ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹಗಳನ್ನು ಕಾಲಿನಿಂದ ಒದ್ದು, ಚರಂಡಿಗೆ ಎಸೆದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ (ಜು.6) ಹಿಂದೂ ದೇವರ ವಿಗ್ರಹಗಳಿಗೆ ಅವಮಾನಿಸಿದ ಘಟನೆ ಶಿವಮೊಗ್ಗವನ್ನು ಏಕಾಏಕಿ ಪ್ರಕ್ಷುಬ್ದಗೊಳಿಸಿದೆ.ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯ ಗಣಪತಿ ವಿಗ್ರಹಕ್ಕೆ ಕಾಲಿನಿಂದ ಒದ್ದು, ನಗರ ವಿಗ್ರಹವನ್ನು ಚರಂಡಿಗೆ ಎಸೆದೆ ಧಾರ್ಮಿಗ ಭಾವನೆಗೆ ತೀವ್ರ ಘಾಸಿಗೊಳಿಸಿದ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಶೇಷಾದ್ರಿಪುರ ದ ಸೈಯದ್ ಅಹಮದ್( 32) ಹಾಗೂ ಬಾಪೂಜಿನಗರದ ರಹಮತ್ (50) ಎಂಬಿಬ್ಬರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಬಲೆಗೆ ಬಿದ್ದ ಆರೋಪಿಗಳು
ಹಿಂದೂ ದೇವರ ವಿಗ್ರಹಗಳಿಗೆ ಅಪಮಾನ ಮಾಡಿ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ತಂದ ಕಾರಣದಿಂದ ಮತೀಯ ಸೆಕ್ಷನ್ ಅಡಿಯಲ್ಲಿ ಹಾಗೂ ಎಸ್‌ಸಿ ಜನಾಂಗದ ಮಹಿಳಗೆ ದೌರ್ಜನ್ಯ ಎಸಗಿದೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ವಾತಾವರಣ ಬಿಗುಗೊಳ್ಳುತ್ತಿದ್ದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯರಿಂದ ಭಾರಿ ಆಕ್ರೋಶ
ಹಿಂದೂ ದೇವರ ವಿಗ್ರಹಗಳಿಗೆ ಕಾಲಿನಿಂದ ಒದ್ದು, ವಿಗ್ರಹಗಳನ್ನು ಚರಂಡಿಗೆ ಎಸೆದ ಪ್ರಕರಣ ಸಂಬಂಧ ಸ್ಥಳೀಯರು ಸೇರಿದಂತೆ ಶಾಸಕ ಚನ್ನಬಸಪ್ಪ ಮಾಜಿ ಸಚಿವ ಕೆ ಸಿ ಶೂರಪ್ಪ ಸೇರಿದಂತೆ ಹಲವರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಧಾರ್ಮಿಕ ಭಾವನೆ ಕೆರಳಿಸಿದ ಹಿನ್ನಲೆಯಲ್ಲಿ ಹಿಂದೂ ಸಮುದಾಯ ತೀವ್ರ ಆಕ್ರೋಶಗೊಂಡಿತ್ತು.
ಪರಿಶಿಷ್ಟ ಜನ ಪೂಜೆ ಮಾಡುವ ದೇವರಿಗೆ ಅಪಮಾನ ಆಗಿದೆ
ಮುಸಲ್ಮಾನ್ ಗುಂಡ ಅಕ್ರಮವಾಗಿ ಇದೇ ಪ್ರದೇಶದಲ್ಲಿ ಮನೆ ಕಟ್ಟುತ್ತಿದ್ದಾನೆ. ಆತನ ವಿರುದ್ದ ಯಾವುದೇ ಕ್ರಮ ಇಲ್ಲ. ಆತನ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದೀಗ ಹಿಂದೂಗಳು ಪೂಜೆ ಮಾಡುವ, ಪವಿತ್ರವಾಗಿ ಕಾಣುವ ಹಿಂದೂ ವಿಗ್ರಹಗಳನ್ನು ಕಾಲಿನಿಂದ ಒದ್ದು ಚರಂಡಿಗೆ ಎಸೆಯಲಾಗಿದೆ. ಘಟನೆಗೆ ಕಾರಣಾದ ಮೂವರು ಮುಸಲ್ಮಾನರನ್ನು ಬಂಧಿಸಬೇಕು ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.
ಮುಸಲ್ಮಾನರು ಹಿಂದೂಗಳ ವಿಗ್ರಹವನ್ನು ಬೂಟುಗಾಲಿನಿಂದ ಒದ್ದಾಗ ನಮಗೆ ಏನು ಅನಿಸಬೇಕು? ಇದನ್ನು ನೋಡಿಕೊಂಡು ನಾವು ಸುಮ್ಮನಿರಬೇಕಾ, ಇಂತಹ ಗೂಂಡಾಗಳ ವಿರುದ್ದ ಕಠಿಣ ಕ್ರಮ ಆಗಬೇಕು. ಇದು ನಿಯಮ ಉಲ್ಲಂಘಿಸುವ, ಭಾವನೆ ಕೆರಳಿಸುವ, ಅಪವಿತ್ರಗೊಳಿಸುವವರಿಗೆ ಪಾಠವಾಗಬೇಕು ಎಂದು ಕೆಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ. ಕೇವಲ ಸ್ಕ್ವಾಡ್ ಮಾಡಿದರೆ ಪ್ರಯೋಜನವಿಲ್ಲ, ಇಂತವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದರು.
ಮೂವರ ಕೃತ್ಯ ವಿಡಿಯೋದಲ್ಲಿ ಸೆರೆ
ಮೂವರು ಮುಸ್ಲಿಮ್ ಯುವಕರು ಈ ಕೃತ್ಯ ಎಸಗಿರುವ ಕುರಿತು ಸ್ಥಳೀಯ ಮಹಿಳೆಯರು ಸೆರೆ ಹಿಡಿದ ವಿಡಿಯೋದಲ್ಲಿ ದಾಖಲಾಗಿದೆ. ಈ ಪೈಕಿ ಇಬ್ಬರ ಗುರುತು ಪತ್ತೆಯಾಗಿತ್ತು. ಇವರಿಬ್ಬರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಮಹಿಳೆಯರು ಈ ಯುವಕರು ಹಿಂದೂ ವಿಗ್ರಹಗಳಿಗೆ ಅಪಮಾನ ಮಾಡುತ್ತಿರುವ ವಿಡಿಯೋ ಸೆರೆ ಹಿಡಿದಿದ್ದರು. ಇಷ್ಟೇ ಅಲ್ಲ ಯುವಕರು ಬೈಕ್‌ನಲ್ಲಿ ತೆರಳುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ.
