Ind vs SA 2nd ODI: ಕಳಪೆ ಬ್ಯಾಟಿಂಗ್‌ಗೆ ಬೆಲೆ ತೆತ್ತ ಭಾರತ
ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ಭಾರತಕ್ಕೆ ಹೆಚ್ಚೇನೂ ಸಾಹಸ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಟೀಂ ಇಂಡಿಯಾ 46.2 ಓವರ್‌ಗಳಲ್ಲಿ 211ಕ್ಕೆ ಸರ್ವಪತನ ಕಂಡಿತು. ಸುಲಭ ಗುರಿಯನ್ನು ಹರಿಣ ಪಡೆ 42.3 ಓವರ್‌ಗಳಲ್ಲಿ ಬೆನ್ನತ್ತಿ ಜಯ ತನ್ನದಾಗಿಸಿಕೊಂಡಿತು.
ಗೆಬೆರ್ಹಾ(ಡಿ.20): ಮೊನಚು ಬೌಲಿಂಗ್ ಮೂಲಕ ಆರಂಭಿಕ ಪಂದ್ಯದಲ್ಲಿ ದ.ಆಫ್ರಿಕಾವನ್ನು ಹೊಸಕಿ ಹಾಕಿದ್ದ ಟೀಂ ಇಂಡಿಯಾ, 2ನೇ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್‌ನಿಂದಾಗಿ ಸೋಲಿನ ಆಘಾತಕ್ಕೊಳಗಾಗಿದೆ. ಮಂಗಳವಾರದ ಪಂದ್ಯದಲ್ಲಿ ಭಾರತಕ್ಕೆ ೮ ವಿಕೆಟ್ ಸೋಲು ಎದುರಾಯಿತು. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿತು.
ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ಭಾರತಕ್ಕೆ ಹೆಚ್ಚೇನೂ ಸಾಹಸ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಟೀಂ ಇಂಡಿಯಾ 46.2 ಓವರ್‌ಗಳಲ್ಲಿ 211ಕ್ಕೆ ಸರ್ವಪತನ ಕಂಡಿತು. ಸುಲಭ ಗುರಿಯನ್ನು ಹರಿಣ ಪಡೆ 42.3 ಓವರ್‌ಗಳಲ್ಲಿ ಬೆನ್ನತ್ತಿ ಜಯ ತನ್ನದಾಗಿಸಿಕೊಂಡಿತು. ಟಾನಿ ಡೆ ಜೊರ್ಜಿ ಹಾಗೂ ರೀಜಾ ಹೆಂಡ್ರಿಕ್ಸ್ ಮೊದಲ ವಿಕೆಟ್‌ಗೆ ಸೇರಿಸಿದ 130 ರನ್ ದ.ಆಫ್ರಿಕಾದ ಗೆಲುವನ್ನು ಖಚಿತಪಡಿಸಿತು. ಹೆಂಡ್ರಿಕ್ 52ಕ್ಕೆ ನಿರ್ಗಮಿಸಿದರೂ, ಜೊರ್ಜಿ 122 ಎಸೆತಗಳಲ್ಲಿ ಔಟಾಗದೆ 119 ರನ್ ಕಲೆಹಾಕಿ ತಂಡವನ್ನು ಸರಣಿ ಸೋಲಿನಿಂದ ಪಾರು ಮಾಡಿದರು. ಭಾರತ 8 ಬೌಲರ್‌ಗಳನ್ನು ಪ್ರಯೋಗಿಸಿದರೂ, ದ. ಆಫ್ರಿಕಾದ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ.
ಪೆವಿಲಿಯನ್ ಪರೇಡ್: ಭಾರತವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ದ.ಆಫ್ರಿಕಾದ ಗುರಿ ಆರಂಭದಲ್ಲೇ ಕೈ ಹಿಡಿಯಿತು. ಮೊದಲ ಓವರಲ್ಲೇ ಋತುರಾಜ್‌ರನ್ನು ಕಳೆದುಕೊಂಡ ತಂಡ ಬಳಿಕ ಅಲ್ಪ ಚೇತರಿಕೆ ಕಂಡರೂ, ಆತಿಥೇಯ ತಂಡಕ್ಕೆ ದೊಡ್ಡ ಗುರಿ ನೀಡಲಾಗಲಿಲ್ಲ. ಯುವ ಬ್ಯಾಟರ್ ಸಾಯಿ ಸುದರ್ಶನ್(62) ಸತತ 2ನೇ ಪಂದ್ಯದಲ್ಲೂ ಅರ್ಧಶತಕ ಬಾರಿಸಿ ಗಮನ ಸೆಳೆದರೆ, ನಾಯಕ ಕೆ.ಎಲ್.ರಾಹುಲ್ 56 ರನ್ ಕೊಡುಗೆ ನೀಡಿದರು. ಉಳಿದಂತೆ ಬೇರ್ಯಾವ ಬ್ಯಾಟರ್ ಗೂ ಹರಿಣಗಳ ದಾಳಿಯನ್ನು ಹಿಮ್ಮೆಟ್ಟಿಸಿ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ನಂಡ್ರೆ ಬರ್ಗರ್ 3, ಬ್ಯೂರನ್ ಹೆಂಡ್ರಿಕ್ಸ್, ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರು.
ಟರ್ನಿಂಗ್ ಪಾಯಿಂಟ್:
ಆರಂಭಿಕ ಆಘಾತದಿಂದ ಚೇತರಿಸಿದ್ದ ಭಾರತ 2 ವಿಕೆಟ್‌ಗೆ 114 ರನ್ ಗಳಿಸಿತ್ತು. ಆದರೆ ಸುದರ್ಶನ್ ನಿಗರ್ಮನದ ಬಳಿಕ ರಾಹುಲ್‌ಗೆ ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಮಧ್ಯಮ ಕ್ರಮಾಂಕದ ವೈಫಲ್ಯ ತಂಡವನ್ನು ಸೋಲಿನತ್ತ ನೂಕಿತು.
IPL ಇತಿಹಾಸದಲ್ಲಿ ಕಂಡು ಕೇಳರಿಯದ ದಾಖಲೆ, ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಗೆ ಸೇಲ್!
ಸ್ಕೋರ್: ಭಾರತ 46.2 ಓವರಲ್ಲಿ 211/10(ಸುದರ್ಶನ್ 62, ರಾಹುಲ್ 56, ಬರ್ಗರ್ 3-30)
ದ.ಆಫ್ರಿಕಾ 42.3 ಓವರಲ್ಲಿ 215/2 (ಜೊರ್ಜಿ 119*, ಹೆಂಡ್ರಿಕ್ಸ್ 52, ರಿಂಕು 1-2)
ಪಂದ್ಯಶ್ರೇಷ್ಠ: ಟಾನಿ ಡೆ ಜೊರ್ಜಿ