ನೈಟ್ ಕಫäರ್, ಶೇ.50ರಷ್ಟುಮಾತ್ರ ಸೀಟು ಭರ್ತಿ ನಿಯಮಗಳಿಂದ ಮೊದಲೇ ಕೆಂಗಟ್ಟಿರುವ ಚಿತ್ರರಂಗಕ್ಕೆ ಕೊರೋನಾ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಪೆಟ್ಟು ನೀಡುತ್ತಿದೆ. ಕೊರೋನಾ ತಡೆಯಲು ಸರ್ಕಾರ ಲಾಕ್ಡೌನ್ ಮಾಡುತ್ತದೋ ಇಲ್ಲವೋ, ಗೊತ್ತಿಲ್ಲ. ಆದರೆ, ಚಿತ್ರರಂಗ ಮಾತ್ರ ಹೆಚ್ಚು ಕಮ್ಮಿ ಲಾಕ್ಡೌನ್ ಮಾಡಿಕೊಂಡಿದೆ.
Sandalwood Apr 19, 2021, 9:40 AM IST
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ನೆಪವೊಡ್ಡಿ ಕಳೆದೆರಡು ದಿನಗಳಿಂದ ಮಾರುಕಟ್ಟೆಯಲ್ಲಿ ಗುಟ್ಕಾ ಬೆಲೆ ದಿಢೀರ್ ಹೆಚ್ಚಳ ಕಂಡಿದ್ದು ಗುಟ್ಕಾ ಪ್ರಿಯರ ಜೇಬಿಗೆ ಕನ್ನಹಾಕಿದೆ. ಅದರಲ್ಲೂ ತಂಬಾಕು ಮಿಶ್ರಿತ ಗುಟ್ಕಾ ತಿನ್ನುವವರು ದುಪ್ಪಟ್ಟು ದರ ತೆರಬೇಕಾಗಿದೆ.
Karnataka Districts Apr 19, 2021, 7:53 AM IST
ಕೊರೋನಾ ವೈರಸ್ ಪ್ರಕರಣ ದಿಢೀರ್ ಏರಿಕೆಯಾಗಿದೆ. ಕಳೆದ ಕೆಲದಿನಗಳಿಂದ ಪ್ರತಿ ದಿನ 2.5 ಲಕ್ಷ ಹೊಸ ಕೇಸ್ ಪತ್ತೆಯಾಗುತ್ತಿದೆ. ಇದರ ನಡುವೆ ಕೆಲ ರಾಜ್ಯಗಳು ನೈಟ್ ಕರ್ಫ್ಯೂ ಸೇರಿದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ ಸಂಪೂರ್ಣ ಭಾರತ ಲಾಕ್ಡೌನ್ ಮಾಡಲಿದೆ ಅನ್ನೋ ಸುದ್ದಿಗಳು ಹರಿದಾಡುತ್ತಿದೆ. ಈ ಕುರಿತು ಸ್ಪಷ್ಟನೆ ಇಲ್ಲಿದೆ.
Fact Check Apr 18, 2021, 9:04 PM IST
ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಹೊರತು ಪಡಿಸಿ ಇತರ ದಾರಿಗಳನ್ನು ಸರ್ಕಾರಗಳು ಜಾರಿಗೊಳಿಸುತ್ತಿದೆ. ಆದರೆ ಕೊರೋನಾ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಇದೀಗ ಒಂದೊಂದೆ ರಾಜ್ಯದಲ್ಲಿ ಲಾಕ್ಡೌನ್ ಚಿಂತನೆಗಳು ಆರಂಭಗೊಂಡಿದೆ. ಇದೀಗ ತಮಿಳುನಾಡಿನಲ್ಲಿ ಪ್ರತಿ ಭಾನುವಾರ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ.
India Apr 18, 2021, 7:47 PM IST
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್ ಎನ್ನುವ ಸುದ್ದಿಗೆ ಸಚಿವ ಸುಧಾಕರ್ ಸ್ಪಷ್ಟನೆ ಕೊಟ್ಟಿದ್ದಾರೆ.
state Apr 18, 2021, 4:09 PM IST
ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮಿತಿ ಮೀರಿದ್ದು, ಸಾವಿನ ಸಂಖ್ಯೆಯೂ ಅತ್ಯಧಿಕವಾಗುತ್ತಿದೆ. ರಾಜ್ಯದಲ್ಲಿ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ನಾಳೆ (ಏ.19) ಬೆಂಗಳೂರು ಶಾಸಕರ ಮಹತ್ವದ ಸಭೆ ಇದ್ದು ಆದರೆ ಲಾಕ್ಡೌನ್ ಬಗ್ಗೆ ಯಾವುದೇ ಶಾಸಕರು ಒಲವು ತೋರುತ್ತಿಲ್ಲ. ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ನಾಳಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.
Karnataka Districts Apr 18, 2021, 3:47 PM IST
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್ ಎನ್ನುವ ಸುದ್ದಿಗೆ ಸಚಿವ ಅಶೋಕ್ ಸ್ಪಷ್ಟನೆ ಕೊಟ್ಟಿದ್ದಾರೆ.
state Apr 18, 2021, 3:41 PM IST
ಕೊರೋನಾ ನಿಯಂತ್ರಿಸಲು ಲಾಕ್ಡೌನ್ಗಿಂತ ಪರ್ಯಾಯ ಮಾರ್ಗ ಕಂಡುಕೊಳ್ಳುವುದೇ ಹೆಚ್ಚು ಉತ್ತಮ. ಲಾಕ್ಡೌನ್ನಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
Karnataka Districts Apr 18, 2021, 3:07 PM IST
ರಾಜ್ಯದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಆದರೆ ಮತ್ತೆ ಲಾಕ್ಡೌನ್ ಬೇಡ. ಇದರ ಜನಜೀವನದ ಮೇಲೆ ಸಾಕಷ್ಟು ಮಾರಕ ಪರಿಣಾಮ ಉಂಟಾಗಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಲಾಕ್ಡೌನ್ನಿಂದ ತೊಂದರೆಯಾಗುವುದು ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
state Apr 18, 2021, 2:20 PM IST
ಕೋವಿಡ್ ಹೋಗುತ್ತೆ ಎಂದು ನಾವೆಲ್ಲ ನಂಬಿದ್ದೆವು. ಆದರೆ ಮತ್ತೆ ಉಲ್ಬಣಿಸುತ್ತಿದೆ. ಸರ್ಕಾರ ಮತ್ತೆ ಲಾಕ್ಡೌನ್ ಘೋಷಣೆ ಮಾಡಲ್ಲ. ಇದರಲ್ಲಿ ಜನರು ಸಹಕಾರ ನೀಡಿ, ಅಂತರ ಕಾಪಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
Karnataka Districts Apr 17, 2021, 12:53 PM IST
ಕೊರೋನಾ ಮಹಾಮಾರಿ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಈ ನಿಟ್ಟಿನಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಕಾರ್ಮಿಕರು ಮರಳಿ ತಮ್ಮ ಊರುಗಳತ್ತ ವಲಸೆ ಶುರು ಮಾಡಿದ್ದಾರೆ.
Karnataka Districts Apr 17, 2021, 7:44 AM IST
ಕೊರೋನಾ ವೈರಸ್ ಕಾರಣ ಒಂದೊಂದೆ ರಾಜ್ಯಗಳು ಕಠಿಣ ನಿರ್ಬಂಧ ಹೇರಲಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ಕರ್ಫ್ಯೂ ಜಾರಿಯಾಗಿದೆ. ಕಠಿಣ ರೂಲ್ಸ್ ಹೇರಿದ ಎರಡೇ ವಾರಕ್ಕೆ ಭಾರತದ ನಿರುದ್ಯೋಗ ಸಮಸ್ಯೆಯಲ್ಲೂ ಹೆಚ್ಚಳವಾಗಿದೆ. ಈ ಕುರಿತು ಆತಂಕಕಾರಿ ವರದಿ ಇಲ್ಲಿದೆ.
India Apr 16, 2021, 2:29 PM IST
ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಲಾಕ್ಡೌನ್ ಮಾಡಲ್ಲ, ವೀಕೆಂಡ್ ಲಾಕ್ಡೌನ್, ಟಫ್ರೂಲ್ಸ್ ಜಾರಿಗೆ ತರುತ್ತೇವೆ ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ. ಸರ್ಕಾರದ ದ್ವಂದ್ವ ನೀತಿ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
state Apr 16, 2021, 1:04 PM IST
ಒಂದೊಂದೆ ರಾಜ್ಯಗಳು ಸೆಮಿ ಲಾಕ್ಡೌನ್ ಹೇರುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಲಾಕ್ಡೌನ್ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ಕಿರಿಕಿರಿ ಮುಂದುವರಿಸಿದರೆ ಮೋದಿ ಸರ್ಕಾರ ಸೇನಾ ದಾಳಿ ನಡೆಸುವ ಸಾಧ್ಯತೆ ಹೆಚ್ಚು ಎಂಬ ವರದಿಗೆ ಇಮ್ರಾನ್ ಖಾನ್ ಬೆದರಿದ್ದಾರೆ. ಚಿನ್ನಾಭರಣಕ್ಕೆ ಹಾಲ್ಮಾರ್ಕ್ ಕಡ್ಡಾಯ ಮಾಡಲಾಗಿದೆ. ಕ್ಲಾಸಿಕ್ ಲುಕ್ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ಆರ್ಸಿಬಿ ಸ್ಪಿನ್ನರ್ ಸೇರಿದಂತೆ ಏಪ್ರಿಲ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Apr 15, 2021, 5:48 PM IST
ಕೊರೋನಾ ನಿಯಂತತ್ರಣಕ್ಕೆ ರಾಜ್ಯ ಸರ್ಕಾರ ರಾತ್ರಿ ನಿಷೇಧಾಜ್ಞೆ ಜಾರಿ ಮಾಡಿತ್ತು.. ಆದರೆ ಕೇಸುಗಳ ಸಂಖ್ಯೆ ಏರುತ್ತಲೇ ಇದೆ. ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ಸರ್ವಪಕ್ಷ ಸಭೆ ಕರೆದಿದ್ದು ಭವಿಷ್ಯ ನಿರ್ಧಾರ ಆಗಲಿದೆ.
Karnataka Districts Apr 15, 2021, 5:41 PM IST