ಶಿವಮೊಗ್ಗ (ನ.11) :  ತಿರುಪತಿ, ಚೆನ್ನೈಗೆ ಶಿವಮೊಗ್ಗದಿಂದ ತಲುಪುವ ರೈಲು ಅಂದೇ ವಾಪಾಸ್‌ ಹೊರಡಲಿದೆ. ಇದರಿಂದ ದೇವರ ದರ್ಶನ ಇತರೆ ಕೆಲಸಗಳಿಗೆ ಅಡ್ಡಿಯಾಗಲಿದೆ. ಇದನ್ನು ತಪ್ಪಿಸಲು ವಾರಕ್ಕೆರಡು ದಿನ ರೈಲು ಓಡಿಸಲು ಈಗಾಗಲೇ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಅದು ಕೂಡ ಅನುಷ್ಠಾನಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

 ಶಿವಮೊಗ್ಗದಲ್ಲಿ ಮಾತನಾಡಿದ ರಾಘವೇಂದ್ರ 10 ವರ್ಷಗಳಿಂದ ಜಿಲ್ಲೆಯ ರೈಲ್ವೆ ಕ್ಷೇತ್ರಗಳಲ್ಲಿ ಅನೇಕ ಅಭಿವೃದ್ಧಿಗಳಾಗಿವೆ. ರೈಲ್ವೆ ಅಭಿವೃದ್ಧಿ ಬೆಂಗಳೂರು-ಮೈಸೂರು ಭಾಗದಲ್ಲಿ ಇತ್ತು. ಶಿವಮೊಗ್ಗದಿಂದ ಈಗ ದೇಶದ ಪ್ರಮುಖ ನಗರಗಳಿಗೆ ರೈಲ್ವೆ ಸಂಪರ್ಕ ಸಾಧ್ಯವಾಗುತ್ತಿದೆ. ಶಿವಮೊಗ್ಗ - ಶಿಕಾರಿಪುರ-ರಾಣೇಬೆನ್ನೂರು ರೈಲ್ವೆ ಯೋಜನೆಗೆ ರಾಜ್ಯದ 750 ಕೋಟಿ, ಕೇಂದ್ರದ 1200 ಕೋಟಿ ಪಾಲು ದೊರೆತಿದೆ. ಭೂಸ್ವಾಧೀನಕ್ಕೆ ವಿಶೇಷ ಅಧಿಕಾರ ಕೂಡ ನೇಮಕ ಆಗಿದೆ. ರೈತರ ಬೆಳೆ ಕಟಾವು ಆದ ತಕ್ಷಣ ಸರ್ವೇ ಕಾರ್ಯ ಆರಂಭಗೊಳ್ಳಲಿದೆ. ಈ ಯೋಜನೆ ಪೂರ್ಣಗೊಂಡರೆ, ಉತ್ತರ ಭಾರತ, ಈಶಾನ್ಯ ರಾಜ್ಯಗಳಿಗೂ ಸಂಪರ್ಕ ಸಾಧಿಸಬಹುದು. ಆದಷ್ಟುಬೇಗ ಈ ಯೋಜನೆಯೂ ಪೂರ್ಣಗೊಳ್ಳಲಿದೆ ಎಂದರು.

ರೈಲ್ವೆ ಟರ್ಮಿನಲ್‌ ನಿರ್ಮಾಣ ಮಾಡಲು ಕೋಟೆಗಂಗೂರು ಹಾಗೂ ತಾಳಗುಪ್ಪ ಬಳಿ ಜಮೀನು ಗುರುತಿಸಲಾಗಿದೆ. ಟರ್ಮಿನಲ್‌ಗೆ 50 ಎಕರೆ ಭೂಮಿ ಅಗತ್ಯವಿದೆ. ಅಗತ್ಯ ಭೂಮಿ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿ ಬಾಕಿ ಭೂಮಿ ಹಸ್ತಾಂತರ ಮಾಡಲಾಗುವುದು. ಟರ್ಮಿನಲ್‌ ನಿರ್ಮಾಣವಾದರೆ ಸವೀರ್‍ಸ್‌ಗೆ ಅನೇಕ ರೈಲುಗಳು ಇಲ್ಲಿಗೆ ಬರುತ್ತವೆ. ಇದರ ಜತೆಗೆ ಹಳಿಗಳು ಸಹ ಮೇಲ್ದರ್ಜೆಗೆ ಏರಲಿವೆ. ಎಲ್ಲ ರೀತಿ¿åಲ್ಲೂ ಅನುಕೂಲವಾಗಲಿದೆ ಎಂದರು.

ಇದರ ಜತೆಗೆ ವಿದ್ಯಾನಗರ, ಭದ್ರಾವತಿಯ ಕಡದಕಟ್ಟೆ, ಸವಳಂಗ ರಸ್ತೆ, ಕುಂಸಿಯ ಬಳಿ ರೈಲ್ವೆ ಓವ​ರ್‌ ಬ್ರಿಡ್ಜ್‌ ನಿರ್ಮಾಣಕ್ಕೆ ರಾಜ್ಯ ಸರಕಾರ ಅನುದಾನ ಲಭ್ಯವಿದೆ. ಕೇಂದ್ರ ಸರಕಾರ ಅನುದಾನ ಸೇರಿಸಿ ಆದಷ್ಟುಬೇಗ ಇವುಗಳನ್ನೂ ಪೂರ್ಣಗೊಳಿಸಲಾಗುವುದು. ತಾಳಗುಪ್ಪದಿಂದ ಸಿದ್ದಾಪುರಕ್ಕೆ ರೈಲ್ವೆ ಹಳಿ ವಿಸ್ತರಣೆ, ಶಿವಮೊಗ್ಗದಿಂದ ಮಂಗಳೂರಿಗೂ ಹೊಸ ಮಾರ್ಗ ಅನುಷ್ಠಾನಕ್ಕೆ ಪ್ರಯತ್ನಿಸಿಲಾಗುವುದು ಎಂದರು.

‘ಕೇಂದ್ರ, ಯಡಿಯೂರಪ್ಪ ಆಶೀರ್ವಾದದಿಂದ ರೈಲ್ವೆ ಅಭಿವೃದ್ಧಿ ಸಾಧ್ಯವಾಗಿದೆ’...

ರಾಜ್ಯ ಸರಕಾರಕ್ಕೆ 1 ವರ್ಷ ತುಂಬುವುದರೊಳಗೆ ವಿಮಾನ ನಿಲ್ದಾಣ ಕಾವತುಮಕೂರು-ಶಿವಮೊಗ್ಗ ಚತುಷ್ಪಥ ರಸ್ತೆ ಕಾಮಗಾರಿಗೆ 5 ಸಾವಿರ ಕೋಟಿ ಹಣ ವಾಪಾಸ್‌ ಹೋಗುತಿತ್ತು. ತಕ್ಷಣ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ ಹಣ ವಾಪಾಸ್‌ ಹೋಗದಂತೆ ತಡೆ ಹಿಡಿದಿದ್ದೇವೆ. ಅದು ಕೂಡ ಶೀಘ್ರ ಪೂರ್ಣಗೊಳ್ಳಲಿದೆ ುಗಾರಿ ಮುಕ್ತಾಯಗೊಳ್ಳಲಿದೆ ಎಂದರು.

ಎಂಎಲ್‌ಸಿ ಆಯನೂರು ಮಂಜುನಾಥ್‌ ಮಾತನಾಡಿ, ರೈಲ್ವೆ ನಿಲ್ದಾಣದಲ್ಲಿ ಆಟೋಗಳಿಂದ ತೊಂದರೆಯಾಗುತ್ತಿದೆ. ರೈಲು ಇಳಿದು ಹೊರಬರುವವರು ಆಟೋದಲ್ಲೇ ಕಾಲಿಡಬೇಕು. ಅಂತಹ ಪರಿಸ್ಥಿತಿ ಇದೆ. ಕಾರು, ಬೈಕ್‌ ತೆಗೆಯಲು ಗೊಂದಲದ ವಾತಾವರಣ ಇದೆ. ಪೊಲೀಸರು ಈ ಬಗ್ಗೆ ಗಮನಹರಿಸಬೇಕು. ಖಾಸಗಿ ಬಸ್‌ಗಳು ಸಹ ಶಿಸ್ತುಬದ್ಧವಾಗಿ ನಿಲ್ಲಬೇಕು. ನಾನು ಆಟೋದವರ ವಿರೋಧಿಯಲ್ಲ. ಆಟೋ ಮಿತ್ರ ಎಂದು ಸಮಜಾಯಿಷಿ ನೀಡಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ನೆಮ್ಮದಿಯಾಗಿ ಆಡಳಿತ ಮಾಡಲು ಬಿಡಬೇಕು. ಅವರು ನೆಮ್ಮದಿಯಾಗಿ ಆಡಳಿತ ನಡೆಸಲು ಅವಕಾಶ ನೀಡಿದರೆ ರಾಜ್ಯದಲ್ಲಿ ಶಿವಮೊಗ್ಗ ನಂಬರ್‌ 1 ಆಗಲಿದೆ ಎಂದರು.

ಎಂಎಲ್‌ಸಿ ಎಸ್‌.ರುದ್ರೇಗೌಡ ಮಾತನಾಡಿ, ಎಲ್ಲ ಸವಲತ್ತುಗಳು ಕಟ್ಟಕಡೆಯ ವ್ಯಕ್ತಿಗೂ ದೊರಕಬೇಕು ಎಂಬ ನಿಟ್ಟಿನಲ್ಲಿ ಯೋಜನೆಗಳು ಜಾರಿಯಾಗುತ್ತಿವೆ. ರೈಲ್ವೆ ಸಂಪರ್ಕದಿಂದ ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡಬಹುದು. ಆರು ವರ್ಷದ ಹಿಂದೆ 2 ರೈಲುಗಳು ಮಾತ್ರ ಇತ್ತು. ಬಿ.ಎಸ್‌.ಯಡಿಯೂರಪ್ಪನವರು ಪ್ರಯಾಣಿಕರ ಸಂಕಷ್ಟನೋಡಿ ಇನ್ನಷ್ಟುಬೋಗಿ, ಟ್ರೈನುಗಳು ಬೇಕು ಎಂದು ಅಂದುಕೊಂಡಿದ್ದರು. ಹಂತಹಂತವಾಗಿ ಎಲ್ಲವೂ ನೆರವೇರುತ್ತಿವೆ ಎಂದರು.

ಎಂಎಲ್‌ಸಿ ಆರ್‌. ಪ್ರಸನ್ನಕುಮಾರ್‌ ಮಾತನಾಡಿ, ರೈಲ್ವೆ ನಿಲ್ದಾಣದಲ್ಲಿ ಎಲಿವೇಟರ್‌ ಅಗತ್ಯವಿದೆ. ತಕ್ಷಣ ಅದನ್ನು ಮಾಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಜಿಎಂ ಅಜಯ್‌ಕುಮಾರ್‌ ಸಿಂಗ್‌, ಶಾಸಕ ಕೆ.ಬಿ. ಅಶೋಕ್‌ ನಾಯ್‌್ಕ, ಮೇಯರ್‌ ಲತಾಗಣೇಶ್‌, ಉಪಮೇಯರ್‌ ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಕೆ.ಎಂ. ಶಾಂತರಾಜು, ಪಾಲಿಕೆ ಸದಸ್ಯೆ ಸುನಿತಾ ಅಣ್ಣಪ್ಪ ಇತರರಿದ್ದರು.