ಶಿಗ್ಗಾಂವಿ: ನೆರೆ ಪೀಡಿತ ಪ್ರದೇಶಕ್ಕೆ ಗೃಹ ಸಚಿವ ಬೊಮ್ಮಾಯಿ ಭೇಟಿ
ಹುನಗುಂದ ಗ್ರಾಮದ ನೆರೆ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ| ಬಂದ್ ಆದ ಕೆರೆಯ ಹಾಗೂ ಜೇಕಿನಕಟ್ಟಿ ಹುನಗುಂದ ರಸ್ತೆ| ರಸ್ತೆ ಬಂದಾಗಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಗೆ ಅಸ್ತವ್ಯಸ್ತವಾಗಿದೆ|
ಶಿಗ್ಗಾಂವಿ[ಅ.24]: ತಾಲೂಕಿನ ಹುನಗುಂದ ಗ್ರಾಮದ ನೆರೆ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೆರೆಯ ಕಟ್ಟೆಯನ್ನು ತಕ್ಷಣದಿಂದಲೆ ಗಟ್ಟಿಗೊಳಿಸುವ ಹಾಗೂ ರಸ್ತೆ ದುರಸ್ತಿ ನಿರ್ಮಾಣದ ಕೆಲಸಕ್ಕೆ ಕಾರ್ಯಪ್ರರ್ವರ್ತರಾಗಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆಯ ಹಾಗೂ ಜೇಕಿನಕಟ್ಟಿ ಹುನಗುಂದ ರಸ್ತೆಯು ಸಂಪೂರ್ಣವಾಗಿ ಬಂದಾಗಿದ್ದು ಕೆರೆಯ ಕಟ್ಟೆಯು ಸಂಪೂರ್ಣವಾಗಿ ಹಾಳಾಗಿರುವುದನ್ನು ಪರಿಶೀಲಿಸಿದರು. ಈ ರಸ್ತೆಯು ಬಂದಾಗಿದ್ದರಿಂದ ಸಾಕಷ್ಟುಪ್ರಮಾಣದಲ್ಲಿ ಸಾರ್ವಜನಿಕರಿಗೆ ಅಸ್ತವ್ಯಸ್ತವಾಗಿದ್ದು ಇದನ್ನು ತಕ್ಷಣವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸುಮಾರು 75 ಎಕರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿರುವ ಹುನಗುಂದ ಗ್ರಾಮದ ದೊಡ್ಡಕೇರೆಯು ನೂರಾರು ಎಕರೆ ಪ್ರದೇಶದಲ್ಲಿರುವ ತೆಂಗು ಬಾಳೆ, ಅಡಕಿ, ಎಲಿಬಳ್ಳಿ ತೋಟಗಳಿಗೆ ಹಾಗೂ ಬತ್ತದ ಬೆಳೆಗೆ ನೀರು ಒದಗಿಸಲಿದ್ದು ಇದು ಏನಾದರೂ ಅನಾಹುತ ಸಂಭವಿಸಿದರೆ ಸಾಕಷ್ಟುಪ್ರಮಾಣದಲ್ಲಿ ಹೊಲಗಳಿಗೆ ಹಾನಿಯಾಗಲಿದೆ.
ಸಾಕಷ್ಟು ವಿಸ್ತೀರ್ಣವುಳ್ಳ ಕೆರಯು ತುಂಬಿ ತುಳುಕುತ್ತಿದ್ದು, ಅನುಹುತ ಸಂಭವಿಸಿದರೆ ಕೆರೆಯ ಕೆಳ ಪ್ರದೇಶದಲ್ಲಿರುವ ತೋಟಗಳು, ಬತ್ತದ ಬೆಳೆಗಳು ಸೇರಿದಂತೆ ಡೋಂಕೆರಿ, ಜೆಲ್ಲಿಗೇರಿ, ಶಿಡ್ಲಾಪುರ, ಕಳಸಗೇರಿಕ್ಕೆ ನೀರು ಹೋಗಿ ಅಪಾರ ಪ್ರಮಾಣದ ಹಾನಿಯಾಗುವ ಸಂಭವವಿದೆ. ಹಾಗಾಗಿ ಆದಷ್ಟು ಬೇಗನೆ ಈ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಹಾವೇರಿ ಪಿಡಬ್ಲುಡಿ ಕಾರ್ಯನಿರ್ವಾಹಕ ಅಭಿಯಂತರ ಭಾವನ ಮೂರ್ತಿ, ಶಿಗ್ಗಾಂವಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿವೇಕ ಚಿಕ್ಕಮಠ, ಸಣ್ಣ ನೀರಾವರಿ ಕಾರ್ಯನಿರ್ವಾಹಕ ಅಭಿಯಂತರ ದೇವರಾಜ, ಪಿಡಬ್ಲುಡಿ ಸಹಾಯಕ ಎಂಜಿನೀಯರ್ ಎಂ.ಎಂ. ಕೋಟಗಿಮನಿ, ಪಟ್ಟಣಶೆಟ್ಟಿಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.
ಗ್ರಾಪಂ ಸದಸ್ಯ ಪರಸಪ್ಪ ಹೊಂಡದಕಟ್ಟಿ ಚಂದ್ರು ರಾಯಪ್ಪನವರ, ಪರಸಪ್ಪ ಬಂಡಿವಡ್ಡರ, ಎಲ್ಲಪ್ಪ ಚೆನ್ನಾಪುರ, ರಮೇಶ ಕೊಟ್ಟಿಗೇರಿ, ಬಸವರಾಜ ಕೊಟ್ಟಿಗೇರಿ, ರಾಮಚಂದ್ರ ಹೊಂಡದಕಟ್ಟಿ, ರಾಮಣ್ಣ ಮೂಲಿಮನಿ ಸೇರಿದಂತೆ ಹಲವಾರು ರೈತರು ಇದ್ದರು.