ಎಫ್ ಐಆ‌ರ್ ಹಿನ್ನೆಲೆ ಪ್ರಕರಣ ತನಿಖೆಗಾಗಿ ಲೋಕಾಯುಕ್ತ ಎಸ್ಪಿ ಉದೇಶ್, ಡಿವೈಎಸ್ಪಿ ಮಾಲತೇಶ್, ಚಾಮರಾಜನಗರ ಡಿವೈಎಸ್ಪಿ ಮ್ಯಾಥ್ಯ ಥಾಮಸ್ ಹಾಗೂ ಇನ್ಸ್ ಇನ್ಸ್‌ಪೆಕ್ಟ‌ರ್ ಪೆಕ್ಟರ್ ಅವರನ್ನೊಳಗೊಂಡ 4 ತಂಡ ರಚಿಸಿದ್ದು, ಈ ತಂಡ ನ್ಯಾಯಾಲಯ ನೀಡಿರುವ ದಾಖಲೆಗಳು, ದೂರಿನಲ್ಲಿ ಅಡಕವಾಗಿರುವ ದಾಖಲೆಗಳನ್ನು ಪರಿಶೀಲಿಸುತ್ತಿದೆ. ದಾಖಲೆಗಳ ಪರಿಶೀಲನೆ ಬಳಿಕ ಅಧಿಕಾರಿಗಳ ತಂಡ ತನಿಖೆ ಆರಂಭಿಸುವ ಸಾಧ್ಯತೆ ಇದೆ. 

ಮೈಸೂರು(ಸೆ.29): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣ ಸಂ ಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲ ಯದ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ ಐಆರ್‌ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ತನಿಖೆಗೆ ಶನಿವಾರ ನಾಲ್ಕು ತಂಡಗಳನ್ನು ರಚಿಸಿದ್ದಾರೆ.

ಮುಡಾ ಪ್ರಕರಣ ಸಂಬಂಧ ಲೋಕಾಯುಕ್ತ ಮೈಸೂರು ಠಾಣೆಯ ಕೇಸ್ ನಂಬರ್11/2024 ಅಡಿ ದಾಖಲಾಗಿರುವ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ. ಎಂ.ಪಾರ್ವತಿ, ಅವರ ಭಾಮೈದ ಮಲ್ಲಿ ಕಾರ್ಜುನಸ್ವಾಮಿ, ಭೂಮಿ ಮಾರಾಟ ಮಾಡಿದ ಜೆ. ದೇವರಾಜು ಆರೋಪಿ ಆಗಿದ್ದಾರೆ. 

ಸಿಎಂ ಕುರ್ಚಿ ಖಾಲಿಯಾಗಲಿ, ನನಗೆ ಸಿಗಲಿ ಎಂದು ಕೆಲವರು ಕಾಯ್ತಾ ಇದ್ದಾರೆ: ಸಚಿವ ಮಹದೇವಪ್ಪ

ಎಫ್ ಐಆ‌ರ್ ಹಿನ್ನೆಲೆ ಪ್ರಕರಣ ತನಿಖೆಗಾಗಿ ಲೋಕಾಯುಕ್ತ ಎಸ್ಪಿ ಉದೇಶ್, ಡಿವೈಎಸ್ಪಿ ಮಾಲತೇಶ್, ಚಾಮರಾಜನಗರ ಡಿವೈಎಸ್ಪಿ ಮ್ಯಾಥ್ಯ ಥಾಮಸ್ ಹಾಗೂ ಇನ್ಸ್ ಇನ್ಸ್‌ಪೆಕ್ಟ‌ರ್ ಪೆಕ್ಟರ್ ಅವರನ್ನೊಳಗೊಂಡ 4 ತಂಡ ರಚಿಸಿದ್ದು, ಈ ತಂಡ ನ್ಯಾಯಾಲಯ ನೀಡಿರುವ ದಾಖಲೆಗಳು, ದೂರಿನಲ್ಲಿ ಅಡಕವಾಗಿರುವ ದಾಖಲೆಗಳನ್ನು ಪರಿಶೀಲಿಸುತ್ತಿದೆ. ದಾಖಲೆಗಳ ಪರಿಶೀಲನೆ ಬಳಿಕ ಅಧಿಕಾರಿಗಳ ತಂಡ ತನಿಖೆ ಆರಂಭಿಸುವ ಸಾಧ್ಯತೆ ಇದೆ. 

ಶೀಘ್ರ ನೋಟಿಸ್‌?: 

ಸಾಮಾನ್ಯವಾಗಿ ಪ್ರಕರ ಣಕ್ಕೆ ಸಂಬಂಧಿಸಿ ಎಫ್‌ಐಆರ್‌ಆದ ಬಳಿಕ ಆರೋಪಿಗಳಿಗೆ ತನಿಖಾಧಿಕಾರಿ ನೋಟಿಸ್ ಕೊಡಬೇಕು. ಸಿಆರ್‌ಪಿಸಿ 41 ಅಡಿ ನೋಟಿಸ್ ಜಾರಿ ಮಾಡಬೇಕು. ಮುಡಾದಲ್ಲಿ ಮೂಲ ದಾಖಲೆಗಳನ್ನು ವಶಪಡಿಸಿಕೊಳ್ಳು ವುದು, ಆರೋಪಿಗಳಿಂದ ದಾಖಲೆಗಳನ್ನು ವಶಪಡಿಸಿಕೊಳ್ಳುವುದು, ಆಯಾ ಸಂದರ್ಭದಲ್ಲಿದ್ದ ಮುಡಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಜತೆಗೆ ಹೆಚ್ಚುವರಿ ಆರೋಪಿಗಳು ಕಂಡು ಬಂದರೆ ಅವರನ್ನು ಕೇಸಿಗೆ ಸೇರಿಸುವ ಕೆಲಸ ಲೋಕಾಯುಕ್ತರ ತನಿಖೆಯ ಭಾಗವಾಗಿರಲಿದೆ. ನಂತರ ದಾಖಲೆಗಳು ಪೋರ್ಜರಿಯಾಗಿದ್ದರೆ ಅಂಥ ದಾಖಲೆಗಳ ಕುರಿತು ಎಫ್‌ಎಸ್‌ಎಲ್ ವರದಿ ಕೋರಲಾಗುತ್ತದೆ. 

ತನಿಖಾಧಿಕಾರಿಗಳಿಗಿರುವ ಅಧಿಕಾರ ಏನು?: 

ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ದಾಖಲೆಗಳ ಪರಿಶೀಲನೆ ಮಾಡಬಹುದು, ದಸ್ತಗಿರಿ ಮಾಡದೆ ತನಿಖೆ ನಡೆಸಬಹುದು, ಸಾಕ್ಷ್ಯನಾಶ ಕಂಡು ಬಂದರೆ ಅಂತಹ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಬಹುದು. ತನಿಖೆ ಸಂದರ್ಭದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಬಹುದು, ಬಂಧಿಸದೆಯೂ ಇರಬಹುದು.

ಕರ್ನಾಟಕದಲ್ಲಿ ನೂರಾರು ರೈತರ ಆತ್ಮಹತ್ಯೆ, ಸಿದ್ದು ಸರ್ಕಾರ ತಲೆಕೆಡಿಸಿಕೊಳ್ತಿಲ್ಲ: ಪ್ರಧಾ

ಸಿದ್ದು ವಿರುದ್ಧ ಈಗ ಇ.ಡಿ.ಗೆ ದೂರು! 

ಬೆಂಗಳೂರು: ಮುಡಾ ಹಗರಣ ದಲ್ಲಿ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದ್ದು, ಲೋಕಾಯುಕ್ತದಲ್ಲಿ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಇದೀಗ ಪ್ರಕರಣ ಜಾರಿ ನಿರ್ದೇಶನಾಲಯ (ಇ.ಡಿ.) ಅಂಗಳಕ್ಕೆ ಬಂದಿದೆ. ಪ್ರಕರಣದಲ್ಲಿ ಕೋಟ್ಯಂತರ ರು. ಅಕ್ರಮಹಣವರ್ಗಾವಣೆಯಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದಾರೆ. ಆಗ್ರಹಿಸಲಾಗಿದೆ.

ಕೇಂದ್ರ ಬಿಜೆಪಿ ಕಿಡಿ 

ಮುಡಾ ಎಫ್‌ಐ ಆರ್‌ನಲ್ಲಿ ಸಿದ್ದರಾಮಯ್ಯ ನಂ.1 ಆರೋಪಿಯಾಗಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಈ ಆರೋಪಿಯ ಜೊತೆಗೆ ನಿಲ್ಲುತ್ತಾರೆಯೇ? ಎಂದು ರಾಷ್ಟ್ರೀಯ ಬಿಜೆಪಿ ಟೀಕಿಸಿದೆ.