ಭಾರತ ತಂಡದ ಆಪತ್ಭಾಂದವ, 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಕ್ರಿಕೆಟ್ ಮಾತ್ರವಲ್ಲದೇ ಮೈದಾನದಾಚೆಗೂ ಅಪ್ಪಟ ಬಂಗಾರ ಎನ್ನುವುದನ್ನು ಹಲವು ಬಾರಿ ಸಾಬೀತು ಮಾಡಿದ್ದಾರೆ. ಅಂತಹ ಕೆಲವು ಸನ್ನಿವೇಶಗಳ ಮೆಲುಕು ನಿಮ್ಮ ಮುಂದೆ...
ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗ ರಾಹುಲ್ ದ್ರಾವಿಡ್ ಇಂದು 45ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ಭಾರತ ತಂಡದ ಆಪತ್ಭಾಂದವ, 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಕ್ರಿಕೆಟ್ ಮಾತ್ರವಲ್ಲದೇ ಮೈದಾನದಾಚೆಗೂ ಅಪ್ಪಟ ಬಂಗಾರ ಎನ್ನುವುದನ್ನು ಹಲವು ಬಾರಿ ಸಾಬೀತು ಮಾಡಿದ್ದಾರೆ. ಅಂತಹ ಕೆಲವು ಸನ್ನಿವೇಶಗಳ ಮೆಲುಕು ನಿಮ್ಮ ಮುಂದೆ...
#1 ಕ್ಯಾನ್ಸರ್'ನಿಂದ ಬಳಲುತ್ತಿದ್ದ ಅಭಿಮಾನಿಯೊಂದಿಗೆ ಮಾತನಾಡಿದ್ದು

ಹಲವಾರು ಮಾನವೀಯ ಸನ್ನಿವೇಶಗಳಿಗೆ ದ್ರಾವಿಡ್ ಸಾಕ್ಷಿಯಾಗಿದ್ದರೂ ಆ ಸಾಲಿನಲ್ಲಿ ಅವರ ಅಪ್ಪಟ ಅಭಿಮಾನಿ ಅಶೋಕ್ ಡೋಕೆಯನ್ನು ಮಾತನಾಡಿಸಿದ್ದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.
ಅಶೋಕ್ ಡೋಕೆ ಎಂಬ ಯುವಕ ದ್ರಾವಿಡ್ ಅಪ್ಪಟ ಅಭಿಮಾನಿಯಾಗಿದ್ದರು. ಆದರೆ ರಕ್ತದ ಕ್ಯಾನ್ಸರ್'ನಿಂದ ಬಳಲುತ್ತಿದ್ದ ಆತನನ್ನು ದ್ರಾವಿಡ್ ತಮ್ಮ ಬಿಡುವಿರದ ಕೆಲಸದ ನಡುವೆಯೂ ಸ್ಕೈಪ್ ಮೂಲಕ ಮಾತನಾಡಿ ಅಭಿಮಾನಿಯ ಮುಖದಲ್ಲಿ ನಗೆ ಮೂಡಿಸುವಂತೆ ಮಾಡಿದ್ದರು. ಜೊತೆಗೆ ನೇರವಾಗಿ ಭೇಟಿಯಾಗದೇ ಇದ್ದಿದ್ದಕ್ಕೆ ಕ್ಷಮೆಯನ್ನೂ ದ್ರಾವಿಡ್ ಕೋರಿದ್ದರು.
#2. ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್ ಅನ್ನು ನಯವಾಗಿ ತಿರಸ್ಕರಿಸಿದ್ದು:

68ನೇ ಗಣರಾಜ್ಯೋತ್ಸವದ ವೇಳೆ ಬೆಂಗಳೂರು ವಿಶ್ವವಿದ್ಯಾಲಯವು ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿತ್ತು. ಆದರೆ ಗೌಡಾ ವನ್ನು ಸ್ವೀಕರಿಸಲು ನಯವಾಗಿ ನಿರಾಕರಿಸಿದ್ದರು. ಇದಕ್ಕೂ ಮೊದಲ 2014ರಲ್ಲಿ ಗುಲ್ಬರ್ಗ್ ವಿವಿ ಕೂಡಾ ಗೌಡಾ ನೀಡಲು ಮುಂದಾಗಿದ್ದಾಗ ಅದನ್ನು ಜ್ಯಾಮಿ ನಿರಾಕರಿಸಿದ್ದರು.
#3. ವಿಜ್ಞಾನ ಮೇಳದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದು:
ರಾಹುಲ್ ದ್ರಾವಿಡ್ ಎಷ್ಟು ಸರಳ ಎನ್ನುವುದು ಕಳೆದ ವರ್ಷ ತಮ್ಮ ಮಕ್ಕಳೊಂದಿಗೆ ವಿಜ್ಞಾನ ಮೇಳದಲ್ಲಿ ಸಾಮಾನ್ಯರಂತೆ ಪಾಲ್ಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ತಾವೊಬ್ಬ ಸೆಲಿಬ್ರಿಟಿ ಎಂಬ ಹಮ್ಮು-ಬಿಮ್ಮು ಇಲ್ಲದೇ ಎಲ್ಲ ಪೋಷಕರಂತೆ ವಿಜ್ಞಾನ ಮೇಳದಲ್ಲಿ ಪಾಲ್ಗೊಂಡಿದ್ದರು.
#4 ಸಚಿನ್ ತೆಂಡೂಲ್ಕರ್ ಅವರ ಮಿಮಿಕ್ರಿ ಮಾಡಿದ್ದು:

2012ರ ನವೆಂಬರ್'ನಲ್ಲಿ 'ಸಚಿನ್ ಬಾರ್ನ್ ಟು ಬ್ಯಾಟ್- ದಿ ಜರ್ನಿ ಆಫ್ ಕ್ರಿಕೆಟ್ಸ್ ಅಲ್ಟಿಮೇಟ್ ಸೆಂಚುರಿಯನ್' ಎಂಬ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸಚಿನ್ ಅವರ ಮಾತನ್ನು ಮಿಮಿಕ್ರಿ ಮಾಡದ್ದರು. ರವಿಶಾಸ್ತ್ರಿ, ಸಂಜಯ್ ಮಾಂಜ್ರೆಕರ್ ಹಾಗೂ ಸಚಿನ್ ತೆಂಡೂಲ್ಕರ್ ನಡುವಿನ ಸಂಬಾಷಣೆಯಲ್ಲಿ ಸಚಿನ್ ಧ್ವನಿಯನ್ನು ಮಿಮಿಕ್ರಿ ಮಾಡಿ ನೆರದಿದ್ದ ಸಭೆಯಲ್ಲಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ದರು.
#5. ಕೆವಿನ್ ಪೀಟರ್'ಸನ್'ಗೆ ಬ್ಯಾಟಿಂಗ್ ಟಿಪ್ಸ್ ಹೇಳಿಕೊಟ್ಟಿದ್ದು:

ಐಪಿಎಲ್ ಎರಡನೇ ಆವೃತ್ತಿಯಲ್ಲಿ ರಾಹುಲ್ ದ್ರಾವಿಡ್ ಹಾಗೂ ಕೆವಿನ್ ಪೀಟರ್'ಸನ್ ಆರ್'ಸಿಬಿ ತಂಡದಲ್ಲಿದ್ದರು. ಸ್ಪಿನ್ ಬೌಲಿಂಗ್ ಎದುರಿಸುವಾಗ ಪದೇ ಪದೇ ಎಡುವುತ್ತಿದ್ದ ಪೀಟರ್'ಸನ್ ಅವರಿಗೆ ಇ-ಮೇಲ್ ಮಾಡಿ ಟಿಪ್ಸ್ ಹೇಳಿಕೊಟ್ಟಿದ್ದರು.
ಆ ಬಳಿಕ ಬ್ಯಾಟಿಂಗ್'ನಲ್ಲಿ ಗಮನಾರ್ಹ ಬದಲಾವಣೆಗಳಾಯಿತು ಎಂದು ತಮ್ಮ ಆತ್ಮಕತೆಯಲ್ಲಿ ಕೆಪಿ ಬರೆದುಕೊಂಡಿದ್ದರು.
#6. ಹಫೀಜ್ ಜತೆಗೆ ಸೆಲ್ಫಿ:
ಕ್ರೀಡೆ-ಸ್ನೇಹ-ಪ್ರೀತಿಗೆ ಗಡಿಯಿಲ್ಲ ಎನ್ನುವುದಕ್ಕೆ ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಜತೆ ದ್ರಾವಿಡ್ ವಿಮಾನದಲ್ಲಿ ಸೆಲ್ಫಿ ತೆಗೆಸಿಕೊಂಡಿದ್ದೆ ಸಾಕ್ಷಿ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಭಾರತ ಅಂಡರ್-19 ತಂಡವು ವಿಶ್ವಕಪ್ ಟೂರ್ನಿಯಾಡಲು ನ್ಯೂಜಿಲೆಂಡ್'ಗೆ ಹೊರಟಿತ್ತು, ಈ ವೇಳೆ ಪಾಕಿಸ್ತಾನ ತಂಡ ಕೂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಆಗ ಪಾಕ್ ಕ್ರಿಕೆಟಿಗ ದ್ರಾವಿಡ್ ಜತೆ ಸೆಲ್ಫಿ ತೆಗೆಸಿಕೊಂಡು ಆ ಖುಷಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಅದೂ ಸಾಕಷ್ಟು ವೈರಲ್ ಆಗಿತ್ತು.
#7. ವ್ಯಾಟ್ಸನ್'ಗೆ ಟ್ರಿಪ್ ಗೈಡ್ ಆದ ವಾಲ್:
ಐಪಿಎಲ್ ಏಳನೇ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಕೋಚ್ ಆಗಿದ್ದ ದ್ರಾವಿಡ್ ಆರ್'ಆರ್ ತಂಡದ ನಾಯಕ ಶೇನ್ ವ್ಯಾಟ್ಸನ್ ಅವರನ್ನು ಆಟೋದಲ್ಲಿ ನಗರದ ಕೆಲ ಪ್ರಮುಖ ಸ್ಥಳಗಳನ್ನು ಪರಿಚಯಿಸಿದ್ದರು. ಅದನ್ನು ವ್ಯಾಟ್ಸನ್ ಟ್ವೀಟ್ ಮಾಡಿ 'ವಾಲ್' ಸಿಂಪ್ಲಿಸಿಟಿಯನ್ನು ಜಗತ್ತಿಗೆ ಮತ್ತೊಮ್ಮೆ ಅನಾವರಣ ಮಾಡಿದ್ದರು
