ಏಷ್ಯನ್ ಗೇಮ್ಸ್‌ಗೆ ಭಾರತದ 524 ಸ್ಪರ್ಧಿಗಳು
- ಕ್ರೀಡಾಕೂಟದಲ್ಲಿ ಭಾರತ 36 ವಿಭಾಗಗಳಲ್ಲಿ ಸ್ಪರ್ಧೆ
- 277 ಪುರುಷರು ಮತ್ತು 247 ಮಹಿಳಾ ಅಥ್ಲೀಟ್‌ಗಳು
ನವದೆಹಲಿ: ಇಂಡೋನೇಷ್ಯಾದ ಜಕಾರ್ತದಲ್ಲಿ ಆಗಸ್ಟ್ 18 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್‌ಗಾಗಿ ಭಾರತ ಒಲಿಂಪಿಕ್ ಸಂಸ್ಥೆ(ಐಒಎ)ಯು 524 ಅಥ್ಲೀಟ್‌ಗಳ ಪಟ್ಟಿ ಪ್ರಕಟಿಸಿದೆ.
ಕೂಟದಲ್ಲಿ ಭಾರತ 36 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದು, 277 ಪುರುಷರು ಮತ್ತು 247 ಮಹಿಳಾ ಅಥ್ಲೀಟ್‌ಗಳಿದ್ದಾರೆ.
ಓಟಗಾರ್ತಿ ಟಿಂಟು ಲುಕಾ, ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಲು ಮತ್ತೊಂದು ಅವಕಾಶ ದೊರೆತಿದೆ. ಭಾರತ ಅಥ್ಲೆಟಿಕ್ಸ್ ಸಂಸ್ಥೆ ಒಟ್ಟು 51 ಅಥ್ಲೀಟ್‌ಗಳ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಸೇರಿದಂತೆ ಒಟ್ಟು 11 ಅಥ್ಲೀಟ್‌ಗಳಿಗೆ ಮತ್ತೆ ಆಯ್ಕೆ ಟ್ರಯಲ್ಸ್‌ಗೆ ಕರೆಯಲಾಗಿದೆ.
2014ರ ಏಷ್ಯನ್ ಗೇಮ್ಸ್‌ನಲ್ಲಿ ಟಿಂಟು ಬೆಳ್ಳಿ ಜಯಿಸಿದ್ದರು.