Asianet Suvarna News Asianet Suvarna News

ಭಾರತ-ದಕ್ಷಿಣ ಆಫ್ರಿಕಾ ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಕ್ಷಣಗಣನೆ: ರೋಹಿತ್ ಶರ್ಮಾ ಮುಂದಿದೆ ಬೆಟ್ಟದಂತ ಸವಾಲು

1985ರಿಂದ ಬಾಕ್ಸಿಂಗ್ ಡೇ ಟೆಸ್ಟ್​ ಆಡುತ್ತಿರುವ ಟೀಂ ಇಂಡಿಯಾ, ಇಲ್ಲಿಯವರೆಗೆ 10 ಬಾಕ್ಸಿಂಗ್ ಡೇ ಟೆಸ್ಟ್‌ಗಳನ್ನಾಡಿದ್ದು, ಮೂರು ಗೆದ್ದು ಐದನ್ನು ಸೋತಿದೆ. ಇನ್ನೆರಡು ಡ್ರಾ ಆಗಿವೆ. ವಿಶೇಷ ಅಂದ್ರೆ ಭಾರತ ಗೆದ್ದಿರುವ ಮೂರು ಟೆಸ್ಟ್‌ಗಳು ಹ್ಯಾಟ್ರಿಕ್​ ಜಯಗಳಾಗಿವೆ. ಈ 10 ಬಾಕ್ಸಿಂಗ್ ಡೇ ಟೆಸ್ಟ್​​ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ಮತ್ತು ಸೌತ್ ಆಫ್ರಿಕಾ ವಿರುದ್ಧ ಒಂದನ್ನು ಆಡಿದೆ.

Countdown begins for India vs South Africa Boxing Day Test kvn
Author
First Published Dec 25, 2023, 3:29 PM IST

ಸೆಂಚೂರಿಯನ್(ಡಿ.25): ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಮೇಲೆ ಒತ್ತಡವಿದೆ. ಸೌತ್ ಆಫ್ರಿಕಾದಲ್ಲಿ ಟೀಂ ಇಂಡಿಯಾ ಇದುವರೆಗೂ ಟೆಸ್ಟ್​ ಸರಣಿ ಗೆದ್ದಿಲ್ಲ. ಪೂರ್ವಿಕರಿಂದ ಸಾಧ್ಯವಾಗದೇ ಇರೋದನ್ನ ರೋಹಿತ್​ ಸಾಧಿಸಬೇಕಿದೆ. ಇನ್ನು ಕಳೆದ ಮೂರು ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತೀಯರು ಸೋತಿಲ್ಲ. ಹಾಗಾಗಿ ನಾಳೆಯಿಂದ ಆರಂಭವಾಗೋ ಮೊದಲ ಟೆಸ್ಟ್ ಅನ್ನ ರೋಹಿತ್ ಗೆಲ್ಲಿಸಿಕೊಡಬೇಕಿದೆ.

ಕಳೆದ ಮೂರು ಬಾಕ್ಸಿಂಗ್ ಡೇ ಟೆಸ್ಟ್​ ಗೆದ್ದಿದೆ ಟೀಂ ಇಂಡಿಯಾ

2023ರ ವರ್ಷಕ್ಕೆ ಗುಡ್ ಬೈ ಹೇಳಲು ದಿನಗಣನೆ ಆರಂಭವಾಗಿದೆ. ಟೀಂ ಇಂಡಿಯಾ ಈ ವರ್ಷದ ಕೊನೆ ಟೆಸ್ಟ್ ಪಂದ್ಯ ಆಡೋಕೆ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ ಭಾರತ-ಸೌತ್ ಆಫ್ರಿಕಾ ತಂಡಗಳು ಮೊದಲ ಟೆಸ್ಟ್‌ನಲ್ಲಿ ಮುಖಾಮುಖಿಯಾಗ್ತಿವೆ. ಟೆಸ್ಟ್​ ಪಂದ್ಯ ಡಿಸೆಂಬರ್ 26ರಿಂದ ಆರಂಭವಾಗುವುದರಿಂದ ಬಾಕ್ಸಿಂಗ್ ಡೇ ಟೆಸ್ಟ್​ ಅಂತ ಕರೆಯಲಾಗುತ್ತೆ. 

ಬಾಕ್ಸಿಂಗ್​​ ಡೇ ಗೂ ಬಾಕ್ಸಿಂಗ್‌ಗೂ ಯಾವುದೇ ಸಂಬಂಧ ಇಲ್ಲ. ಆದ್ರೆ, ಕ್ರಿಸ್‌ಮಸ್​​ ಮರುದಿನವನ್ನು ಬಾಕ್ಸಿಂಗ್​ ಡೇ ಅಂತಾರೆ. ಹೀಗಾಗಿ ಆ ದಿನ ಆರಂಭವಾಗುವ ಟೆಸ್ಟ್‌ಗೆ ಬಾಕ್ಸಿಂಗ್​​ ಡೇ ಟೆಸ್ಟ್​​ ಅನ್ನೋ ಹೆಸ್ರು ಬಂದಿದೆ. ಕ್ರಿಸ್​ಮಸ್​ ಆದ ಮರುದಿನ ಉಡುಗೊರೆಗಳನ್ನು ವಿನಿಮಯ ಮಾಡ್ಕೊಳ್ಳುವ ಪ್ರತೀತಿ ಇದೆ. ಹೀಗಾಗಿ ಗಿಫ್ಟ್‌ಗಳನ್ನೆಲ್ಲ ಒಂದು ಬಾಕ್ಸ್‌ಗೆ ಹಾಕಿದ ಬಳಿಕ ವಿನಿಮಯ ನಡೆಯುತ್ತೆ. ಹೀಗೆ ಬಾಕ್ಸ್​​ ಮೂಲಕ ಉಡುಗೊರೆ ವಿನಿಮಯ ಆಗೋದ್ರಿಂದ ಇದಕ್ಕೆ ಬಾಕ್ಸಿಂಗ್​ ಡೇ ಎನ್ನಲಾಗುತ್ತೆ. ಕಾಮನ್​ವೆಲ್ತ್​​​ ರಾಷ್ಟ್ರಗಳಲ್ಲಿ ಈ ಸಂಪ್ರದಾಯ ರೂಢಿಯಲ್ಲಿದೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಲವ್‌ಸ್ಟೋರಿ; ಮಾಜಿ ಪ್ರೇಯಸಿಯಿಂದ ಗಂಭೀರ ಆರೋಪ

10 ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತಕ್ಕೆ 3 ಜಯ, 5 ಸೋಲು & 2 ಡ್ರಾ

ಯೆಸ್, 1985ರಿಂದ ಬಾಕ್ಸಿಂಗ್ ಡೇ ಟೆಸ್ಟ್​ ಆಡುತ್ತಿರುವ ಟೀಂ ಇಂಡಿಯಾ, ಇಲ್ಲಿಯವರೆಗೆ 10 ಬಾಕ್ಸಿಂಗ್ ಡೇ ಟೆಸ್ಟ್‌ಗಳನ್ನಾಡಿದ್ದು, ಮೂರು ಗೆದ್ದು ಐದನ್ನು ಸೋತಿದೆ. ಇನ್ನೆರಡು ಡ್ರಾ ಆಗಿವೆ. ವಿಶೇಷ ಅಂದ್ರೆ ಭಾರತ ಗೆದ್ದಿರುವ ಮೂರು ಟೆಸ್ಟ್‌ಗಳು ಹ್ಯಾಟ್ರಿಕ್​ ಜಯಗಳಾಗಿವೆ. ಈ 10 ಬಾಕ್ಸಿಂಗ್ ಡೇ ಟೆಸ್ಟ್​​ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ಮತ್ತು ಸೌತ್ ಆಫ್ರಿಕಾ ವಿರುದ್ಧ ಒಂದನ್ನು ಆಡಿದೆ.

2018-20ರಲ್ಲಿ ಕಾಂಗರೂ ಬೇಟೆ

ಸತತ 7 ಬಾಕ್ಸಿಂಗ್ ಡೇ ಟೆಸ್ಟ್‌ಗಳಲ್ಲಿ ಜಯವನ್ನೇ ಕಾಣದ ಭಾರತಕ್ಕೆ 2018ರಲ್ಲಿ ಮೊದಲ ಜಯ ದಕ್ಕಿತ್ತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಸ್ಟ್ರೇಲಿಯಾನ್ನು ಸೋಲಿಸಿ, ಮೊದಲ ಬಾಕ್ಸಿಂಗ್ ಡೇ ಟೆಸ್ಟ್​ ಗೆದ್ದಿತ್ತು ಟೀಂ ಇಂಡಿಯಾ. ಇನ್ನು 2020ರಲ್ಲಿ ಅಜಿಂಕ್ಯ ರಹಾನೆ ಕ್ಯಾಪ್ಟನ್ಸಿಯಲ್ಲಿ ಕಾಂಗರೂ ಬೇಟೆಯಾಡಿತ್ತು ಟೀಂ ಇಂಡಿಯಾ.

2021ರ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಫ್ರಿಕಾ ಸೋಲಿಸಿದ್ದ ಭಾರತ

ಹೌದು, 2021ರಲ್ಲಿ ಆಫ್ರಿಕಾ ಟೂರ್‌ಗೆ ಹೋಗಿದ್ದ ಟೀಂ ಇಂಡಿಯಾ, ಬಾಕ್ಸಿಂಗ್ ಡೇ ಟೆಸ್ಟ್ ಆಡಿತ್ತು. ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಹರಿಣಗಳ ಬೇಟೆಯಾಡಿ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದಿತ್ತು. ಆದ್ರೆ ಉಳಿದೆರಡು ಟೆಸ್ಟ್ ಸೋತು ಸರಣಿ ಸೋತು ಬಂದಿತ್ತು.

ಭಾರತ vs ಆಫ್ರಿಕಾ ಮೊದಲ ಟೆಸ್ಟ್‌ಗೆ ಮಳೆ ಅಡ್ಡಿ ಸಾಧ್ಯತೆ! ಮೊದಲ ದಿನದಾಟ ನಡೆಯೋದೇ ಡೌಟ್

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸತತ 4ನೇ ಜಯ ಸಿಗುತ್ತಾ..?

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಹ್ಯಾಟ್ರಿಕ್ ಜಯ ಸಾಧಿಸಿದೆ. ಈಗ ಸತತ 4ನೇ ಜಯ ಸಿಗುತ್ತಾ ಅನ್ನೋ ಕುತೂಹಲ ಹುಟ್ಟಿಕೊಂಡಿದೆ. ಎಂ ಎಸ್ ಧೋನಿ ಬಾಕ್ಸಿಂಗ್ ಡೇ ಟೆಸ್ಟ್​ ಅನ್ನ ಡ್ರಾ ಮಾಡಿಸಿದ್ದರು. ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ ಬಾಕ್ಸಿಂಗ್​ ಡೇ ಟೆಸ್ಟ್ ಅನ್ನ ಗೆಲ್ಲಿಸಿಕೊಟ್ಟಿದ್ದರು. ಈಗ ರೋಹಿತ್​ ಶರ್ಮಾ ಸರದಿ. ಗೆಲ್ಲಿಸ್ತಾರಾ..? ಸೋಲಿಸ್ತಾರಾ..? ಡ್ರಾ ಮಾಡಿಸ್ತಾರಾ ಅನ್ನೋ ಕುತೂಹಲವಂತೂ ಇದ್ದೇ ಇದೆ. ಒಟ್ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​ ಟೆಸ್ಟ್​ನಲ್ಲಿ ಭಾರತೀಯರು ಹ್ಯಾಟ್ರಿಕ್ ಜಯ ಸಾಧಿಸಿದ್ದರೂ ಇತಿಹಾಸ ವಿರುದ್ಧ ಈಜಬೇಕಿದೆ ಅನ್ನೋದನ್ನ ಮರೆಯುವಂತಿಲ್ಲ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios