ತೀರ್ಥಹಳ್ಳಿ ತಾಲೂಕಿನಲ್ಲಿ ರುವ ಈ ಕವಲೆದುರ್ಗ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಹಸಿರು ಹೊದ್ದಿಕೊಂಡಿರುವ ಪ್ರಕೃತಿ, ಮೋಡಗಳ ಕಣ್ಣಾಮುಚ್ಚಾಲೆ, ತಂಗಾಳಿ, ಮಂಜಿ ನಾಟ ಹಾಗೂ ಜಿಟಿ ಜಿಟಿ ಮಳೆ ಇವೆಲ್ಲ ದರ ನಡುವೆ ಸದ್ದಿಲ್ಲದೆ ಎಲ್ಲರನ್ನೂ ಕರೆಯುತ್ತಿದೆ. 

ವಿದ್ಯಾ ಶಿವಮೊಗ್ಗ

ಶಿವಮೊಗ್ಗ [ಅ.14]: ಒಂದು ಕಾಲದಲ್ಲಿ ರಾಜವೈಭೋಗದಲ್ಲಿ ಮುಳುಗಿದ್ದ ಕವಲೆದುರ್ಗ ಈಗ ಅಕ್ಷರಶಃ ಪಾಳುಬಿದ್ದ ಕೋಟೆ. ಆದರೆ ದಟ್ಟಾರಣ್ಯದ ನಡುವೆ, ಪ್ರಕೃತಿಯ ನಡುವೆ ಈಗಲೂ ರಾಜ, ರಾಣಿಯರ, ಅರಮನೆಯ ದರ್ಬಾರಿನ ಕತೆಗಳನ್ನು ಪಿಸುದನಿಯಲ್ಲಿ ಹೇಳುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 

ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ರುವ ಈ ಕವಲೆದುರ್ಗ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಹಸಿರು ಹೊದ್ದಿಕೊಂಡಿರುವ ಪ್ರಕೃತಿ, ಮೋಡಗಳ ಕಣ್ಣಾಮುಚ್ಚಾಲೆ, ತಂಗಾಳಿ, ಮಂಜಿ ನಾಟ ಹಾಗೂ ಜಿಟಿ ಜಿಟಿ ಮಳೆ ಇವೆಲ್ಲ ದರ ನಡುವೆ ಸದ್ದಿಲ್ಲದೆ ಎಲ್ಲರನ್ನೂ ಕರೆಯುತ್ತಿದೆ. ಇಲ್ಲಿ ರಾಜರ ಕತೆ ಮಾತ್ರವಲ್ಲ, ಪ್ರಕೃತಿಯೂ ತನ್ನ ಕತೆಯನ್ನು ಬಿಚ್ಚಿಡುತ್ತಿದೆ. ತನ್ನತನವನ್ನು ತೋರಿಸುತ್ತಿದೆ. ತನ್ನ ಸೌಂದರ್ಯವನ್ನು ಬಿಚ್ಚಿಡುತ್ತಿದೆ. 

ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯಲುಸಿದ್ಧವಾಗಿದೆ.

ಪ್ರವಾಸಿಗರ ಸ್ವರ್ಗ: ಘಟ್ಟನಗರಿ ಶಿವಮೊಗ್ಗ ಜಿಲ್ಲೆ ಪ್ರವಾಸಿಗರ ಸ್ವರ್ಗ. ಇಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೇನೂ ಕೊರತೆ ಇಲ್ಲ. ತೀರ್ಥಹಳ್ಳಿಯಿಂದ 16 ಕಿ.ಮೀ. ದೂರದಲ್ಲಿರುವ ಕೆಳದಿ ಅರಸರ ಗಿರಿ ದುರ್ಗವೇ ಈ ‘ಕವಲೆದುರ್ಗ’. ದಟ್ಟ ವಾದ ಅರಣ್ಯದ ನಡುವೆ ಎತ್ತರದ ಗುಡ್ಡದ ಮೇಲೆ ನಿರ್ಮಿಸಲಾಗಿರುವ ಕೋಟೆ ಯು ಇತಿಹಾಸ. ಅದರ ಪರಂಪರೆ ಸಾರುತ್ತದೆ. ಈ ಕೋಟೆಯಲ್ಲಿ ಸಾವಿರ ಕಂಬಗಳ ದರ್ಬಾರ್ ಹಾಲ್, ಸ್ನಾನ ಗೃಹ, ವಿಶ್ರಾಂತ ಗೃಹ ಸೇರಿದಂತೆ ಮುಂತಾದ ಅನೇಕ ಪಾರಂಪರಿಕ ಸ್ಥಳ ಗಳನ್ನು ಪಾಳುಬಿದ್ದ ಸ್ಥಿತಿಯಲ್ಲಿ ನೋಡಬಹುದು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರವಾಸಿಗರ ಆಕರ್ಷಕ ತಾಣ: ಮಳೆ ಗಾಲ ಆರಂಭವಾಗುತ್ತಿದ್ದಂತೆ ಪ್ರವಾಸಿ ಗರು ಜಲಪಾತಗಳತ್ತಾ ಹೆಚ್ಚಾಗಿ ಹೆಜ್ಜೆ ಹಾಕುವುದು ಸಾಮಾನ್ಯ. ಆದರೆ ಹಚ್ಚ ಹಸಿರುವ ಹೊದ್ದಿರುವ ಕವಲೆದುರ್ಗ ಕೂಡ ತನ್ನ ಪ್ರಕೃತಿಯ ಸೊಬಗಿನಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಾಗಾಗಿ ಪ್ರವಾಸಿಗರ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆ ಹೆಚ್ಚಾದ ಸಂದರ್ಭದಲ್ಲಿ ಜಾರಿಕೆ ಯಿಂದಾಗಿ ಕೋಟೆಯನ್ನು ಹತ್ತುವುದು ಕೊಂಚ ಕಷ್ಟ. ಆದರೂ ಸಹ ಮಳೆ- ಬಿಸಿಲು- ಚಳಿ ಯಾವುದೇ ಇದ್ದರೂ ಅದ್ಯಾವುದನ್ನು ಲೆಕ್ಕಿಸದೆ ಇಲ್ಲಿ ಪ್ರವಾಸಿ ಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಸೌಂದರ್ಯದೊಂದಿಗೆ ಇತಿಹಾಸ ಹೇಳುತ್ತೆ ಕವಲೇದುರ್ಗ...

ಮಳೆ ಹೆಚ್ಚಾದಂತೆ ಇಲ್ಲಿನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಮಳೆ ಹಾಗೂ ಸುತ್ತಮುತ್ತಲಿನ ಹಚ್ಚ ಹಸಿರ ವನರಾಶಿಗಳನ್ನು ಕಂಡ ಪ್ರವಾಸಿಗರು ಕಾನನದ ನಡುವೆ ಒಂದಿಷ್ಟು ರಿಲ್ಯಾಕ್ಸ್ ಆಗುತ್ತಿದ್ದಾರೆ. ಕೋಟೆಯನ್ನು ಏರುತ್ತಾ ಏರುತ್ತಾ ಪ್ರವಾಸಿಗರು ಅಲ್ಲಲ್ಲಿ ಸೆಲ್ಫಿಗೆ ಪೋಸ್ ನೀಡುತ್ತಾ ಕುಣಿದು ಕುಪ್ಪಳಿಸುತ್ತಿ ದ್ದಾರೆ. ಇಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲು ಶೌಚಾಲಯದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.