ಶಿವಮೊಗ್ಗ (ನ.11):  ತಿರುಪತಿ, ಚೆನ್ನೈಗೆ ಶಿವಮೊಗ್ಗದಿಂದ  ನೂತನ ರೈಲು ಸೇವೆ ಆರಂಭವಾಗಿದೆ. ಇದರಿಂದ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗಿದೆ. ರೈಲು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಬಿಜೆಪಿ ಎಂಎಲ್ ಸಿ ಆಯನೂರು ಮಂಜುನಾಥ್ ಮುಖ್ಯಮಂತ್ರಿಯಾಗುವ ಆಕಾಂಕ್ಷೆ ವ್ಯಕ್ತಪಡಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸಂಸದರಾಗಿಯೇ ಉಳಿಯಬೇಕು. ರಾಜ್ಯದ ಕಡೆಗೆ ಬರುವುದು ಬೇಡ. ಯಾಕೆಂದರೆ ತಾವು ಮುಂದಿನ ಮುಖ್ಯಮಂತ್ರಿ ಆಗಬೇಕು ಅಂದುಕೊಂಡಿರುವುದಾಗಿ ತಿಳಿಸಿ ಆಯನೂರು ಮಂಜುನಾಥ್‌ ಅವರು ಸಭೆಯನ್ನು ನಗೆಯ ಚಟಾಕಿ ಹಾರಿಸಿದರು.

‘ಕೇಂದ್ರ, ಯಡಿಯೂರಪ್ಪ ಆಶೀರ್ವಾದದಿಂದ ರೈಲ್ವೆ ಅಭಿವೃದ್ಧಿ ಸಾಧ್ಯವಾಗಿದೆ’...

ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಭಾನುವಾರ ಶಿವಮೊಗ್ಗ-ಚೆನ್ನೈ, ಶಿವಮೊಗ್ಗ-ತಿರುಪತಿ, ಮೈಸೂರು-ಶಿವಮೊಗ್ಗ ರೈಲುಗಳಿಗೆ ಹಸಿರು ನಿಶಾನೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿದರು.

2010ರಿಂದ 16ರವರೆಗೆ  ರಾಜ್ಯಸಭಾ ಸದಸ್ಯರಾಗಿದ್ದ ಇವರು 1998ರಲ್ಲಿ 12ನೇ ಲೋಕಸಭಾ ಚುನಾವಣೆಯಲ್ಲಿ ಸಾರೆಕೊಪ್ಪ ಬಂಗಾರಪ್ಪ ಅವರನ್ನು ಅವರನ್ನು ಶಿವಮೊಗ್ಗ ಕ್ಷೇತ್ರದಲ್ಲಿ ಸೋಲಿಸಿ ಸಂಸದರಾಗಿದ್ದರು.