ಟೆಸ್ಟ್ ಕ್ರಿಕೆಟ್'ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎನ್ನುವ ದಾಖಲೆಯನ್ನೂ ಭಜ್ಜಿ ನಿರ್ಮಿಸಿದರು.

ಬೆಂಗಳೂರು(ಮಾ.11): ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್'ನ ಕನಸಾಗಿರುತ್ತದೆ. ಅದರಲ್ಲೂ ಆಸ್ಟ್ರೇಲಿಯಾದಂತಹ ಬಲಿಷ್ಟ ಟೆಸ್ಟ್ ತಂಡದ ವಿರುದ್ಧವೇ ಆ ಸಾಧನೆ ಮಾಡಿದರೆ ಹೇಗಿರುತ್ತದೆ ಅಲ್ವಾ..

ಭಾರತ ಕ್ರಿಕೆಟ್ ಕಂಡ ಅದ್ಭುತ ಆಫ್'ಸ್ಪಿನ್ನರ್'ಗಳಲ್ಲಿ ಹರ್ಭಜನ್ ಸಿಂಗ್ ಕೂಡ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಒಂದು ಹ್ಯಾಟ್ರಿಕ್ ಮೂಡಿಬಂದಿದ್ದು ಆಸೀಸ್ ವಿರುದ್ದ ಕೋಲ್ಕತಾದ ಈಡನ್'ಗಾರ್ಡನ್'ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ. ಈ ದಾಖಲೆ ನಿರ್ಮಾಣವಾಗಿ ಇಂದಿಗೆ ಬರೋಬ್ಬರಿ 16 ವರ್ಷಗಳಾಯ್ತು..!

ಆಸೀಸ್'ನ ದಿಗ್ಗಜ ಬ್ಯಾಟ್ಸ್'ಮನ್'ಗಳಾದ ರಿಕಿ ಪಾಂಟಿಂಗ್, ಆ್ಯಡಂ ಗಿಲ್'ಕ್ರಿಸ್ಟ್ ಮತ್ತು ಶೇನ್ ವಾರ್ನ್ ಅವರಿಗೆ ದೂಸ್ರಾ ಸ್ಪೆಷಲಿಸ್ಟ್ ಹರ್ಭಜನ್ ಸಿಂಗ್ ಪೆವಿಲಿಯನ್ ಹಾದಿ ತೋರಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್'ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎನ್ನುವ ದಾಖಲೆಯನ್ನೂ ಭಜ್ಜಿ ನಿರ್ಮಿಸಿದರು...

ಹೀಗಿತ್ತು ಇತಿಹಾಸ ಸೃಷ್ಟಿಯಾದ ಆ ಕ್ಷಣಗಳು...