Asianet Suvarna News Asianet Suvarna News

ಒಂದೇ ಸರಣಿಯಿಂದ ಟೀಂ ಇಂಡಿಯಾ ಇಬ್ಬರನ್ನು ಡ್ರಾಪ್ ಮಾಡಿದ್ದು ತಪ್ಪಾಯ್ತಾ..?

ಒಂದಲ್ಲ ಎರಡಲ್ಲ ಬರೋಬ್ಬರಿ 31 ವರ್ಷಗಳಿಂದ ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ ಭಾರತ. 1992ರಿಂದ ಹರಿಣಗಳ ನಾಡಿಗೆ ಹೋಗುತ್ತಿದ್ದರೂ ಟೆಸ್ಟ್ ಸರಣಿ ಗೆಲ್ಲಲಾಗಿಲ್ಲ. ಮೂವರು ನಾಯಕರೂ ಒಂದೂ ಟೆಸ್ಟ್ ಗೆಲ್ಲದೆ ಬರಿಗೈಯ್ಯಲ್ಲಿ ಬಂದಿದ್ದರು.

Cheteshwar Pujara Ajinkya Rahane drop may cost India tour of South Africa kvn
Author
First Published Dec 31, 2023, 3:39 PM IST

ಬೆಂಗಳೂರು(ಡಿ.31): ಟೀಮ್‌ನಲ್ಲಿ ಬದಲಾವಣೆ ಮಾಡಬೇಕು ನಿಜ. ಹಾಗಂದ ಮಾತ್ರ ಏಕಾಏಕಿ ಇಬ್ಬಿಬ್ಬರನ್ನ ತಂಡದಿಂದ ಡ್ರಾಪ್ ಮಾಡಿದ್ರೆ ಅದು ತಂಡಕ್ಕಾಗೋ ಲಾಭಕ್ಕಿಂತ ನಷ್ಟವೇ ಜಾಸ್ತಿ. ಈಗ ಆಗಿರೋದು ಅದೇ. ಇಬ್ಬರು ಸೀನಿಯರ್ಸ್ ಬಿಟ್ಟು ಆಫ್ರಿಕಾದಲ್ಲಿ ಹೀನಾಯವಾಗಿ ಸೋತಿದೆ ಟೀಂ ಇಂಡಿಯಾ.

ಏಕಾಏಕಿ ಸೀನಿಯರ್ಸ್ ಡ್ರಾಪ್ ಮಾಡಿದ್ದೇಕೆ..?

ಒಂದಲ್ಲ ಎರಡಲ್ಲ ಬರೋಬ್ಬರಿ 31 ವರ್ಷಗಳಿಂದ ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ ಭಾರತ. 1992ರಿಂದ ಹರಿಣಗಳ ನಾಡಿಗೆ ಹೋಗುತ್ತಿದ್ದರೂ ಟೆಸ್ಟ್ ಸರಣಿ ಗೆಲ್ಲಲಾಗಿಲ್ಲ. ಮೂವರು ನಾಯಕರೂ ಒಂದೂ ಟೆಸ್ಟ್ ಗೆಲ್ಲದೆ ಬರಿಗೈಯ್ಯಲ್ಲಿ ಬಂದಿದ್ದರು. ಇನ್ನುಳಿದ ಮೂವರು ನಾಯಕರು ಒಂದೊಂದು ಟೆಸ್ಟ್ ಗೆದ್ದುಕೊಂಡು ಬಂದಿದ್ದರು. ಮೂರು ದಶಕಗಳ ಬಳಿಕವಾದ್ರೂ ಭಾರತೀಯರು, ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ತಾರೆ ಅನ್ನೋ ನಿರೀಕ್ಷೆಗಳಿದ್ದವು. ಆದ್ರೆ ಮೊದಲ ಟೆಸ್ಟ್ ಅನ್ನ ಮೂರೇ ದಿನದಲ್ಲಿ ಹೀನಾಯವಾಗಿ ಸೋತು ತಲೆ ತಗ್ಗಿಸಿ ನಿಂತಿದ್ದಾರೆ. ಈಗೇನಿದ್ದರೂ ಉಳಿದ ಒಂದು ಟೆಸ್ಟ್ ಗೆದ್ದು ಸರಣಿ ಡ್ರಾ ಮಾಡಿಕೊಳ್ಳೋದು ಬಿಟ್ರೆ ಬೇರೆ ದಾರಿ ಇಲ್ಲ. ಆ ಟೆಸ್ಟ್ ಅನ್ನೂ ಸೋತ್ರೆ ರೋಹಿತ್ ಶರ್ಮಾ ಕೆಟ್ಟ ನಾಯಕರ ಲಿಸ್ಟ್ಗೆ ಸೇರಿ ಬಿಡ್ತಾರೆ.

2023ರಲ್ಲಿ ಟೀಂ ಇಂಡಿಯಾ ಪಡೆದುಕೊಂಡಿದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ..! ಈ ಬಾರಿ ಸೋತಿದ್ದು ಒಂದಲ್ಲ 2 ವಿಶ್ವಕಪ್

ಮೊದಲ ಟೆಸ್ಟ್ ಸೋಲಿಗೆ ನಾನಾ ಕಾರಣಗಳಿರಬಹುದು. ಪ್ಲೇಯಿಂಗ್-11 ಆಯ್ಕೆಯಲ್ಲಿ ಎಡವಟ್ಟು, ಭಾರತೀಯರು ಪಿಚ್ ಮರ್ಮ ಅರಿಯಲಿಲ್ಲ. ಟಾಸ್ ಸೋತಿದ್ದು. ಹೀಗೆ ಅನೇಕ ಕಾರಣಗಳನ್ನ ಹೇಳ್ತಿದ್ದಾರೆ. ಆದ್ರೆ ಮಾಜಿ ಕ್ರಿಕೆಟರ್ಸ್ ಮಾತ್ರ ಆ ಇಬ್ಬರು ಆಟಗಾರರನ್ನ ಏಕಾಏಕಿ ಡ್ರಾಪ್ ಮಾಡಿದ್ದೇ ಸೋಲಿಗೆ ಕಾರಣ ಅಂತಿದ್ದಾರೆ. ಆಫ್ರಿಕಾ ಸರಣಿಗೆ ಈ ಇಬ್ಬರು ಸೀನಿಯರ್ಸ್ ಪ್ಲೇಯರ್ಸ್ ಆಯ್ಕೆಯಾಗಲಿಲ್ಲ. ಇಬ್ಬರನ್ನೂ ಒಂದೇ ಸರಣಿಯಿಂದ ಕೈ ಬಿಟ್ಟೇ ಭಾರತಕ್ಕೆ ಹಿನ್ನಡೆಯಾಯ್ತು. ಆ ಇಬ್ಬರೇ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯಾ ರಹಾನೆ.

ಟೆಸ್ಟ್ ವಿಶ್ವಕಪ್ ಫೈನಲ್ ಬಳಿಕ ಪೂಜಾರ ಡ್ರಾಪ್

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೇತೇಶ್ವರ್ ಪೂಜಾರ ಆಡಿದ್ದರು. ಆದ್ರೆ ಎರಡು ಇನ್ನಿಂಗ್ಸ್ನಲ್ಲೂ ವಿಫಲರಾಗಿದ್ದರು. ಆ ಬಳಿಕ ಅವರನ್ನ ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆ ಮಾಡಿರಲಿಲ್ಲ. ಈಗ ಆಫ್ರಿಕಾ ಸಿರೀಸ್ಗೆ ಸೆಲೆಕ್ಟ್ ಮಾಡಿಲ್ಲ. ಆದ್ರೀಗ ಅವರು ರಣಜಿ ಟೂರ್ನಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಟೆಸ್ಟ್ ವಿಶ್ವಕಪ್ ಫೈನಲ್ನಲ್ಲಿ ಪೂಜಾರ ವಿಫಲರಾಗಿರಬಹುದು. ಆದ್ರೆ ಟೆಸ್ಟ್ ಕ್ರಿಕೆಟ್ನಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಆಫ್ರಿಕಾದಂತಹ ಪಿಚ್ನಲ್ಲಿ ಸುದೀರ್ಘ ಕಾಲ ಕ್ರೀಸಿನಲ್ಲಿ ನಿಂತು ಬ್ಯಾಟಿಂಗ್ ಮಾಡೋ ಬ್ಯಾಟರ್ ಬೇಕಿತ್ತು. ಪೂಜಾರ ಇದ್ದಿದ್ದರೆ, ಕನಿಷ್ಟ ಪಕ್ಷ ಮೂರನೇ ದಿನದ ಸೋಲನ್ನ ಐದನೇ ದಿನಕ್ಕೆ ತಳ್ಳುತ್ತಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ರೋಹಿತ್ ಶರ್ಮಾಗೆ ಅಗ್ನಿಪರೀಕ್ಷೆ..!

ಟೆಸ್ಟ್ ತಂಡದಿಂದ ರಹಾನೆ ಡ್ರಾಪ್ ಮಾಡಿದಕ್ಕೆ ಕಾರಣವೇ ಇಲ್ಲ

ಅಜಿಂಕ್ಯ ರಹಾನೆ ಟೆಸ್ಟ್ ವಿಶ್ವಕಪ್ ಫೈನಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ವೆಸ್ಟ್ ಇಂಡೀಸ್ ಟೂರ್ಗೆ ಸೆಲೆಕ್ಟ್ ಆಗಿದ್ದರು. ಆದ್ರೆ ವಿಂಡೀಸ್ನಲ್ಲಿ ವಿಫಲರಾದ್ರು. ಇದೇ ಕಾರಣ ಇಟ್ಟುಕೊಂಡು ಅವರನ್ನ ಆಫ್ರಿಕಾ ಸಿರೀಸ್ಗೆ ಸೆಲೆಕ್ಟ್ ಮಾಡಿಲ್ಲ. ಲೋ ಅರ್ಡರ್ನಲ್ಲಿ ಟೀಂ ಇಂಡಿಯಾ ಅಪದ್ಭಾಂದವ. ಆದ್ರೂ ಆಫ್ರಿಕಾ ಸರಣಿ ಆಡ್ತಿಲ್ಲ. ರಹಾನೆ ಇದ್ದಿದ್ದರೆ, ಕೆಎಲ್ ರಾಹುಲ್ ಜೊತೆ ಸೇರಿಕೊಂಡು ಅದ್ಭುತ ಇನ್ನಿಂಗ್ಸ್ ಆಡುತ್ತಿದ್ದರು.

ಇಬ್ಬರು ಮುಂಬೈಕರ್‌ಗಳಿಗಾಗಿ ಇಬ್ಬರು ಟೆಸ್ಟ್ ಸ್ಪೆಷಲಿಸ್ಟ್‌ಗಳು ಡ್ರಾಪ್

ಹೌದು, ಮುಂಬೈ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಮೇಲೆ ಅಪಾರ ನಂಬಿಕೆಯಿಟ್ಟುಕೊಂಡು ಪೂಜಾರ-ರಹಾನೆಗೆ ಕೊಕ್ ಕೊಡಲಾಗಿದೆ. ಆದ್ರೆ ಅವರಿಬ್ಬರು ಮಾತ್ರ ನಂಬಿಕ ಉಳಿಸಿಕೊಳ್ತಿಲ್ಲ. ಹಾಗಾಗಿ ಟೀಂ ಇಂಡಿಯಾಗೆ ಈ ಇಬ್ಬರು ಸೀನಿಯರ್ಸ್ ಅನುಪಸ್ಥಿತಿ ಕಾಡ್ತಿದೆ. ಯಾರು ಏನೇ ಹೇಳಲಿಲ್ಲ. ಮಾಜಿ ಆಟಗಾರರು ಹೇಳಿದ್ದೇ ಸರಿ. ಈ ಇಬ್ಬರು ಹಿರಿಯ ಆಟಗಾರರು ಇನ್ನೊಂದೆರಡು ವರ್ಷ ಟೆಸ್ಟ್ ಕ್ರಿಕೆಟ್ ಆಡಿಸಬೇಕಿತ್ತು. 

- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios