10 ಮೀಟರ್ ಏರ್'ರೈಫಲ್ ವಿಭಾಗದಲ್ಲಿ ರವಿ ಕುಮಾರ್ ಕಂಚಿನ ಪದಕ ಗೆದ್ದುಕೊಂಡರು ಇನ್ನು ಅರ್ಜುನ ಬಬೂತ ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು.
ಜಪಾನ್(ಡಿ.08): ಭಾರತದ ಶೂಟರ್'ಗಳು 10ನೇ ಏಷ್ಯಾ ಏರ್'ಗನ್ ಶೂಟಿಂಗ್ ಚಾಂಪಿಯನ್'ಶಿಪ್'ಮನ ಮೊದಲ ದಿನವೇ ಭರ್ಜರಿ ಪದಕಗಳ ಬೇಟೆಯಾಡಿದ್ದಾರೆ.
ಜಪಾನ್'ನ ವಾಕೋ ಸಿಟಿಯಲ್ಲಿ ಆರಂಭವಾದ ಶೂಟಿಂಗ್ ಚಾಂಪಿಯನ್'ಶಿಪ್'ನಲ್ಲಿ ಭಾರತದ ಶೂಟರ್'ಗಳು 5 ಪದಕ ಬಾಚಿಕೊಂಡಿದ್ದಾರೆ. ಆದರೆ ಭಾರತದ ಸ್ಟಾರ್ ಶೂಟರ್ ಗಗನ್ ನಾರಂಗ್ ಪದಕ ಗೆಲ್ಲುವಲ್ಲಿ ವಿಫಲವಾದರು.
10 ಮೀಟರ್ ಏರ್'ರೈಫಲ್ ವಿಭಾಗದಲ್ಲಿ ರವಿ ಕುಮಾರ್ ಕಂಚಿನ ಪದಕ ಗೆದ್ದುಕೊಂಡರು ಇನ್ನು ಅರ್ಜುನ ಬಬೂತ ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು.
ಇನ್ನು ತಂಡಗಳ ವಿಭಾಗದಲ್ಲಿ ಭಾರತ ಶೂಟರ್'ಗಳು ಪದಕಕ್ಕೆ ಗುರಿಯಿಡುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡರು. ಒಟ್ಟಾರೆಯಾಗಿ ಭಾರತ ಮೊದಲ ದಿನವೇ 5 ಪದಕ ಬಾಚಿಕೊಂಡಂತಾಗಿದೆ.