ಮ್ಯಾಚ್ ಫಿಕ್ಸಿಂಗ್ ತಡೆಯುವ ನಿಟ್ಟಿನಲ್ಲಿ ಐಸಿಸಿ ಹೊಸ-ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಹೊಸ ಪ್ರಕರಣಗಳಲ್ಲಿ ತನಿಖೆ ನಡೆಸಲು ಆಟಗಾರರ ಮೊಬೈಲ್ ವಶಪಡಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಆಟಗಾರರು ಮೊಬೈಲು ನೀಡಲು ನಿರಾಕರಿಸಿದರೆ ಅವರನ್ನು ಎರಡು ವರ್ಷಗಳ ಕಾಲ ಬ್ಯಾನ್ ಮಾಡಲಾಗುತ್ತದೆ.
ದುಬೈ(ಡಿ.06): ಕಳೆದ ಒಂದೂವರೆ ತಿಂಗಳಲ್ಲಿ ಫಿಕ್ಸಿಂಗ್ ನಡೆಸುವಂತೆ ಬುಕ್ಕಿಗಳು, 3 ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರನ್ನು ಸಂಪರ್ಕಿಸಿದ್ದರು ಎಂದು ತಿಳಿದು ಬಂದಿದೆ.
ಮ್ಯಾಚ್ ಫಿಕ್ಸಿಂಗ್ ಸಂಬಂಧಪಟ್ಟಂತೆ ಐಸಿಸಿ ಸದ್ಯ 7 ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಿದೆ. ತಮ್ಮನ್ನು ಬುಕ್ಕಿಗಳು ಸಂಪರ್ಕಿಸಿದ್ದರು ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಹಾಗೂ ಜಿಂಬಾಬ್ವೆಯ ನಾಯಕ ಗ್ರೇಮ್ ಕ್ರೀಮರ್ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಇತ್ತೀಚೆಗೆ ಮಾಹಿತಿ ನೀಡಿದ್ದರು. ಆದರೆ ಬುಕ್ಕಿಗಳು ಸಂಪರ್ಕಿಸಿದ 3ನೇ ನಾಯಕ ಯಾರು ಎಂದು ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.