Asianet Suvarna News Asianet Suvarna News
2331 results for "

ಪ್ರವಾಹ

"
No Excuse For Irresponsible Officers in Flood ManagementNo Excuse For Irresponsible Officers in Flood Management

ಹೊಳೆಆಲೂರು: ನೆರೆ ನಿರ್ವಹಣೆ ವಿಷಯದಲ್ಲಿ ಬೇಜವಾಬ್ದಾರಿ ಸಹಿಸೋದೆ ಇಲ್ಲ

ನೆರೆಯಿಂದಾಗಿ ಪದೇ ಪದೆ ಸಂಕಷ್ಟಕ್ಕೆ ಒಳಗಾಗುತ್ತಿರುವ ಜನರ ಸಮಸ್ಯೆ ಪರಿಹಾರಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿರಂತರ ಕಾಳಜಿ ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಬೇಜವಾಬ್ದಾರಿ ತೋರಿದಲ್ಲಿ ಅವರನ್ನು ಕ್ಷಮಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಎಚ್ಚರಿಸಿದ್ದಾರೆ.

Gadag Oct 24, 2019, 9:09 AM IST

karnataka flood Rain decreaseskarnataka flood Rain decreases

ತಗ್ಗಿದ ಮಳೆ ಆರ್ಭಟ: ಕುಗ್ಗಿದ ನೆರೆ

ರಾಜ್ಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಬುಧವಾರ ತಗ್ಗಿದೆ. ಅಲ್ಲಿನ ಜಲಾನಯನ ಪ್ರದೇಶದಲ್ಲಿಯೂ ಮಳೆ ಇಳಿಮುಖವಾಗಿರುವುದು ನೆರೆ ಭೀತಿ ಆತಂಕ ಎದುರಿಸುತ್ತಿದ್ದ ಜನರು ನಿಟ್ಟುಸಿರುಬಿಡುವಂತಾಗಿದೆ.

BENGALURU Oct 24, 2019, 9:07 AM IST

precaution to stop spread of diseases in flooded areaprecaution to stop spread of diseases in flooded area

ನೆರೆ: ಸಾಂಕ್ರಾಮಿಕ ರೋಗ ತಡೆಗೆ ಸರ್ಕಾರ ಆದೇಶ

ಉತ್ತರ ಕರ್ನಾಟಕದ ನೆರೆ ಹಾಗೂ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ ತುರ್ತು ಆದೇಶ ಹೊರಡಿಸಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳ ಪರಿಹಾರ ಕಾರ್ಯದ ಮೇಲ್ವಿಚಾರಣೆಗೆ ಇಲಾಖೆಯ ಉತ್ತರ ಕರ್ನಾಟಕದ ಅಪರ ನಿರ್ದೇಶಕರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ.

state Oct 24, 2019, 8:57 AM IST

Interrupted by Rain For Funeral in GadagInterrupted by Rain For Funeral in Gadag

ಭಾರೀ ಮಳೆ: ಗದಗನಲ್ಲಿ ಶವಸಂಸ್ಕಾರಕ್ಕೂ ಅವಕಾಶ ನೀಡದ ವರುಣ

ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವಂತೆ ಮಳೆ ನೀರು ಶವಸಂಸ್ಕಾರಕ್ಕೂ ಅಡ್ಡಿ ಮಾಡಿದೆ. ಹೌದು,  ಇಲ್ಲಿನ ರೆಹಮತ್‌ ನಗರದ ವ್ಯಕ್ತಿಯೊಬ್ಬ ಮೃತಪಟ್ಟಾಗ ಕುಟುಂಬಸ್ಥರು, ಬಂಧುಗಳು ಶವಸಂಸ್ಕಾರ ಮಾಡಲು ಬುಧವಾರ ಪರದಾಡಿದ ಘಟನೆ ನಡೆದಿದೆ.
 

Gadag Oct 24, 2019, 8:56 AM IST

Minister Basavaraj Bommai Visit Flood Affected AreaMinister Basavaraj Bommai Visit Flood Affected Area

ಶಿಗ್ಗಾಂವಿ: ನೆರೆ ಪೀಡಿತ ಪ್ರದೇಶಕ್ಕೆ ಗೃಹ ಸಚಿವ ಬೊಮ್ಮಾಯಿ ಭೇಟಿ

ತಾಲೂಕಿನ ಹುನಗುಂದ ಗ್ರಾಮದ ನೆರೆ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೆರೆಯ ಕಟ್ಟೆಯನ್ನು ತಕ್ಷಣದಿಂದಲೆ ಗಟ್ಟಿಗೊಳಿಸುವ ಹಾಗೂ ರಸ್ತೆ ದುರಸ್ತಿ ನಿರ್ಮಾಣದ ಕೆಲಸಕ್ಕೆ ಕಾರ್ಯಪ್ರರ್ವರ್ತರಾಗಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
 

Haveri Oct 24, 2019, 8:31 AM IST

Outdoor Lesson to Children During Flood in GangavatiOutdoor Lesson to Children During Flood in Gangavati

ಗಂಗಾವತಿ: ಪ್ರವಾಹ ಬಂದರೆ ಇಲ್ಲಿನ ಮಕ್ಕಳಿಗೆ ಬಯಲಲ್ಲೇ ಪಾಠ

ತುಂಗಭದ್ರಾ ನದಿಗೆ ಪ್ರವಾಹ ಬಂತೆಂದರೆ ಈ ಮಕ್ಕಳಿಗೆ ಮರದ ಕೆಳಗೆ ಬಯಲಲ್ಲೇ ಪಾಠ! ಇದು ಪ್ರಸಿದ್ಧ ಪ್ರವಾಸಿ ತಾಣ ಕೊಪ್ಪಳ ಜಿಲ್ಲೆಯ ಗಂಗಾವತಿಯ ವಿರೂಪಾಪುರಗಡ್ಡೆಯ ಪಕ್ಕದಲ್ಲೇ ಇರುವ ರಾಘವೇಂದ್ರ ಕಾಲನಿಯ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪಡಿಪಾಟಿಲು. 

Koppal Oct 24, 2019, 8:13 AM IST

cm bs yediyurappa requests people to help flood victimscm bs yediyurappa requests people to help flood victims

ನೆರೆ ಸಂತ್ರಸ್ತರಿಗೆ ದೇಣಿಗೆ ನೀಡಲು ಸಿಎಂ ಮನವಿ

ಸಿಎಂ ಬಿ. ಎಸ್. ಯಡಿಯೂರಪ್ಪ ಸಂತ್ರಸ್ತರಿಗೆ ನೆರವಾಗಲು ಜನರಿಗೆ ಮನವಿ ಮಾಡಿದ್ದಾರೆ. ಬೆಳಗಾವಿ, ಉತ್ತರ ಕನ್ನಡ, ಕೊಡಗು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ಜನತೆಗೆ ಸಂಕಷ್ಟಉಂಟಾಗಿದೆ. ನೊಂದ ಸಂತ್ರಸ್ತರಿಗೆ ಮಾನವೀಯ ನೆಲೆಗಟ್ಟಿನ ಮೇಲೆ ರಾಜ್ಯದ ಜನತೆ ಸ್ಪಂದಿಸಬೇಕು ಎಂದು ಕೋರಿದ್ದಾರೆ.

state Oct 24, 2019, 8:07 AM IST

Karnataka Water Reservoir Fill up Second Time Due To Heavy RainKarnataka Water Reservoir Fill up Second Time Due To Heavy Rain

ರಾಜ್ಯದ ಅಣೆಕಟ್ಟುಗಳು 2ನೇ ಬಾರಿ ಸಂಪೂರ್ಣ ಭರ್ತಿ: ಈಗ ಹೆಚ್ಚಿದೆ ಆತಂಕ

ಕಳೆದ ಮೂರು ತಿಂಗಳಲ್ಲೇ ಎರಡು ಬಾರಿ ಭಾರಿ ಪ್ರವಾಹ ಉಂಟಾಗಿದ್ದರ ಪರಿಣಾಮ ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ತುಂಬಿವೆ. ಸತತವಾಗಿ ಒಳ ಹರಿವು-ಹೊರ ಹರಿವು ಪ್ರಕ್ರಿಯೆ ನಡೆದೇ ಇದೆ. ಇದು ಗಂಭೀರ ಪ್ರಮಾಣ ಮುಟ್ಟಿರುವುದರಿಂದ ಅಣೆಕಟ್ಟುಗಳ ಸುರಕ್ಷತೆಯ ಆತಂಕ ಎದುರಾಗಿದೆ. 

state Oct 24, 2019, 7:43 AM IST

Siddaramaiah Travel in Police Jeep in Badami in Bagalkot DistrictSiddaramaiah Travel in Police Jeep in Badami in Bagalkot District

ಬಾದಾಮಿ: ಸ್ವಂತ ಕಾರು ಬಿಟ್ಟು ಪೊಲೀಸರ ಜೀಪು ಹತ್ತಿದ ಸಿದ್ದರಾಮಯ್ಯ

ಗುಡ್ಡದ ರಸ್ತೆಯಲ್ಲಿ ಕಾರು ಹೋಗದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕಾರಿಳಿದು ಪೊಲೀಸ್ ಜೀಪಿನಲ್ಲಿ ಪ್ರಯಾಣ ಬೆಳೆಸಿದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. 

Bagalkot Oct 23, 2019, 3:25 PM IST

Landslide in Kittur in Belagavi DistrictLandslide in Kittur in Belagavi District

ವರುಣನ ಅಬ್ಬರ: ಬೆಳಗಾವಿಯಲ್ಲಿ ಐದು ಅಡಿ ರಸ್ತೆ ಕುಸಿತ

ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿ ಪಟ್ಟಣ ಸೇರಿದಂತೆ ಮೂರು ಗ್ರಾಮಗಳಿಗೆ ಆತಂಕ ಎದರಾಗಿದೆ.
 

Belagavi Oct 23, 2019, 11:22 AM IST

Again Flood in Belagavi DistrictAgain Flood in Belagavi District

ಬೆಳಗಾವಿ: ನದಿ ತೀರದ ಗ್ರಾಮಸ್ಥರಲ್ಲಿ ಮತ್ತೆ ಜಲಕಂಟಕ

ನೆರೆಯ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಮಳೆಯಾಗಿದೆ. ಹೀಗಾಗಿ ಮಹಾರಾಷ್ಟ್ರದ ಕೊಯ್ನಾ ಸೇರಿದಂತೆ ವಿವಿಧ ಜಲಾಶಗಳಿಂದ ಕೃಷ್ಣಾ ನದಿಗೆ 1.11 ಲಕ್ಷ ಕ್ಯುಸೆಕ್‌ ನೀರನ್ನು ಹರಿಯಬಿಡಲಾಗಿದೆ. ಕೃಷ್ಣಾ ನದಿಯ ಒಳಹರಿವಿನ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ. ನದಿ ತೀರದ ಗ್ರಾಮಸ್ಥರು ಮತ್ತೆ ಜಲಕಂಟಕ ಎದುರಿಸುವಂತಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿ ಎರಡು ಮತ್ತು ರಾಯಬಾಗ ತಾಲೂಕಿನಲ್ಲಿ 1 ಸೇತುವೆ ಜಲಾವೃತಗೊಂಡಿವೆ.
 

Belagavi Oct 23, 2019, 11:01 AM IST

Siddaramaiah Angry on Officers in Badami in Bagalkot DistrictSiddaramaiah Angry on Officers in Badami in Bagalkot District

ಬಾದಾಮಿಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದ ಸಿದ್ದರಾಮಯ್ಯ

ಸ್ವಕ್ಷೇತ್ರ ಬಾದಾಮಿಯಲ್ಲಿ ನೆರೆ ಪೀಡಿತ ಪ್ರದೇಶ ಭೇಟಿ ವೇಳೆ ಮಾಜಿ ಸಿಎಂ  ಸಿದ್ದರಾಮಯ್ಯ  ಅವರು ಅಧಿಕಾರಿಗಳ ವಿರುದ್ಧ ಫುಲ್ ಗರಂ ಆದ ಪ್ರಸಂಗ ನಡೆದಿದೆ. ಹೌದು, ಸಿದ್ದರಾಮಯ್ಯ ಜಿಲ್ಲೆಯ ಬಾದಾಮಿ ತಾಲೂಕಿನ ನೋವಿನಕೊಪ್ಪ ಗ್ರಾಮದ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿದ್ರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದಿಲ್ಲ, ಹೀಗಾಗಿ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು.


 

Bagalkot Oct 23, 2019, 10:42 AM IST

Pregnant Women's Faces Problems in Flood in NaragundPregnant Women's Faces Problems in Flood in Naragund

ನರಗುಂದ: ಪ್ರವಾಹದಿಂದ ಆಸ್ಪತ್ರೆಗೆ ತೆರಳಲು ಗರ್ಭಿಣಿಯರ ಹರಸಾಹಸ

ತಾಲೂಕಿನ ಬೆಣ್ಣಿ ಹಳ್ಳಕ್ಕೆ ಹೊಂದಿಕೊಂಡಿರುವ ಸುರಕೋಡ ಗ್ರಾಮವು ಕಳೆದ ಮೂರು ದಿನಗಳಿಂದ ಪ್ರವಾಹದಿಂದ ನಡುಗಡ್ಡೆಯಾಗಿ ಸಂಪರ್ಕಕ ಳೆದುಕೊಂಡಿದೆ. ಗ್ರಾಮದ ಇಬ್ಬರು ಮಹಿಳೆಯರನ್ನು ಮಂಗಳವಾರ ಹೆರಿಗೆಂದು ಆಸ್ಪತ್ರೆಗೆ ಕರೆದುಕೊಂಡು ಬರಲು ಎನ್‌ಡಿಎಫ್‌ಆರ್ ತಂಡದವರು ಹರಸಾಹಸ ಪಟ್ಟಿದ್ದಾರೆ. 

Gadag Oct 23, 2019, 8:54 AM IST

Today NDRF Team Will Arrive At Haveri DistrictToday NDRF Team Will Arrive At Haveri District

ಪ್ರವಾಹಕ್ಕೆ ನಲುಗಿದ ಹಾವೇರಿ ಜಿಲ್ಲೆಗೆ ಎನ್‌ಡಿಆರ್‌ಎಫ್‌ ತಂಡ

ಮಳೆಯಿಂದ ಮನೆ ಕುಸಿತ, ಮನೆಯೊಳಗೆ ನೀರು ತುಂಬಿದ ನಿರಾಶ್ರಿತರಾದವರಿಗೆ ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಕೆರೆಗಳ ಪರಿಶೀಲನೆ ನಡೆಸಿ ಬಿರುಕು ಕಂಡರೆ ತಕ್ಷಣವೇ ಎಂಜಿನಿಯರುಗಳ ನೆರವು ಪಡೆದು ಮುನ್ನೆಚ್ಚರಿಕೆಯಾಗಿ ಕೆರೆ ದಂಡೆಗಳನ್ನು ಭದ್ರಪಡಿಸುವ ಕಾರ್ಯವನ್ನು ಕೈಗೊಳ್ಳುವಂತೆ ಜಿಲ್ಲೆಯ ಎಲ್ಲ ತಹಸೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದ್ದಾರೆ. 
 

Haveri Oct 23, 2019, 8:37 AM IST

1500 Families Lost their Houses, Assets  in Haveri District1500 Families Lost their Houses, Assets  in Haveri District

ಹಾವೇರಿ: ಪ್ರವಾಹಕ್ಕೆ ಬೀದಿಗೆ ಬಿದ್ದ 1500 ಕುಟುಂಬಗಳು

ನೆರೆ ಹಾವಳಿಯಿಂದ ಮನೆ, ಮಠ ಕಳೆದುಕೊಂಡ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಬೀಳುತ್ತಿರುವ ಮಳೆಗೆ ಮತ್ತೆ ಒಂದೂವರೆ ಸಾವಿರ ಕುಟುಂಬಗಳ ಜನರು ಸಂತ್ರಸ್ತರಾಗಿದ್ದಾರೆ. ಬೆಳೆದು ನಿಂತಿರುವ ಪೈರು ನೀರು ಪಾಲಾಗಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಗೀಡಾಗಿವೆ.

Haveri Oct 23, 2019, 8:23 AM IST