ಕಾನ್ಪುರ(ಸೆ.23): ಇಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಹಾಗೂ ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 318 ರನ್ಗಳಿಗೆ ಆಲೌಟ್ ಆಗಿದೆ.
ಇದಕ್ಕೂ ಮುನ್ನ ಮೊದಲ ದಿನದಾಟದಲ್ಲಿ ಭಾರತೀಯರು ಗಳಿಸಿದ್ದು 291 ರನ್. ಕಳೆದುಕೊಂಡಿದ್ದು 9 ವಿಕೆಟ್. ನ್ಯೂಜಿಲೆಂಡ್ ತಂಡ ಮೊದಲ ದಿನದ ಗೌರವಕ್ಕೆ ಪಾತ್ರವಾಗಿತ್ತು. ಇನ್ನು ಎರಡನೇ ದಿನ ಭಾರತ ಇಂದು ಎಚ್ಚರಿಕೆಯ ಆಟಕ್ಕೆ ಮುಂದಾಯ್ತು. ರವೀಂದ್ರ ಜಡೇಜಾ ಕೆಲ ಆಕರ್ಷಕ ಹೊಡೆತಗಳಿಂದ ಗಮನ ಸೆಳೆದರು.
10ನೇ ವಿಕೆಟ್ಗೆ ಈ ಜೋಡಿ 41 ರನ್ಗಳಿಸಿತು. ಉಮೇಶ್ ಯಾದವ್ 9 ರನ್ಗಳಿಸಿ ಔಟಾಗುವ ಮೂಲಕ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 318ರನ್ಗಳಿಗೆ ಆಲೌಟ್ ಆಯ್ತು. ರವೀಂದ್ರ ಜಡೇಜಾ ಅಜೇಯ 42 ರನ್ಗಳಿಂದ ಉತ್ತಮ ಆಟ ಪ್ರದರ್ಶಿಸಿದರು.
ನ್ಯೂಜಿಲೆಂಡ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಮಿಚಲ್ ಸ್ಯಾಂಟ್ನರ್ ಮತ್ತು ಟ್ರೇಂಟ್ ಬೋಲ್ಟ್ ತಲಾ ಮೂರು ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಶಕ್ತಿಯನ್ನು ಕಟ್ಟಿಹಾಕಿದರು.
