ಬೆಂಗಳೂರು[ಜೂ.09]: ಮತ್ತೊಂದು ಐಪಿಎಲ್ ಟೂರ್ನಿ ಮುಕ್ತಾಯವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ ಗೆಲ್ಲುವ ಆಸೆ ಮತ್ತೆ ಮರೀಚಿಕೆಯಾಗಿಯೇ ಉಳಿದಿದೆ. 11ನೇ ಆವೃತ್ತಿಯ ಐಪಿಎಲ್’ನಲ್ಲಿ ಚೆನ್ನೈ ಸೂಪರ್’ಕಿಂಗ್ಸ್ ಚಾಂಪಿಯನ್ ಆಗುವುರೊಂದಿಗೆ ಧೋನಿ ಪಡೆ ಮೂರನೇ ಬಾರಿಗೆ[2010, 2011 ಮತ್ತು 2018] ಕಪ್ ಎತ್ತಿಹಿಡಿದು ಸಂಭ್ರಮಿಸಿದೆ.
11 ಆವೃತ್ತಿ ಕಳೆದರೂ ಕಪ್ ಗೆಲ್ಲಲು ವಿಫಲವಾಗಿರುವ ಆರ್’ಸಿಬಿ ಮುಂಬರುವ ಐಪಿಎಲ್’ನಲ್ಲಿ ಕೆಲ ಬದಲಾವಣೆ ಮಾಡಿದರೆ ಅಚ್ಚರಿಯಿಲ್ಲ. ಈ ಬಾರಿಯ ಹರಾಜಿನಲ್ಲಿ ಮಾಡಿಕೊಂಡ ಎಡವಟ್ಟು, ಕನ್ನಡದ ಪ್ರತಿಭೆಗಳನ್ನು ಕಡೆಗಣಿಸಿದ್ದಕ್ಕೆ ಆರ್’ಸಿಬಿ ಬೆಲೆತೆತ್ತಿದೆ. 2019ನೇ ಸಾಲಿನ ಐಪಿಎಲ್’ನಲ್ಲಿ ಈ ಮೂವರು ಆಟಗಾರರು ಆರ್’ಸಿಬಿ ಪರ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ
#3. ಕೋರಿ ಆ್ಯಂಡರ್’ಸನ್


ನ್ಯೂಜಿಲೆಂಡ್ ಮೂಲದ ಕೋರಿ ಆ್ಯಂಡರ್’ಸನ್ ಆರ್’ಸಿಬಿ ಪರ ಕಳಪೆ ಪ್ರದರ್ಶನ ತೋರುವ ಮೂಲಕ ನಿರಾಸೆ ಮೂಡಿಸಿದರು. ಸಿಕ್ಕ ಮೂರು ಪಂದ್ಯಗಳ ಅವಕಾಶದಲ್ಲಿ ಕೋರಿ ಬಾರಿಸಿದ್ದು ಕೇವಲ 17 ರನ್’ಗಳು ಮಾತ್ರ. ಇನ್ನು ಬೌಲಿಂಗ್’ನಲ್ಲಿ 52 ಎಸೆತಗಳಲ್ಲಿ 115 ರನ್’ಗಳನ್ನು ಬಿಟ್ಟುಕೊಟ್ಟಿದ್ದಾರೆ. ಕೌಲ್ಟರ್’ನಿಲ್ ಬದಲಾಗಿ ಆರ್’ಸಿಬಿ ತಂಡ ಕೂಡಿಕೊಂಡಿದ್ದ ಕೋರಿ ಮುಂದಿನ ವರ್ಷ ಬೆಂಗಳೂರು ತಂಡದ ಪರ ಆಡೋದು ಅನುಮಾನ
#2. ಸರ್ಫರಾಜ್ ಖಾನ್


 ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಜತೆ ಸರ್ಫರಾಜ್ ಖಾನ್’ರನ್ನು ಆರ್’ಸಿಬಿ ರೀಟೈನ್ ಮಾಡಿಕೊಂಡಿದ್ದ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. 2015ರ ಐಪಿಎಲ್’ನಲ್ಲಿ ಆಡಿದ 13 ಪಂದ್ಯಗಳಲ್ಲಿ 111 ರನ್ ಚಚ್ಚಿದ್ದ ಸರ್ಫರಾಜ್ ಮೇಲೆ ಆರ್’ಸಿಬಿ ಸಾಕಷ್ಟು ನಿರೀಕ್ಷೆಯಿಟ್ಟಿತ್ತು. ಆದರೆ ಸರ್ಫರಾಜ್ ಕೇವಲ 10.20ರ ಸರಾಸರಿಯಲ್ಲಿ 51 ರನ್ ಬಾರಿಸುವ ಮೂಲಕ ಆರ್’ಸಿಬಿ ಪ್ರಾಂಚೈಸಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಹಾಗಾಗಿ ಸರ್ಫರಾಜ್ ಮುಂಬರುವ ಐಪಿಎಲ್’ನಲ್ಲಿ ಆರ್’ಸಿಬಿ ಪರ ಆಡೋದು ಬಹುತೇಕ ಡೌಟ್.
#.1 ಬ್ರೆಂಡನ್ ಮೆಕ್ಲಮ್


10 ವರ್ಷಗಳ ಹಿಂದೆ ಬ್ರೆಂಡನ್ ಮೆಕ್ಲಮ್ ಆರ್’ಸಿಬಿ ವಿರುದ್ಧ ಅಬ್ಬರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ 11ನೇ ಆವೃತ್ತಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ನಿಂದ ನಿವೃತ್ತಿಹೊಂದಿರುವ ಕಿವೀಸ್ ಮಾಜಿ ನಾಯಕನನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಬ್ರೆಂಡನ್ ಮೆಕ್ಲಮ್ ಆರು ಪಂದ್ಯಗಳಲ್ಲಿ 21.16ರ ಸರಾಸರಿಯಲ್ಲಿ 134 ರನ್’ಗಳನ್ನಷ್ಟೇ ಕಲೆಹಾಕಿ ನಿರಾಸೆ ಮೂಡಿಸಿದರು.
11ನೇ ಆವೃತ್ತಿಯಲ್ಲಿ ಕಪ್ ನಮ್ದೇ ಎನ್ನುವ ಕನಸಿನೊಂದಿಗೆ ಕಣಕ್ಕಿಳಿದಿದ್ದ ಆರ್’ಸಿಬಿ ಕನಸು ಮುಂದಿನ ವರ್ಷವಾದರೂ ಕಪ್ ಗೆಲ್ಲುತ್ತಾ ಕಾದು ನೋಡಬೇಕಿದೆ.