Asianet Suvarna News Asianet Suvarna News

ಶಿವಮೊಗ್ಗದಿಂದ ಅಂತಾ​ರಾ​ಜ್ಯಕ್ಕೂ ಬಸ್‌ ಸಂಚಾ​ರ: ರಾಘ​ವೇಂದ್ರ

ರಾಜ್ಯ, ಅಂತಾರಾಜ್ಯ ಸಂಪರ್ಕಕ್ಕೆ ಅಗತ್ಯ ಬಸ್‌ ಸಂಚಾರ ಆರಂಭವಾಗಲಿದೆ ಎಂದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ. 

Soon Bus Service To Begins others States Says BY Raghavendra
Author
Bengaluru, First Published Nov 14, 2019, 12:41 PM IST

ಶಿಕಾ​ರಿ​ಪುರ (ನ.14):  ತಾಲೂಕಿನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋ ಆರಂಭದ ಮೂಲಕ ರಾಜ್ಯ, ಅಂತಾರಾಜ್ಯ ಸಂಪರ್ಕಕ್ಕೆ ಅಗತ್ಯ ಬಸ್‌ ಸಂಚಾರ ಆರಂಭವಾಗಲಿದೆ. ಇತರೆ ಡಿಪೋಗಳಿಗೆ ಕೈಚಾಚದೆ ಸ್ವಾವಲಂಬನೆ ಸಂಚಾರ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಪಟ್ಟಣದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ನಿಲ್ದಾಣದಲ್ಲಿ ರು.125 ಲಕ್ಷ ವೆಚ್ಚದ ನವೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈಗಾಗಲೇ ಕುಟ್ರಹಳ್ಳಿ ಸಮೀಪದ 4 ಎಕರೆ ಜಾಗವನ್ನು ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋ ಆರಂಭಕ್ಕೆ ಗುರುತಿಸಿ ಕಂದಾಯ ಇಲಾಖೆಯಿಂದ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಸತತ 40 ವರ್ಷದ ರಾಜಕೀಯ ಜಿವನದಲ್ಲಿ ಯಡಿಯೂರಪ್ಪನವರು ಸರ್ಕಾರದ 1 ಅಡಿ ಜಾಗ ಖಾಸಗಿ ಪಾಲಾಗಲು ಅವಕಾಶ ನೀಡದೆ ಜನತೆಗೆ ಸಂಪೂರ್ಣ ಸೌಲಭ್ಯ ದೊರಕಿಸಲು ಯತ್ನಿಸಿದ್ದಾರೆ.

ಕೃಷಿ ಇಲಾಖೆಯಿಂದ ಪುರಸಭೆಯ ಮೂಲಕ ರಸ್ತೆ ಸಾರಿಗೆ ನಿಗಮಕ್ಕೆ ಹಸ್ತಾಂತರಿಸಲಾದ ಬಸ್‌ ನಿಲ್ದಾಣದಲ್ಲಿ ಅಗತ್ಯವಾದ ಪ್ಲಾಟ್‌ಫಾರಂ, ವಾಹನ ನಿಲ್ದಾಣ, ವಿದ್ಯುತ್‌ ಸಂಪರ್ಕಕ್ಕೆ ರು. 125 ಲಕ್ಷ ಮಂಜೂರಾಗಿದ್ದು ಸಮೀಪದಲ್ಲಿನ ಅನುಪಯುಕ್ತ ವಾಣಿಜ್ಯ ಸಂಕೀರ್ಣವನ್ನು ನೆಲಸಮಗೊಳಿಸಿ ವಿಶಾಲ ನಿಲ್ದಾಣದ ಕಾಮಗಾರಿ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಗುತ್ತಿಗೆದಾರರು ಯಾರ ಮುಲಾಜಿಗೆ ಒಳಗಾಗದೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ತಿಳಿ​ಸಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯಡಿಯೂರಪ್ಪ ಅವರನ್ನು ರಾಜಕೀಯ ಶಕ್ತಿಯಾಗಿ ಬೆಳೆಸಿದ ಶಿಕಾರಿಪುರದ ಜನತೆಗೆ ರೈಲ್ವೆ ಸಂಪರ್ಕ ದೊರಕಿಸಬೇಕು ಎಂಬ ಸಂಕಲ್ಪ ಪೂರೈಸಲು ರಾಜ್ಯ ಸರ್ಕಾರದಿಂದ 750 ಕೋಟಿ ರು. ಬಿಡುಗಡೆಗೊಳಿಸಲಾಗಿದೆ ಎಂದು ತಿಳಿ​ಸಿ​ದ​ರು.

ಕೆಎಸ್‌ಆರ್‌ಟಿಸಿ ಡಿಸಿ ನವೀನ್‌, ಪುರಸಭಾ ಸದಸ್ಯ ರೇಣುಕಸ್ವಾಮಿ, ಪಾಲಾಕ್ಷಪ್ಪ, ಲಕ್ಷ್ಮಿ ಮಹಾಲಿಂಗಪ್ಪ, ಸುನಂದಾ, ಸಾಧಿಕ್‌ ಅಹ್ಮದ್‌ ಮುಖಂಡ ಕೆ. ಶೇಖರಪ್ಪ, ಗುರುಮೂರ್ತಿ, ಟಿ.ಎಸ್‌. ಮೋಹನ್‌, ಚನ್ನವೀರಪ್ಪ, ದಿಲೀಪಕುಮಾರ್‌, ಮಹೇಂದ್ರ, ಪುರಸಭಾ ಮುಖ್ಯಾಧಿಕಾರಿ ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios