋಟೋ ಲಗತ್ತಿಸಿ, ಅವರನ್ನು ಮದುವೆಯಾಗಬೇಕು ಎಂದು ಕೇಳಿಕೊಂಡಿದ್ದಾರೆ.

ನನಗೆ 70 ವರ್ಷ ಆಗಿಲ್ಲ ನನಗೆ ಈಗ 16 ವರ್ಷ. ನಾನು ಹುಟ್ಟಿದ್ದು ಏಪ್ರಿಲ್​ 4, 2004ರಂದು ಎಂದು ವೃದ್ಧ ಹೇಳಿದ್ದು ಪಿವಿ ಸಿಂಧು ನನ್ನ ಜೀವನ ಸಂಗಾತಿಯಾಗಬೇಕು ಎಂದಿದ್ದಾರೆ.