ವಿಕೆಟ್ ಗಿಂತ 2 ಇಂಚು ಎತ್ತರವಿರುವ 5 ವರ್ಷದ ರುದ್ರ ಪ್ರತಾಪ್, ತನ್ನ ಸೈಜ್'ಗೆ ಸಿಗದಿರುವ ಹೈಲ್ಮೆಟ್ ಹಾಕಿಕೊಂಡು, ತನ್ನ ಎತ್ತರಕ್ಕೆ ಸರಿಹೊಂದು ಬ್ಯಾಟ್ ಹಿಡಿದು, ದೊಡ್ಡದಾದ ಪ್ಯಾಡ್ ಹಾಕಿಕೊಂಡು ಪಿಚ್ ನಲ್ಲಿ ಬಾಲ್ ಎದುರಿಸಿದ ಶೈಲಿ

ದಿಲ್ಲಿ(ನ.23): 14 ವರ್ಷದೊಳಗಿನ ಕ್ರಿಕೆಟ್ ಟೂರ್ನಿಯಲ್ಲಿ ಕಾಣಿಸಿಕೊಂಡ 5 ವರ್ಷದ ಹುಡುಗನೊರ್ವ ಮೈದಾನದಲ್ಲಿ ಪ್ಯಾಡು ಗಾರ್ಡು ತೊಟ್ಟ ವಿಕೆಟ್ ಮುಂದೆ ಬಂದು ಬ್ಯಾಟ್ ಕುಟ್ಟುತ್ತಿದ್ದರೆ ಪಂದ್ಯದ ಕಾಮೆಂಟರಿ ಮಾಡುತ್ತಿದ್ದವರಿಂದ ಹಿಡಿದು ಪಂದ್ಯ ಟಿವಿಯಲ್ಲಿ ನೋಡುತ್ತಿದ್ದವರಿಗೂ ಆಶ್ವರ್ಯ.

ನೋಡಿದರೆ ಮುಂದೊಂದು ದಿನ ಟೀಮ್ ಇಂಡಿಯಾದ ಮಿಂಚುವ ತಾರೆಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿತ್ತು.

14 ವರ್ಷದೊಳಗಿನ ತಂಡದ ಎಲ್ಲ ಮಕ್ಕಳು 10 ವರ್ಷದ ಮೇಲಿನವರೆ ಆಗಿದ್ದು, ಇಡೀ ಮೈದಾನದಲ್ಲಿ ಈತ ಮಾತ್ರ 5 ವರ್ಷದ ಆಟಗಾರನಾಗಿದ್ದು, ಆದರೆ ವಯಸ್ಸಿನ ಅಳುಕಿಲ್ಲದೆ ಮೈದಾನದಲ್ಲಿ ಕಾಣಿಸಿಕೊಂಡಿದು ಮೆಚ್ಚುಗೆಗೆ ಕಾರಣವಾಗಿಯಿತು.