ಬೆಂಗಳೂರು(ಸೆ.22):ಇತ್ತೀಚಿಗೆ ನ್ಯೂಜಿಲ್ಯಾಂಡ್'ನ ಮಾಜಿ ಕ್ರಿಕೆಟಿಗ ಸ್ಟೀಫನ್ ಫ್ಲೆಮಿಂಗ್ ಇತ್ತೀಚಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಬೆಂಗಳೂರಿಗೆ ಬಂದ ಅವರು ಬೇಸ್ತು ಬಿದ್ದಿದ್ದಾರೆ. ಇವರು ಬೇಸ್ತು ಬಿದ್ದ ಕಾರಣವೇನು ಗೊತ್ತೆ. ಇಲ್ಲಿನ ಟ್ರಾಫಿಕ್. ಸ್ಟೀಫನ್ ಫ್ಲೆಮಿಂಗ್ ಬೆಂಗಳೂರಿನಲ್ಲಿ 2 ಕಿ.ಮೀ ಕ್ರಮಿಸಲು 3 ಗಂಟೆ ತೆಗೆದುಕೊಂಡಿದ್ದಾರೆ. ಬೆಂಗಳೂರು ಟ್ರಾಫಿಕ್ ನೋಡಿ ಸುಸ್ತಾದ ನ್ಯೂಜಿಲ್ಯಾಂಡ್ ಕ್ರಿಕೆಟಿಗ ಇದೇ 3 ಗಂಟೆಯಲ್ಲಿ ನಾನು ನಮ್ಮ ನ್ಯೂಜಿಲ್ಯಾಂಡಿನಲ್ಲಿ 200 ಕಿ.ಮೀ ಕ್ರಮಿಸುತ್ತಿದ್ದೇ ಎಂದು ತಿಳಿಸಿದ್ದಾರೆ.