ಕಾನ್ಪುರ(ಸೆ.22): ಭಾರತೀಯ ಕ್ರಿಕೆಟ್​​ ಲೋಕಕ್ಕೆ ಇಂದು ಐತಿಹಾಸಿಕ ದಿನವಾಗಿದೆ. ಭಾರತ ತನ್ನ 500ನೇ ಟೆಸ್ಟ್​​ ಪಂದ್ಯವನ್ನು ಕಾನ್ಪುರದಲ್ಲಿ ಆಡಲಿದೆ. ಇದಕ್ಕಾಗಿ ಕ್ರೀಡಾಂಗಣ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. 

ಈ ಐತಿಹಾಸಿಕ ಪಂದ್ಯವನ್ನು ಗೆಲ್ಲಿಸಿಕೊಡುವ ಒತ್ತಡ ವಿರಾಟ್​​ ಕೊಹ್ಲಿ ಮೇಲಿದ್ದು, ಕಿವೀಸ್​​ ಸವಾಲ್​ ಎಸೆಯಲಿದೆ. ಇನ್ನು ಟೆಸ್ಟ್​​ ಆರಂಭಕ್ಕೂ ಮುನ್ನ ಬಿಸಿಸಿಐ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಇದರೊಂದಿಗೆ ಮಾಜಿ ಟೆಸ್ಟ್​​ ನಾಯಕರುಗಳಿಗೆ ಔತಣಕೂಟವನ್ನು ಏರ್ಪಡಿಸಿದೆ. ಆದರೆ, ಬಿಸಿಸಿಐ ಎಲ್ಲಾ ಯೋಜಗಳಿಗೂ ವರುಣದೇವ ತಣ್ಣೀರೆರಚುವ ಸಾಧ್ಯತೆಯಿದ್ದು, ಟೆಸ್ಟ್​​​ಗೆ ಮಳೆ ಅಡ್ಡಿ ಯಾಗಲಿದೆ ಎನ್ನಲಾಗಿದೆ.