ರೈತರಿಗೆ ಗುಡ್ ನ್ಯೂಸ್ : ತಿಂಗಳಿಗೆ 3 ಸಾವಿರ ಪಿಂಚಣಿ

ಶಿವಮೊಗ್ಗ ಜಿಲ್ಲೆಯ ರೈತರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್.  ತಿಂಗಳಿಗೆ ಮೂರು ಸಾವಿರ ಪಿಂಚಣಿ ಪಡೆವ ಅವಕಾಶ ಇಲ್ಲಿದೆ. 

Farmers Get 3 Thousand Pension under Kisan Man Dhan Scheme

ಶಿವಮೊಗ್ಗ (ಅ.09): ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್-ಮಾನ್ ಧನ್ ರೈತರ ವೃದ್ಧಾಪ್ಯ ಪಿಂಚಣಿ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ 60 ವರ್ಷ ತುಂಬಿದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಾಸಿಕ ರು. 3 ಸಾವಿರ ಪಿಂಚಣಿ ನೀಡಲಾಗುವುದು. ಗರಿಷ್ಠ 2  ಹೆಕ್ಟರ್ ಭೂಹಿಡುವಳಿ ಹೊಂದಿರುವ 18 - 40 ವರ್ಷ ದೊಳಗಿನ ಎಲ್ಲಾ ರೈತರು ಈ ಯೋಜನೆ ಪ್ರಯೋಜನ ಪಡೆಯಬಹುದು. 

ವಯಸ್ಸಿನ ಆಧಾರದ ಮೇಲೆ ಮಾಸಿಕ ರು. 55 ರಿಂದ 200 ರವರೆಗೆ ಮಾಸಿಕ ಪಿಂಚಣಿ ವಂತಿಕೆ ನೀಡಬೇಕು. ರೈತರು ಪಾವತಿಸುವ ವಂತಿಕೆ ಮೊತ್ತಕ್ಕೆ ಸಮಾನ ಮೊತ್ತವನ್ನು ಕೇಂದ್ರ ಸರ್ಕಾರವು ಪಿಂಚಣಿ ನಿಧಿಗೆ ಪಾವತಿಸುತ್ತದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೋಂದಣಿಗೆ ಆಸಕ್ತ ರೈತರು ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಜನ್ಮ ದಿನಾಂಕ ಮತ್ತು ನಾಮ ನಿರ್ದೇಶನದ ದಾಖಲೆಗಳೊಂದಿಗೆ ನಾಗರಿಕ ಸೇವಾ ಕೇಂದ್ರಗಳಲ್ಲಿ ನೊಂದಣಿ ಮಾಡಿಸಿಕೊಂಡು ಯೋಜನೆ ಉಪಯೋಗ ಪಡೆಯುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಧಿಕಾರಿಗಳನ್ನು ಸಂರ್ಪಕಿಸುವಂತೆ ತಿಳಿಸಲಾಗಿದೆ. 

Latest Videos
Follow Us:
Download App:
  • android
  • ios