Asianet Suvarna News Asianet Suvarna News

News Hour: ಹೆಜ್ಬೊಲ್ಲಾ ಮುಖ್ಯಸ್ಥನ ಮುಗಿಸಿದ ಇಸ್ರೇಲ್, 80 ಟನ್‌ ಬಾಂಬ್‌ ಸುರಿದ ಐಡಿಎಫ್‌!

ಹೆಜ್ಬೋಲ್ಲಾ ಸಂಘಟನೆ ಮುಖ್ಯಸ್ಥನನ್ನೇ ಇಸ್ರೇಲ್‌ ಮುಗಿಸಿದೆ. 80 ಟನ್​ ಬಾಂಬ್​ ಸುರಿದು ಹಸನ್ ನಸರುಲ್ಲಾನನ್ನು ಐಡಿಎಫ್‌ ಕೊಂದಿದೆ. ಇದರ ಬೆನ್ನಲ್ಲಿಯೇ ಇರಾನ್​ನ ಸರ್ವೋಚ್ಛ ನಾಯಕನಿಗೂ ಜೀವಭಯ ಶುರುವಾಗಿದೆ.

First Published Sep 28, 2024, 11:42 PM IST | Last Updated Sep 28, 2024, 11:42 PM IST

ನವದೆಹಲಿ (ಸೆ.28): ಹೆಜ್ಬೊಲ್ಲಾ ವಿರುದ್ಧದ ಹೋರಾಟದಲ್ಲಿ ಇಸ್ರೇಲ್​ಗೆ ದೊಡ್ಡ ಯಶಸ್ಸು ಸಿಕ್ಕಿದೆ. ಹೆಜ್ಬೊಲ್ಲಾ ಉಗ್ರ ಸಂಘಟನೆ ಮುಖ್ಯಸ್ಥ ಹಸನ್ ನಸರುಲ್ಲಾ ಕಥೆಯನ್ನು ಫಿನಿಶ್‌ ಮಾಡಿದೆ. ಲೆಬನಾನ್​ನಿಂದ ಇಸ್ರೇಲ್ ಮೇಲೆ ದಾಳಿ ಮಾಡ್ತಿದ್ದ ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್‌ ದೊಡ್ಡ ಮಟ್ಟದಲ್ಲಿ ಸೇಡು ತೀರಿಸಿಕೊಂಡಿದೆ.

ಸರಣಿ ಕ್ಷಿಪಣಿ ದಾಳಿ ಮಾಡುತ್ತಿದ್ದ ಹೆಜ್ಬೊಲ್ಲಾ ಸೊಂಟವನ್ನೇ ಇಸ್ರೇಲ್‌ ಮುರಿದಿದೆ. ಹೆಜ್ಬೊಲ್ಲಾ ಕೇಂದ್ರ ಕಚೇರಿ ಮೇಲಿನ ದಾಳಿಯಲ್ಲಿ ನಸರುಲ್ಲಾ ಹತನಾಗಿದ್ದಾನೆ ಎಂದು ಇಸ್ರೇಲ್‌ ತಿಳಿಸಿದ್ದು. ಲೆಬನಾನ್‌ ಕೂಡ ಇದನ್ನು ಖಚಿತಪಡಿಸಿದೆ. ಬೈರೂತ್‌ನಲ್ಲಿ ನಡೆದ ದಾಳಿಯಲ್ಲಿ ಹೆಜ್ಬೊಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಬಲಿಯಾಗಿದ್ದಾರೆ.

ಇಸ್ರೇಲ್ ವಾಯುದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ನಸ್ರಲ್ಲಾ ಹತ್ಯೆ?

‘ಹಸನ್ ನಸ್ರಲ್ಲಾ ಸತ್ತಿದ್ದಾನೆ’ ಎಂದು ಇಸ್ರೇಲ್ ಸೇನೆ ಘೋಷಣೆ ಮಾಡಿದೆ. ಮೊನ್ನೆಯಷ್ಟೇ ಹೆಜ್ಬೊಲ್ಲಾ ಕಮಾಂಡರ್ ಇಬ್ರಾಹಿಂ ಖುಬೈಸಿ ಹತ್ಯೆಯಾಗಿದ್ದ. ಹಸನ್ ನಸರುಲ್ಲಾ ಹುತಾತ್ಮ ಎಂದು ಹೆಜ್ಬೊಲ್ಲಾ ಕೂಡ ಸಾವನ್ನು ಒಪ್ಪಿಕೊಂಡಿದೆ.