ಭಾರತದಲ್ಲೇ 2019ರ ಐಪಿಎಲ್?

First Published 2, Jun 2018, 10:24 AM IST
2019 IPL will be held in India only?
Highlights

ಐಪಿಎಲ್ 2019 ನೇ ಆವೃತ್ತಿ ಲೋಕಸಭೆ ಚುನಾವಣೆಯಿಂದಾಗಿ ಭಾರತದಿಂದ ಸ್ಥಳಾಂತರಗೊಳ್ಳಲಿದೆ ಎನ್ನುವ ಸುದ್ದಿ ಈ ಮೊದಲು ಹಬ್ಬಿತ್ತು. ಆದರೆ ಟೂರ್ನಿಯನ್ನು ಚುನಾವಣೆಗೆ ಮೊದಲೇ ಭಾರತದಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. 

ಮುಂಬೈ(ಜೂ.2): ಐಪಿಎಲ್ 2019 ನೇ ಆವೃತ್ತಿ ಲೋಕಸಭೆ ಚುನಾವಣೆಯಿಂದಾಗಿ ಭಾರತದಿಂದ ಸ್ಥಳಾಂತರಗೊಳ್ಳಲಿದೆ ಎನ್ನುವ ಸುದ್ದಿ ಈ ಮೊದಲು ಹಬ್ಬಿತ್ತು. ಆದರೆ ಟೂರ್ನಿಯನ್ನು ಚುನಾವಣೆಗೆ ಮೊದಲೇ ಭಾರತದಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಮುಂದಿನ ವರ್ಷ ಮಾ.29ರಿಂದ ಮೇ 19ರ ವರೆಗೂ ಐಪಿಎಲ್ ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಮೇ 30ರಿಂದ ಇಂಗ್ಲೆಂಡ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಸಹ ನಡೆಯಲಿದೆ. ಆರ್ಥಿಕ ನಷ್ಟ ಎದುರಾಗುವ ದೃಷ್ಟಿಯಿಂದ ಟೂರ್ನಿ ಸ್ಥಳಾಂತರಗೊಳಿಸದಿರಲುನಿರ್ಧರಿಸಲಾಗಿದೆ ಎನ್ನಲಾಗಿದೆ.

ಭಾರತದಲ್ಲಿ ಟೂರ್ನಿ ಆಯೋಜಿಸುವುದರಿಂದ ಪ್ರೇಕ್ಷಕರ ಕೊರತೆ ಎದುರಾಗಲು ಸಾಧ್ಯವೇ ಇಲ್ಲ. ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಸಾಗರೋಪಾದಿಯಲ್ಲಿ ಬರುತ್ತಾರೆ. ಆದರೆ ವಿದೇಶದಲ್ಲಿ ಇದೇ ರೀತಿಯ ಪ್ರತಿಕ್ರಿಯೆ ಸಿಗುವ ಭರವಸೆ ಇಲ್ಲ ಎಂಬುದು ಬಿಸಿಸಿಐ ವಾದ. 

loader