ಗಮನಿಸಿ ! ಬೆಂಗಳೂರು - ಶಿವಮೊಗ್ಗ ಪ್ಯಾಸೆಂಜರ್ ರೈಲು ಸಮಯ ಬದಲು

ಶಿವಮೊಗ್ಗ ಹಾಗೂ ಬೆಂಗಳೂರು ನಡುವಿನ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿ  ಬದಲಾಗಿದ್ದು, ಇಲ್ಲಿದೆ ಹೊಸ ವೇಳಾಪಟ್ಟಿ. 

Bengaluru Shivamogga Passenger Train Time Table Change

ಶಿವಮೊಗ್ಗ [ಅ.19]: ಬೆಂಗಳೂರು-ಶಿವಮೊಗ್ಗ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದ್ದು, ಅ. 18 ರಿಂದ ನೂತನ ವೇಳಾಪಟ್ಟಿ ಜಾರಿಗೆ ಬಂದಿದೆ.

ಶಿವಮೊಗ್ಗ-ಬೆಂಗಳೂರು (ರೈಲು ಸಂಖ್ಯೆ 56918) ರೈಲು ಮಧ್ಯಾಹ್ನ 2 ಗಂಟೆಗೆ ಬದಲಾಗಿ ಮಧ್ಯಾಹ್ನ 12.30ಕ್ಕೆ ಹೊರಡಲಿದ್ದು, ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣವನ್ನು ರಾತ್ರಿ 7.30 ಗಂಟೆಗೆ ತಲುಪಲಿದೆ. ಬೆಂಗಳೂರು- ಶಿವಮೊಗ್ಗ ಪ್ಯಾಸೆಂಜರ್ (ರೈಲು ಸಂಖ್ಯೆ 56917) ರೈಲು ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಬೆಳಗ್ಗೆ 6.30 ರ ಬದಲಾಗಿ ಬೆಳಗ್ಗೆ 5.30 ಗಂಟೆಗೆ ಹೊರಡಲಿದ್ದು, ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ನಗರವನ್ನು ತಲುಪಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ರೈಲಿನಲ್ಲಿ ಒಟ್ಟು 9 ಕೋಚ್‌ಗಳಿದ್ದು, ಇದರಲ್ಲಿ 7 ಸಾಮಾನ್ಯ, 2 ದ್ವಿತೀಯ ದರ್ಜೆ ಬೋಗಿಗಳಿರುತ್ತವೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಶಿವಮೊಗ್ಗ - ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲು...

Latest Videos
Follow Us:
Download App:
  • android
  • ios