Asianet Suvarna News Asianet Suvarna News

RCB ಸ್ಟಾರ್ ಬೌಲರ್ ಔಟ್; ಮತ್ತೋರ್ವ ಸ್ಟಾರ್ ಆಲ್ರೌಂಡರ್ ಇನ್..!

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಾಥನ್ ಕೌಲ್ಟರ್-ನಿಲ್ ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ಅವರ ಬದಲಿಗೆ ನ್ಯೂಜಿಲೆಂಡ್ ಸ್ಟಾರ್ ಆಲ್ರೌಂಡರ್ ಕೋರಿ ಆಂಡರ್'ಸನ್ RCB ತಂಡ ಕೂಡಿಕೊಂಡಿದ್ದಾರೆ.

RCB name replacement for Nathan Coulter Nile

ಬೆಂಗಳೂರು(ಮಾ.24): ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭದಲ್ಲೇ ಹಿನ್ನಡೆಯುಂಟಾಗಿದ್ದು, RCB ವೇಗಿ ನಾಥನ್ ಕೌಲ್ಟರ್-ನಿಲ್ ಟೂರ್ನಿ ಆರಂಭಕ್ಕೂ ಮುನ್ನವೇ ತಂಡದಿಂದ ಹೊರಬಿದ್ದಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಾಥನ್ ಕೌಲ್ಟರ್-ನಿಲ್ ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ಅವರ ಬದಲಿಗೆ ನ್ಯೂಜಿಲೆಂಡ್ ಸ್ಟಾರ್ ಆಲ್ರೌಂಡರ್ ಕೋರಿ ಆಂಡರ್'ಸನ್ RCB ತಂಡ ಕೂಡಿಕೊಂಡಿದ್ದಾರೆ.

ಈ ಬಾರಿಯ ಹರಾಜಿನಲ್ಲಿ ಕೋರಿ ಅಂಡರ್'ಸನ್ ಅವರನ್ನು ಯಾವೊಬ್ಬ ಪ್ರಾಂಚೈಸಿಯೂ ಖರೀದಿಸುವ ಮನಸು ಮಾಡಿರಲಿಲ್ಲ. ಇದೀಗ ಕಿವೀಸ್ ಆಲ್ರೌಂಡರ್'ನನ್ನು 2 ಕೋಟಿ ರುಪಾಯಿ ಮೂಲಬೆಲೆಗೆ ಆರ್'ಸಿಬಿ ಖರೀದಿಸಿದೆ. ಈ ಮೊದಲು ಐಪಿಎಲ್'ನಲ್ಲಿ ಕೋರಿ ಆಂಡರ್'ಸನ್ ಡೆಲ್ಲಿ ಡೇರ್'ಡೆವಿಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

Follow Us:
Download App:
  • android
  • ios