ಬ್ಯಾಟರ್ಗಳ ವೈಫಲ್ಯ, ಸಾಧಾರಣ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 32 ರನ್ ಸೋಲನುಭವಿಸಿದೆ. ಸೆಂಚೂರಿಯನ್ನ ಬೌನ್ಸಿ ಪಿಚ್ನಲ್ಲಿ ಪೆವಿಲಿಯನ್ ಪರೇಡ್ ನಡೆಸಿದ್ದ ಭಾರತಕ್ಕೆ ಕೇಪ್ಟೌನ್ನಲ್ಲೂ ಬೌನ್ಸರ್ಗಳ ಸವಾಲು ಎದುರಾಗುವುದು ಖಚಿತ.
Cricket Jan 3, 2024, 12:29 PM IST
ಒಂದಲ್ಲ ಎರಡಲ್ಲ ಬರೋಬ್ಬರಿ 31 ವರ್ಷಗಳಿಂದ ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ ಭಾರತ. 1992ರಿಂದ ಹರಿಣಗಳ ನಾಡಿಗೆ ಹೋಗುತ್ತಿದ್ದರೂ ಟೆಸ್ಟ್ ಸರಣಿ ಗೆಲ್ಲಲಾಗಿಲ್ಲ. ಮೂವರು ನಾಯಕರೂ ಒಂದೂ ಟೆಸ್ಟ್ ಗೆಲ್ಲದೆ ಬರಿಗೈಯ್ಯಲ್ಲಿ ಬಂದಿದ್ದರು.
Cricket Dec 31, 2023, 3:39 PM IST
ಸದ್ಯದ ರೋಹಿತ್ರ ಅಂಕಿ ಅಂಶಗಳನ್ನು ಗಮನಿಸಿದಾಗ ದ.ಆಫ್ರಿಕಾದಲ್ಲಿ ಅವರ ಪ್ರದರ್ಶನ ತೀರಾ ಕಳಪೆ. ಅವರು ಈ ವರೆಗೂ 10 ವರ್ಷಗಳಲ್ಲಿ 3 ಬಾರಿ ದ.ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಆದರೆ ಆಡಿರುವ 5 ಪಂದ್ಯಗಳ 10 ಇನ್ನಿಂಗ್ಸ್ಗಳಲ್ಲಿ ಗಳಿಸಿದ್ದು ಕೇವಲ 128 ರನ್. ಇದರಲ್ಲಿ 2 ಬಾರಿ ಶೂನ್ಯ ಸುತ್ತಿದ್ದರೆ, ಗರಿಷ್ಠ ಸ್ಕೋರ್ 47. ಅಂದರೆ ಒಂದೂ ಅರ್ಧಶತಕ ದಾಖಲಿಸಲು ಸಾಧ್ಯವಾಗಿಲ್ಲ.
Cricket Dec 31, 2023, 10:31 AM IST
ಜುಬೇರ್ ಹಮ್ಜಾಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ತೆಂಬ ಬವುಮಾ ಬದಲು ಆಡುವ ನಿರೀಕ್ಷೆ ಇದೆ. ಎಲ್ಗರ್ 2017ರಿಂದ 2023ರ ನಡುವೆ 17 ಟೆಸ್ಟ್ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ದ.ಆಫ್ರಿಕಾ 9 ಗೆಲುವು, 7 ಸೋಲು, 1 ಡ್ರಾ ಕಂಡಿದೆ.
Cricket Dec 30, 2023, 5:56 AM IST
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಮೊಹಮ್ಮದ್ ಶಮಿ ಅನುಪಸ್ಥಿತಿ ಬಲವಾಗಿ ಕಾಡುತ್ತಿದೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ 8 ಟೆಸ್ಟ್ ಪಂದ್ಯಗಳನ್ನಾಡಿ ಎರಡು ಬಾರಿ 5+ ವಿಕೆಟ್ ಸೇರಿದಂತೆ 35 ವಿಕೆಟ್ ಕಬಳಿಸಿದ್ದಾರೆ.
Cricket Dec 29, 2023, 2:18 PM IST
ನಾಂದ್ರೆ ಬರ್ಗರ್ ಹಾಗೂ ಮಾರ್ಕೋ ಜೆನ್ಸೆನ್ ಅವರ ಬೌಲಿಂಗ್ ದಾಳಿಯ ಮುಂದೆ ಸಂಪೂರ್ಣವಾಗಿ ಬೆಂಡಾದ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 32 ರನ್ಗಳ ಸೋಲು ಕಂಡಿದೆ.
Cricket Dec 28, 2023, 9:59 PM IST
1985ರಿಂದ ಬಾಕ್ಸಿಂಗ್ ಡೇ ಟೆಸ್ಟ್ ಆಡುತ್ತಿರುವ ಟೀಂ ಇಂಡಿಯಾ, ಇಲ್ಲಿಯವರೆಗೆ 10 ಬಾಕ್ಸಿಂಗ್ ಡೇ ಟೆಸ್ಟ್ಗಳನ್ನಾಡಿದ್ದು, ಮೂರು ಗೆದ್ದು ಐದನ್ನು ಸೋತಿದೆ. ಇನ್ನೆರಡು ಡ್ರಾ ಆಗಿವೆ. ವಿಶೇಷ ಅಂದ್ರೆ ಭಾರತ ಗೆದ್ದಿರುವ ಮೂರು ಟೆಸ್ಟ್ಗಳು ಹ್ಯಾಟ್ರಿಕ್ ಜಯಗಳಾಗಿವೆ. ಈ 10 ಬಾಕ್ಸಿಂಗ್ ಡೇ ಟೆಸ್ಟ್ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ಮತ್ತು ಸೌತ್ ಆಫ್ರಿಕಾ ವಿರುದ್ಧ ಒಂದನ್ನು ಆಡಿದೆ.
Cricket Dec 25, 2023, 3:29 PM IST
ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ತುರ್ತು ಕಾರಣದಿಂದ ಈಗಾಗಲೇ ತವರಿಗೆ ಮರಳಿದ್ದಾರೆ. ಇದರ ಬೆನ್ನಲ್ಲೇ ಮತ್ತೆರೆಡು ಆಘಾತ ಎದುರಾಗಿದೆ. ಇಶಾನ್ ಕಿಶನ್ ಸೇರಿ ಇಬ್ಬರು ಬ್ಯಾಟ್ಸ್ಮನ್ ತಂಡದಿಂದ ಔಟ್ ಆಗಿದ್ದಾರೆ.
Cricket Dec 22, 2023, 4:11 PM IST
ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. 2 ಪಂದ್ಯಗಳ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿ ಆತಂಕ ಎದುರಾಗಿದೆ. ತುರ್ತು ಕಾರಣದಿಂದ ವಿರಾಟ್ ಕೊಹ್ಲಿ ದಿಢೀರ್ ತವರಿಗೆ ಮರಳಿದ್ದಾರೆ.
Cricket Dec 22, 2023, 2:45 PM IST
ಸೌತ್ ಆಫ್ರಿಕಾ ವಿರುದ್ದ ಅಂತಿಮ ಏಕದಿನ ಪಂದ್ಯದ ಕುತೂಹಲ ಹೆಚ್ಚಾಗಿದೆ. ಸಂಜು ಸ್ಯಾಮ್ಸನ್ ಶತಕ ಸಿಡಿಸಿ ಅಬ್ಬರಿಸುವ ಮೂಲಕ ಭಾರತ 296 ರನ್ ಸಿಡಿಸಿದೆ.
Cricket Dec 21, 2023, 8:18 PM IST
ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ಭಾರತಕ್ಕೆ ಹೆಚ್ಚೇನೂ ಸಾಹಸ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಟೀಂ ಇಂಡಿಯಾ 46.2 ಓವರ್ಗಳಲ್ಲಿ 211ಕ್ಕೆ ಸರ್ವಪತನ ಕಂಡಿತು. ಸುಲಭ ಗುರಿಯನ್ನು ಹರಿಣ ಪಡೆ 42.3 ಓವರ್ಗಳಲ್ಲಿ ಬೆನ್ನತ್ತಿ ಜಯ ತನ್ನದಾಗಿಸಿಕೊಂಡಿತು.
Cricket Dec 20, 2023, 10:26 AM IST
ದಕ್ಷಿಣ ಆಫ್ರಿಕಾದ ತಂಜೇನಿಯಾದ ಸೋಶಿಯಲ್ ಮೀಡಿಯಾ ಸ್ಟಾರ್ಗಳಾದ ನೀಮಾ ಪೌಲ್ ಹಾಗೂ ಕಿಲಿ ಪೌಲ್ ಈಗ ದರ್ಶನ್ ಸಿನಿಮಾದ ಹಾಡೊಂದಕ್ಕೆ ಡಾನ್ಸ್ ಮಾಡಿದ್ದು, ಇದು ಕನ್ನಡದ ಅಭಿಮಾನಿಗಳನ್ನು ರಂಜಿಸಿದೆ.
Entertainment Dec 19, 2023, 12:57 PM IST
ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲ್ಲಲು ಎದುರು ನೋಡುತ್ತಿದ್ದರೆ, ದ. ಆಫ್ರಿಕಾ ಸರಣಿ ಸಮಬಲದ ಕಾತರದಲ್ಲಿದೆ. ಟೆಸ್ಟ್ ಸರಣಿಯತ್ತ ಗಮನ ಹರಿಸುವ ನಿಟ್ಟಿನಲ್ಲಿ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ ಆಡುವುದಿಲ್ಲ.
Cricket Dec 19, 2023, 12:21 PM IST
ಅಲ್ಪಮೊತ್ತಕ್ಕೆ ಸೌತ್ ಆಫ್ರಿಕಾ ತಂಡವನ್ನು ಕಟ್ಟಿಹಾಕಿದ ಭಾರತ, ಸುಲಭವಾಗಿ ಟಾರ್ಗೆಟ್ ಚೇಸ್ ಮಾಡಿದೆ. ಸಾಯಿ ಸುದರ್ಶನ್ ಹಾಗೂ ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ನೆರವಿನಿಂದ ಭಾರತ 8 ವಿಕೆಟ್ ಗೆಲುವು ದಾಖಲಿಸಿದೆ.
Cricket Dec 17, 2023, 5:50 PM IST
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನ್ಯೂ ವಾಂಡರರ್ಸ್ ಮೈದಾನ ಆತಿಥ್ಯವನ್ನು ವಹಿಸಿದೆ. ಇನ್ನು ಟಿ20 ಸರಣಿಯಲ್ಲಿ ಮಿಂಚಿದ್ದ ನಂದ್ರೆ ಬರ್ಗರ್ ಇದೀಗ ಏಕದಿನ ಕ್ರಿಕೆಟ್ಗೆ ದಕ್ಷಿಣ ಆಫ್ರಿಕಾ ಪರ ಪಾದಾರ್ಪಣೆ ಮಾಡಿದ್ದಾರೆ. ಇನ್ನೊಂದೆಡೆ ಟೀಂ ಇಂಡಿಯಾ ಪರ ತಮಿಳುನಾಡು ಮೂಲದ ಸಾಯಿ ಸುದರ್ಶನ್ ಪಾದಾರ್ಪಣೆ ಮಾಡಿದ್ದಾರೆ.
Cricket Dec 17, 2023, 1:13 PM IST