ಬಾಗಲಕೋಟೆ: ಪೊಲೀಸರ ಹೆಸರಲ್ಲಿ ಸ್ವಾಮೀಜಿಗೆ 1 ಕೋಟಿ ವಂಚನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದಾನೆ ಎನ್ನಲಾಗುತ್ತಿರುವ ಪ್ರಕಾಶ ಮುಧೋಳ ಬೆಳಗಾವಿ ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದಿಂದ 2023ರಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿದ್ದ. ಈತನ ವಿರುದ್ಧ ಹಲವು ಕಡೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದೆ.

1 crore fraud to Swamiji in the name of police in Bagalkot grg

ಬಾಗಲಕೋಟೆ(ಸೆ.29):  ಎಡಿಜಿಪಿ ಹೆಸರಿನಲ್ಲಿ ಸ್ವಾಮೀಜಿಯೊಬ್ಬರಿಗೆ ಕರೆ ಮಾಡಿ ₹1 ಕೋಟಿ ವಂಚನೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಾಗಲಕೋಟೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. 

ಜೆಡಿಎಸ್‌ ಮುಖಂಡ ಎನ್ನಲಾದ ಪ್ರಕಾಶ ಮುಧೋಳ ಎಂಬಾತನನ್ನು ಬಂಧಿತ ಆರೋಪಿ. ಇಲ್ಲಿಗೆ ಸಮೀಪದ ಪರಮಹಂಸ ಪರಮ ರಾಮಾರೂಢ ಸ್ವಾಮೀಜಿ ಮೋಸಕ್ಕೆ ಒಳಗಾದವರು. ಸ್ವಾಮೀಜಿಯವರಿಗೆ ಪ್ರಕಾಶ ಮುಧೋಳ ಎಂಬಾತ ಕರೆ ಮಾಡಿ ತಾನು ಡಿವೈಎಸ್ಪಿ ಎಂದು ಹೇಳಿಕೊಂಡು, ನಿಮ್ಮ ಬಗ್ಗೆ ಗೃಹ ಸಚಿವರಿಗೆ ಅನೇಕ ದೂರುಗಳು ಬಂದಿವೆ. ಎಡಿಜಿಪಿ ಯವರಿಗೆ ಹಣ ನೀಡದಿದ್ದರೆ ನಿನ್ನ ಮಾನ ಹರಾಜು ಹಾಕುತ್ತೇವೆ ಎಂದು ಹೆದರಿಸಿದ್ದಾನೆ. ನಂತರ ಮತ್ತೊಬ್ಬ ವ್ಯಕ್ತಿ ಎಡಿಜಿಪಿ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಇದರಿಂದ ಗಾಬರಿ ಗೊಂಡ ಸ್ವಾಮೀಜಿ ಅವರು ಮೊದ ಲು ₹61 ಲಕ್ಷ ನಗದು, ನಂತರ ₹39 ಲಕ್ಷ ಸೇರಿ ಒಟ್ಟು ₹1 ಕೋಟಿ ಹಣ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದಾದ ನಂತರವೂ ಆರೋಪಿಗಳು ಮತ್ತೆ ಹಣಕ್ಕೆ ಪೀಡಿಸಿದ್ದಾರೆ. ಇದರಿಂದ ಅನುಮಾನಗೊಂಡ ಸ್ವಾಮೀಜಿ ಬಾಗಲಕೋಟೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ ಮುಧೋಳನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಬೆಂಗಳೂರು: ಆನ್‌ಲೈನ್‌ ಜಾಬ್‌ ಹೆಸರಲ್ಲಿ 6 ಕೋಟಿ ವಂಚನೆ

ಜೆಡಿಎಸ್‌ ಅಭ್ಯರ್ಥಿ ಆಗಿದ್ದ ಪ್ರಕಾಶ: 

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದಾನೆ ಎನ್ನಲಾಗುತ್ತಿರುವ ಪ್ರಕಾಶ ಮುಧೋಳ ಬೆಳಗಾವಿ ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದಿಂದ 2023ರಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿದ್ದ. ಈತನ ವಿರುದ್ಧ ಹಲವು ಕಡೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದೆ.

Latest Videos
Follow Us:
Download App:
  • android
  • ios