Asianet Suvarna News Asianet Suvarna News

'ಸಂಬಳಕ್ಕೆ ಇರೋರಿಗೆ ಕೊಬ್ಬಾ' ರಾಘವೇಂದ್ರ ಹೆಸರೇಳಿಕೊಂಡು ಆಫೀಸರ್‌ಗೆ ಅವಾಜ್!

ಸಂಸದ ರಾಘವೇಂದ್ರ ಹೆಸರು ಹೇಳಿಕೊಂಡು ಅರಣ್ಯ ಅಧಿಕಾರಿಗೆ ಆವಾಜ್/ ನೋಟಿಸ್ ನೀಡಿದ್ದಕ್ಕೆ ಕೂಗಾಡಿದ ಬಿಜೆಪಿ ನಾಯಕ/ ಕ್ಷಮೆ ಕೇಳುವುದಾಗಿ ಹೇಳಿದ ನಂತರ ಪ್ರಕರಣಕ್ಕೆ ಕೊನೆ

Shivamogga BJP Leader threatens Gajanur forest officer
Author
Bengaluru, First Published Oct 11, 2019, 8:06 PM IST

ಶಿವಮೊಗ್ಗ(ಅ. 11) ಶಿವಮೊಗ್ಗದ ಶಂಕರ ವಲಯ ಅರಣ್ಯ ವ್ಯಾಪ್ತಿಯ ರೇಂಜರ್ ಆಫೀಸರ್ ಮೇಲೆ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಮುಖಂಡ ಎಂದು ಹೇಳಿಕೊಂಡಿರುವ ವ್ಯಕ್ತಿ ಅವ್ಯಾಚ್ಯ ಶಬ್ದಗಳಿಂದ ಕೂಗಾಡಿ ಸಂಸದ ಬಿ.ವೈ.ರಾಘವೇಂದ್ರರವರ ಹೆಸರು ಹೇಳಿಕೊಂಡು ಮನೆಗೆ ನುಗ್ಗಿ ಧರಣಿ ಮಾಡಿ ಹೊಡೆದು ಹಾಕುತ್ತೇವೆ ಎಂದು ಗದರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತುಂಗಾ ಮೇಲ್ದಂಡೆ ಯೋಜನೆ ಎಇಇ ಕುಮಾರಸ್ವಾಮಿ ಎಂಬುವವರು ಗಾಜನೂರಿನ ಗಣಪತಿ ದೇವಾಲಯದ ಮುಂದೆ ಇದ್ದ ಮಾವಿನ ಮರಗಳನ್ನು ಕಡಿದು ಹಾಕಿದ್ದಾರೆ. ಇದಕ್ಕೆ ಶಂಕರ ಅರಣ್ಯ ವಲಯದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.

'ನಾಳೆ ಸಂಸದ ರಾಘಣ್ಣ ಸಕ್ರೇಬೈಲಿಗೆ ಬರುತ್ತಾರೆ ನೀವು ಬನ್ನಿ ನಿಮ್ಮ ಮುಖ ನೋಡ ಬೇಕು ಎಂದು ಕಿರುಚಾಡಿ, ಗಾಜನೂರಿನಲ್ಲಿ ಅರಣ್ಯದವರಿಂದ ಅರಣ್ಯ ಉಳಿಯುತ್ತಿಲ್ಲ ರೈತರಿಂದ, ನೀವು ಸಂಬಳಕ್ಕೆ ಇರೋದು ಸಂಬಳಕ್ಕೆ ಇರುವವರಿಗೆ ಇಷ್ಟೊಂದು ಕೊಬ್ಬಾ? ಎಂದು ಪ್ರಶ್ನಿಸಿದ್ದಾರೆ.

ಸಕ್ರೆಬೈಲ್ ಆನೆ ಬಿಡಾರಕ್ಕೆ ಹೊಸ ಲೋಗೋ.. ನೋಡಿದ್ರಾ!

ಒಬ್ಬ ಅಧಿಕಾರಿಗಳನ್ನ ವಹಿಸಿಕೊಳ್ಳುವ ಭರದಲ್ಲಿ ಇನ್ನೊಬ್ಬ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಮಾತನಾಡಲಾಗಿದೆ. ಅಧಿಕಾರ ಬರುವ ವರೆಗೆ ಒಂದು ಲೆಕ್ಕಾಚಾರದಲ್ಲಿರುವ ಬಿಜೆಪಿ ಅಧಿಕಾರ ಬಂದ ಮೇಲೆ ದರ್ಪ ತೋರಲು ಆರಂಭಿಸಿದ್ರಾ? ಎಂದು  ಮಂಗಳೂರಿನ ಶಶಿಧರ್ ಶೆಟ್ಟಿ ಎಂಬುವವರು ಪ್ರಶ್ನೆ ಮಾಡಿದ್ದಾರೆ.

ಇದೆಲ್ಲ ಆದ ಮೇಲೆ ಗಿರಿರಾಜ್ ಅರಣ್ಯ ಅಧಿಕಾರಿಯ ಕ್ಷಮೆ ಕೇಳುವುದಾಗಿ ಹೇಳಿದ ನಂತರ ಪ್ರಕರರಣ ಕೊನೆಯಾಗಿದೆ. 

ಘಟನೆಯ ವಿವರ: ಗಾಜನೂರಿನ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ನಾಲ್ಕು ಮರ ಕಡಿಯಲು ಅಪ್ಪರ್ ತುಂಗ ಯೋಜನೆಯ ಅಧಿಕಾರಿಗಳು ಅರಣ್ಯಕ್ಕೆ ಅರ್ಜಿ ಬರೆದು ಎರಡು ವರ್ಷಗಳಾಗಿವೆ. ಆದರೆ ಅರ್ಜಿಯನ್ನ ಅರಣ್ಯ ಇಲಾಖೆ ಮರಕಡಿಯಲು ಅನುಮತಿ ನೀಡಿರಲಿಲ್ಲ ಈ ಹಿನ್ನಲೆಯಲ್ಲಿ  ತುಂಗ ಮೇಲ್ದಂಡೆ ಯೋಜನಾ ಅಧಿಕಾರಿಗಳು ಇತ್ತೀಚೆಗೆ ಏಕಾಏಕಿ ಮರ ಕಡಿದು ಹಾಕಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಮರ ಕಡಿದು ಹಾಕಿದ ಅಧಿಕಾರಿಗಳಿಗೆ  ನೋಟೀಸ್ ನೀಡಿದೆ.

ಇದನ್ನ ಯುವ ಮುಖಂಡ ಗಿರಿರಾಜ್ ಒಬ್ಬ ಅಧಿಕಾರಿಗಳ ಪರ ವಹಿಸಿಕೊಂಡು ಇನ್ನೊಬ್ಬ ಅಧಿಕಾರಿಗಳನ್ನ ಬಾಯಿಗೆ ಬಂದಂತೆ ಬೈದಾಡಿದ್ದಾರೆ. ಇದು ಎರಡು ದಿನಗಳ ಹಿಂದೆ ನಡೆದಿದೆ. ಆದರೆ ಗುರುವಾರ ಸಕ್ರೆಬೈಲಿಗೆ ಬಂದ ಸಂಸದ ರಾಘವೇಂದ್ರರವರಿಗೆ ಡಿಎಫ್ಒ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆಯನ್ನ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

 

Follow Us:
Download App:
  • android
  • ios