ಸೌರವ್ ಗಂಗೂಲಿ ಭಾರತದ ಅತ್ಯುತ್ತಮ ನಾಯಕ ಯಾಕೆ? ಇಲ್ಲಿದೆ 5 ಕಾರಣ!

5 reasons why Sourav Ganguly was a great leader
Highlights

ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಯಾರು ಅನ್ನೋ ಚರ್ಚೆ ಹಲವು ವರ್ಷಗಳಿಂದ ಇವೆ.  ಸೌರವ್ ಗಂಗೂಲಿ ಬೆಸ್ಟ್ ಅನ್ನೋದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ 5 ಕಾರಣಗಳು ಇಲ್ಲಿವೆ.

ಬೆಂಗಳೂರು(ಜು.08): ಟೀಂ ಇಂಡಿಯಾ ಕಂಡ ಮೋಸ್ಟ್ ಸಕ್ಸಸ್‌ಫುಲ್ ಕ್ಯಾಪ್ಟನ್ ಸೌರವ್ ಗಂಗೂಲಿ ಅನ್ನೋದರಲ್ಲಿ ಎರಡು ಮಾತಿಲ್ಲ. ಭಾರತ ತಂಡ ಆಕ್ರಮಣಕಾರಿ ಆಟ ಶುರುವಾಗಿದ್ದೇ ಸೌರವ್ ಗಂಗೂಲಿ ನಾಯಕತ್ವದಲ್ಲಿ. ಅತ್ಯುತ್ತಮ ಬ್ಯಾಟ್ಸ್‌ಮನ್ ಹಾಗೂ ಅಷ್ಟೇ ಉತ್ತಮ ನಾಯಕನಾಗಿ ಗುರುತಿಸಿಕೊಂಡಿರುವ ಸೌರವ್ ಗಂಗೂಲಿ ಇಂದು 46ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಗಂಗೂಲಿ ಭಾರತ ಅತ್ಯುತ್ತಮ ನಾಯಕ ಯಾಕೆ ಅನ್ನೋದಕ್ಕೆ ಇಲ್ಲಿದೆ 5 ಕಾರಣ.

ಸಹ ಆಟಗಾರರನ್ನ ಬಿಟ್ಟುಕೊಡಲ್ಲ ದಾದ:
ಗಂಗೂಲಿ ಯಾವತ್ತೂ ತಮ್ಮ ಸಹ ಆಟಗಾರರ ಬೆಂಬಲಕ್ಕೆ ನಿಲ್ಲುತ್ತಿದ್ದರು. ಕಳಪೆ ಫಾರ್ಮ್ ಇರಲಿ, ಎದುರಾಳಿ ತಂಡದ ಸ್ಲೆಡ್ಜಿಂಗ್ ಇರಲಿ, ಗಂಗೂಲಿ ಆಟಗಾರರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಈ ಗುಣ ಗಂಗೂಲಿ ನಾಯಕತ್ವಕ್ಕೆ ಮತ್ತಷ್ಟು ಮೆರುಗು ನೀಡಿತು.

ಫಿಕ್ಸಿಂಗ್ ಬಳಿಕ ತಂಡವನ್ನ ಒಗ್ಗೂಡಿಸಿದ ಚತುರ:
2000ನೇ ಇಸವಿಯಲ್ಲಿ ಟೀಂ ಇಂಡಿಯಾ ಮೇಲೆ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ತಂಡದ ನಾಯಕ ಹಾಗೂ ಸ್ಟಾರ್ ಆಟಗಾರರೇ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿರೋದು ಬಹಿರಂಗವಾಗಿತ್ತು. ಈ ಪ್ರಕರಣದ ಬಳಿಕ ಅಭಿಮಾನಿಗಳು ನಂಬಿಕೆ ಕಳೆದುಕೊಂಡಿದ್ದರು. ಪ್ರತಿಯೊಬ್ಬ ಕ್ರಿಕೆಟಿಗನನ್ನೂ ಅನುಮಾನದಿಂದ ನೋಡು ಸಂದರ್ಭ ಸೃಷ್ಠಿಯಾಗಿತ್ತು. ಆದರೆ ಸೌರವ್ ಗಂಗೂಲಿ ಮತ್ತೆ ತಂಡವನ್ನ ಕಟ್ಟಿ ಬೆಳೆಸಿದರು. ಅಭಿಮಾನಿಗಳ ನಂಬಿಕೆಯನ್ನ ಮತ್ತೆ ಗಳಿಸಿದರು. 

ಇದನ್ನು ಓದಿ: ಧೋನಿ ಟೀಂ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಅನ್ನೋದು ಯಾಕೆ..?

ದಾದಾ ಗರಡಿಯಲ್ಲಿ ಪಳಗಿದ ಭವಿಷ್ಯದ ಸ್ಟಾರ್ಸ್:
ಸೌರವ್ ಗಂಗೂಲಿ ನಾಯಕನಾಗಿ ಆಯ್ಕೆಯಾದ ಬಳಿಕ ಭಾರತದ ಪ್ರತಿಭಾನ್ವಿತರಿಗೆ ಅವಕಾಶ ಕಲ್ವಿಸಿದರು. ಯುವರಾಜ್ ಸಿಂಗ್,ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಕ್ರಿಕೆಟಿಗರು ಗಂಗೂಲಿ ಗರಡಿಯಲ್ಲಿ ಪಳಗಿದವರು. ಭಾರತದ ಮತ್ತೊರ್ವ ಯಶಸ್ವಿ ನಾಯಕ ಎಂ ಎಸ್ ಧೋನಿ ಕೂಡ, ಗಂಗೂಲಿ ನಾಯಕತ್ವದಲ್ಲೇ ಬೆಳೆದ ಕ್ರಿಕೆಟಿಗ.

ಇದನ್ನು ಓದಿ: ಕ್ರಿಕೆಟ್ ಸೀಕ್ರೆಟ್ಸ್: ಭಾರತದ ಯಶಸ್ವಿ ನಾಯಕ ಸೌರವ್ ಗಂಗೂಲಿಗೆ ಈ ದಿನ ವಿಶೇಷ ಯಾಕೆ?

ಭಾರತ ತಂಡಕ್ಕೆ ಅಗ್ರೆಸ್ಸೀವ್ ಟಚ್ ನೀಡಿದ ಧೀರ:
ಸೌರವ್ ಗಂಗೂಲಿ ಅಗ್ರೆಸ್ಸೀವ್ ನಾಯಕ ಎಂದೇ ಗುರುತಿಸಿಕೊಂಡ ಕ್ರಿಕೆಟಿಗ. ವಿದೇಶಿ ತಂಡಗಳ ರೀತಿಯಲ್ಲೇ ಭಾರತವೂ ಆಕ್ರಮಣಕಾರಿ ಆಟಕ್ಕೆ ಬದಲಾಗಿದ್ದು ಇದೇ ಗಂಗೂಲಿ ನಾಯಕತ್ವದಲ್ಲಿ. ಸ್ಲೆಡ್ಜಿಂಗ್ ಮಾಡಿದರೆ ಅಲ್ಲೇ ತಿರುಗೇಟೋ ಛಾತಿ ಗಂಗೂಲಿಯದ್ದು. ಗಂಗೂಲಿಯ ಆಕ್ರಮಣಕಾರಿ ನಾಯಕತ್ವದಿಂದಲೇ ಎದುರಾಳಿಗಳು ಆತ್ಮವಿಶ್ವಾಸ ಕುಗ್ಗಿಹೋಗುತ್ತಿತ್ತು. ಇದು ಭಾರತದ ಗೆಲುವಿಗೂ ಕಾರಣವಾಗಿದೆ.

ಇದನ್ನು ಓದಿ:ಸೌರವ್ ಗಂಗೂಲಿ ಹುಟ್ಟುಹಬ್ಬಕ್ಕೆ ವಿರೇಂದ್ರ ಸೆಹ್ವಾಗ್ ಮಾಡಿದ ಟ್ವೀಟ್ ಏನು?

ವಿದೇಶದಲ್ಲಿ ಗೆಲುವು:
ವಿದೇಶಿ ಪಿಚ್‌ಗಳಲ್ಲಿ ಟೆಸ್ಟ್ ಗೆಲುವು ಭಾರತೀಯ ನಾಯಕರಿಗೆ ಅಸಾಧ್ಯವಾಗಿತ್ತು. ಆದರೆ ಗಂಗೂಲಿ ತಂಡ ವಿದೇಶಗಳಲ್ಲಿ ಗೆಲುವು ಸಾಧಿಸಿದ ಸಾಧನೆ ಮಾಡಿತ್ತು. ಆಸ್ಟ್ರೇಲಿಯಾ, ಇಂಗ್ಲೆಂಡ್ ನೆಲದಲ್ಲಿನ ಗೆಲುವಿನ ಸಂಭ್ರಮ ತಂಡದ ಆತ್ಮವಿಶ್ವಾಸವನ್ನೇ ಹೆಚ್ಚಿಸಿತು.

ಗಂಗೂಲಿ ಧೀರ ನಾಯಕತ್ವದ ಗುಣಗಳಿಂದಲೇ ಅತ್ಯುತ್ತಮ ನಾಯಕ ಅನ್ನೋ ಬಿರುದಿಗೆ ಪಾತ್ರರಾಗಿದ್ದಾರೆ. ಹಲವು ಕ್ರಿಕೆಟಿಗರು ಭಾರತ ತಂಡಕ್ಕೆ ಎಂಟ್ರಿಕೊಡಬಹುದು, ಆದರೆ ಗಂಗೂಲಿ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ.

loader