ರಾಹುಲ್‌ ಜೋಹ್ರಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ಆರೋಪಿಸಿರುವ ಸ್ಕ್ರೀನ್‌ ಶಾಟ್‌ಗಳನ್ನು ಲೇಖಕಿ ಹರ್ನಿದ್‌ ಕೌರ್‌ ಟ್ವೀಟ್‌ ಮಾಡಿದ್ದು, ರಾಹುಲ್‌ ಇದೀಗ ನಿಮ್ಮ ಸರದಿ ಎಂದು ಬರೆದಿದ್ದಾರೆ.

ನವದೆಹಲಿ[ಅ.14]: ‘ಮೀ ಟೂ’ ಅಭಿಯಾನ ದಿನದಿಂದ ದಿನಕ್ಕೆ ಕಾವೇರತೊಡಗಿದ್ದು, ಇದೀಗ ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ ವಿರುದ್ಧವೂ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

ರಾಹುಲ್‌ ಜೋಹ್ರಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ಆರೋಪಿಸಿರುವ ಸ್ಕ್ರೀನ್‌ ಶಾಟ್‌ಗಳನ್ನು ಲೇಖಕಿ ಹರ್ನಿದ್‌ ಕೌರ್‌ ಟ್ವೀಟ್‌ ಮಾಡಿದ್ದು, ರಾಹುಲ್‌ ಇದೀಗ ನಿಮ್ಮ ಸರದಿ ಎಂದು ಬರೆದಿದ್ದಾರೆ.

2016ರಿಂದ ಬಿಸಿಸಿಐನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಹುಲ್‌ ಜೋಹ್ರಿ, ಅದಕ್ಕೂ ಮುನ್ನ ಡಿಸ್ಕವರಿ ವಾಹಿನಿಯ ದಕ್ಷಿಣ ಏಷ್ಯಾ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿದೆ.

ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ), ಎದುರಾಗಿರುವ ಲೈಂಗಿಕ ಕಿರುಕುಳ ಆರೋಪ ಕುರಿತು ವಿವರಣೆ ನೀಡುವಂತೆ ರಾಹುಲ್‌ ಜೋಹ್ರಿಗೆ ಒಂದು ವಾರದ ಗಡುವು ನೀಡಿದೆ. ಇದಕ್ಕೂ ಮುನ್ನ ಶ್ರೀಲಂಕಾದ ಕ್ರಿಕೆಟಿಗರಾದ ಅರ್ಜುನ್‌ ರಣತುಂಗಾ ಹಾಗೂ ಲಸಿತ್‌ ಮಾಲಿಂಗ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿತ್ತು.