ಶಿವಮೊಗ್ಗ : ಮೋದಿಗಾಗಿ ದೇವಾಲಯವೊಂದರಲ್ಲಿ ತೇಜಸ್ವಿ ಸೂರ್ಯ ಹೋಮ

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಶಿವಮೊಗ್ಗದ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. 

MP Tejaswi Surya Offers Pooja In Shivamogga Temple

ಶಿವಮೊಗ್ಗ [ಅ.14]: ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ  ನಡೆದ ಶತ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು.

ಬೆಳಗ್ಗೆ 6 ಕ್ಕೆ ಪ್ರಾರಂಭಗೊಂಡ ಹೋಮದಲ್ಲಿ ತೇಜಸ್ವಿ ಸೂರ್ಯ ಝರಿ ಪಂಜೆ, ಶಲ್ಯ ಧರಿಸಿದ್ದರು. ದೇವಸ್ಥಾನದ ಪ್ರಮುಖ ಅರ್ಚಕ ಅ.ಪ. ರಾಮಭಟ್ಟರ ನೇತೃತ್ವದಲ್ಲಿ ನಡೆದ ಹೋಮದಲ್ಲಿ 11 ಜನ ಋತ್ವಜರು, 5 ಸಹಾಯಕರು ಪಾಲ್ಗೊಂಡಿದ್ದರು.

ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಇನ್ನೂ ಹೆಚ್ಚಿಗೆ ಶಕ್ತಿ ನೀಡಲಿ ಎಂದು ತೇಜಸ್ವಿ ಸೂರ್ಯ ಅವರು ಮೋದಿ ಹೆಸರಿನಲ್ಲಿ ಸಂಕಲ್ಪ ಮಾಡಿ ಹೋಮ ನೆರವೇರಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಂತರ ದೇವಸ್ಥಾನದ ವತಿಯಿಂದ ಸಂಸದ ತೇಜಸ್ವಿ ಸೂರ್ಯರನ್ನು ಅಭಿನಂದಿಸಲಾಯಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ಭಾನುಪ್ರಕಾಶ್ ಇದ್ದರು.

Latest Videos
Follow Us:
Download App:
  • android
  • ios