Asianet Suvarna News Asianet Suvarna News
2331 results for "

ಪ್ರವಾಹ

"
flood victims Face Critical Condition Karnatakaflood victims Face Critical Condition Karnataka

ತಾಯಿಗೆ ಊಟವಿಲ್ಲ - ಮಗುವಿಗೆ ಎದೆ ಹಾಲು ಸಿಗುತ್ತಿಲ್ಲ

ರಾಜ್ಯದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಜನರನ್ನು ಅತೀವ ಸಂಕಷ್ಟಕ್ಕೆ ದೂಡಿದೆ. ಹೊಟ್ಟೆತುಂಬುವಷ್ಟು ಆಹಾರಕ್ಕೂ ಪರದಾಟ ಆಗುತ್ತಿದೆ.   ತನ್ನ ಹೊಟ್ಟೆಗೆ ಹಿಟ್ಟಿಲ್ಲದೇ ಮಗುವಿನ ಹೊಟ್ಟೆ ತುಂಬಿಸಲೂ ಆಗದ  ತಾಯಿಯೊಬ್ಬಳ ಮನಕಲಕುವ ಘಟನೆ ಇದು.

Karnataka Districts Aug 16, 2019, 2:58 PM IST

As heavy rain hits in Shivamogga Decease infects  arecanutAs heavy rain hits in Shivamogga Decease infects  arecanut

ಶಿವಮೊಗ್ಗ: ಅಡಕೆ ಬೆಳೆಗೆ ವ್ಯಾಪಕ ಕೊಳೆರೋಗ

ಸಾಗರ ತಾಲೂಕಿನ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಿಂದಾಗಿ ಅಡಕೆ ಬೆಳೆಗೆ ವ್ಯಾಪಕ ಕೊಳೆರೋಗ ತಗುಲಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ತೋಟಗಾರಿಕೆ ನಿರ್ದೇಶಕ ರಮೇಶ್‌ ಜೆ.ಎಲ್‌. ಹೇಳಿದರು. ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಬಂದು ತಗ್ಗಿದ್ದರೂ, ಈಗ ಅಡಕೆಗೆ ರೋಗ ಬಾಧಿಸುವ ಭೀತಿ ಎದುರಾಗಿದೆ.

Karnataka Districts Aug 16, 2019, 2:49 PM IST

BS Yediyurappa Meets PM Narendra Modi Over Flood ReliefBS Yediyurappa Meets PM Narendra Modi Over Flood Relief
Video Icon

ಶೀಘ್ರದಲ್ಲೇ ಪ್ರವಾಹ ಪರಿಹಾರ ಬಿಡುಗಡೆಗೆ ಪ್ರಧಾನಿ ಭರವಸೆ: ಸಿಎಂ

ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸುಮಾರು 40 ನಿಮಿಷ ನಡೆದ ಚರ್ಚೆಯ ಬಳಿಕ ಶೀಘ್ರದಲ್ಲೇ ಪರಿಹಾರ ಬಿಡುಗಡೆ ಮಾಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ.

NEWS Aug 16, 2019, 1:37 PM IST

mla dc thammanna prathishtana in mandya send 10 lorry relief materialsmla dc thammanna prathishtana in mandya send 10 lorry relief materials

ಮಂಡ್ಯ: ನೆರೆ ಸಂತ್ರಸ್ತರಿಗೆ 10 ಲಾರಿ ಸಾಮಗ್ರಿ ರವಾನೆ

ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಶಾಸಕ ಡಿ.ಸಿ.ತಮ್ಮಣ್ಣ ಪ್ರತಿಷ್ಠಾನದ ವತಿಯಿಂದ 50 ಲಕ್ಷ ರು. ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ರವಾನಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷೆ ಸೌಮ್ಯರಮೇಶ್‌ ಹಸಿರು ನಿಶಾನೆ ತೋರಿಸುವ ಮೂಲಕ ಪರಿಹಾರ ಸಾಮಗ್ರಿಗಳನ್ನು ಹೊತ್ತ 10 ಲಾರಿಗಳಿಗೆ ಚಾಲನೆ ನೀಡಿದರು

Karnataka Districts Aug 16, 2019, 1:26 PM IST

water released to canals in Mandya as KRS filled upwater released to canals in Mandya as KRS filled up

ಕೆಆರ್‌ಎಸ್‌ ಸಂಪೂರ್ಣ ಭರ್ತಿ, ನಾಲೆಗೂ ನೀರು

ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕಾವೇರಿ ನದಿ ಹಾಗೂ, ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ನಾಲೆಗಳಿಗೆ ನೀರು ಹರಿಸದೆ ತಮಿಳುನಾಡಿಗೆ ನೀರು ಬಿಡಲಾಗುತ್ತಿದ್ದು, ಇದನ್ನು ರೈತರು ತೀವ್ರವಾಗಿ ಖಂಡಿಸಿದ್ದರು. ಇದೀಗ ಜಲಾಶಯ ಭರ್ತಿಯಾಗಿದ್ದು, ಕಾವೇರಿ ನದಿಗೂ, ನಾಲೆಗಳಿಗೂ ನೀರು ಬಿಡಲಾಗಿದೆ.

Karnataka Districts Aug 16, 2019, 1:09 PM IST

Rain decreases in ChikkamgaluruRain decreases in Chikkamgaluru

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿಡುವು ಕೊಟ್ಟ ಮಳೆ

ಚಿಕ್ಕಮಗಳೂರಿನಲ್ಲಿ ಕಳೆದ ವಾರ ಬಿಡುವಿಲ್ಲದೇ ಸುರಿದ ಭಾರಿ ಮಳೆಗೆ ಜನ ಬೇಸತ್ತಿದ್ದರು. ಅತಿ ಹೆಚ್ಚು ಮಳೆಯಾಗಿರುವ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ, ಚಿಕ್ಕಮಗಳೂರು ತಾಲೂಕುಗಳಲ್ಲಿ ಮಳೆ ಇಳಿಮುಖವಾಗಿದೆ. ತರೀಕೆರೆ ಮತ್ತು ಕಡೂರು ತಾಲೂಕುಗಳಲ್ಲೂ ಮಳೆ ಕ್ಷೀಣಿಸಿದೆ.

Karnataka Districts Aug 16, 2019, 12:26 PM IST

Telugu Sampoornesh Babu donates 2 lakhs for fund relief in uttara karnatakaTelugu Sampoornesh Babu donates 2 lakhs for fund relief in uttara karnataka

ಪ್ರವಾಹ ಪೀಡಿತರಿಗೆ 2 ಲಕ್ಷ ರೂ ನೆರವು ಕೊಟ್ಟ ‘ಬರ್ನಿಂಗ್ ಸ್ಟಾರ್’! ಯಾರಿವರು?

ಉತ್ತರ ಕರ್ನಾಟಕ ಮತ್ತು ಕರಾವಳಿ, ಉತ್ತರ ಕನ್ನಡ, ಕರಾವಳಿ ಭಾಗಗಳಲ್ಲಿ ಉಂಟಾದ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ತೆಲುಗು ಚಿತ್ರರಂಗದ ಬರ್ನಿಂಗ್ ಸ್ಟಾರ್ 2 ಲಕ್ಷರೂ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ENTERTAINMENT Aug 16, 2019, 12:17 PM IST

School colleges begins in chikmagaluru and kodaguSchool colleges begins in chikmagaluru and kodagu

ಚಿಕ್ಕಮಗಳೂರು, ಕೊಡಗಲ್ಲಿ ಮತ್ತೆ ಶಾಲಾ-ಕಾಲೇಜು ಶುರು

ಪರಿಹಾರ ಕೇಂದ್ರಗಳನ್ನು ತೆರೆದಿರುವ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜು ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗನವಾಡಿ ಕೇಂದ್ರ, ಶಾಲಾ, ಕಾಲೇಜುಗಳು ಆ.16 ರಿಂದ ಕೊಡಗು, ಚಿಕ್ಕಮಗಳೂರಿನಲ್ಲಿಯೂ ಪುನರಾರಂಭಗೊಳ್ಳಲಿವೆ.

NEWS Aug 16, 2019, 12:15 PM IST

Chikkamagaluru people prepares 7000 chapathi for flood victimsChikkamagaluru people prepares 7000 chapathi for flood victims

ಚಿಕ್ಕಮಗಳೂರು: ನೆರೆ ಸಂತ್ರಸ್ತರಿಗೆ 7 ಸಾವಿರ ಚಪಾತಿ, ಅಗತ್ಯ ವಸ್ತುಗಳ ರವಾನೆ

ಕಡೂರು ತಾಲೂಕಿನ ಜಿ.ಯರದಕೆರೆ ಗ್ರಾಮಸ್ಥರು ನೆರೆ ಸಂತ್ರಸ್ಥರಿಗಾಗಿ 7000 ಚಾಪತಿ ಹಾಗೂ ಅಗತ್ಯ ವಸ್ತುಗಳನ್ನು ಕಳುಹಿಸಿದರು. ಗ್ರಾಮಸ್ಥರು ಪ್ರತಿ ಮನೆಗಳಿಂದ ಚಪಾತಿ ತಯಾರಿಸಿದ್ದಾರೆ. ಚಪಾತಿ ಹಾಗೂ ಕೆಂಪು ಚಟ್ನಿಯನ್ನು ಸಂತ್ರಸ್ತರ ಹಸಿವು ನೀಗಿಸುವ ಕಾರ್ಯಕ್ಕೆ ಸಾಗಿಸಲು ಮುಂದಾಗಿದ್ದಾರೆ.

Karnataka Districts Aug 16, 2019, 11:53 AM IST

Interesting story of a woman save her family by floodsInteresting story of a woman save her family by floods

ವರ್ಷದ ಮಗುವಿನೊಂದಿಗೆ ಮನೆ ಮಂದಿ ರಕ್ಷಿಸಿದ ಗಟ್ಟಿಗಿತ್ತಿ!

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕುಕ್ಕಾವು ಸಮೀಪದ ಮಾಪಲ್‌ದಡಿ ಎಂಬಲ್ಲಿ ಪ್ರವಾಹ ನೀರಿನಿಂದ ತನ್ನ ಒಂದು ವರ್ಷದ ಮಗುವಿನ ಜೊತೆಗೆ ಮನೆ ಮಂದಿಯನ್ನು ರಕ್ಷಿಸಿದ ವೇದಾವತಿ ಸಾಹಸಗಾಥೆಯಿದು. 

NEWS Aug 16, 2019, 11:49 AM IST

Karnataka Floods Landslides Continue In Malnad RegionKarnataka Floods Landslides Continue In Malnad Region

ಮಲೆನಾಡಲ್ಲಿ ಮುಂದುವರಿದ ಭೂ ಕುಸಿತ : ಹಲವು ಪ್ರದೇಶಗಳ ಸಂಪರ್ಕ ಕಡಿತ

ಮಲೆನಾಡಲ್ಲಿ ಮಳೆ ನಿಂತರೂ ಕೂಡ ಅದರಿಂದಾಗುತ್ತಿರುವ ಅನಾಹುತಗಳು ಮಾತ್ರ ತಗ್ಗುತ್ತಿಲ್ಲ. ಇನ್ನೂ ಕೆಲವೆಡೆ ಭೂ ಕುಸಿತವಾಗುತ್ತಿದ್ದು, ಸಂಪರ್ಕವೇ ಸಾಧ್ಯವಾಗುತ್ತಿಲ್ಲ. 

Karnataka Districts Aug 16, 2019, 11:39 AM IST

Karnataka dams having 900 TMC water due to heavy rain in 13 daysKarnataka dams having 900 TMC water due to heavy rain in 13 days

ರಾಜ್ಯದ ಡ್ಯಾಂಗಳು ಬಹುತೇಕ ಭರ್ತಿ!

ರಾಜ್ಯದಲ್ಲಿ ಸುರಿದ ಪ್ರಳಯ ಸದೃಶ್ಯಮಳೆ ಜನ​- ಜಾನುವಾರು ತಲ್ಲಣಗೊಳಿಸುವುದರ ಜತೆಗೆ ಹಲವಾರು ದಾಖಲೆಗಳನ್ನು ಸೃಷ್ಟಿಸಿದೆ. ಆ.1ರಿಂದ ಆ.14ರ ನಡುವಣ 13 ದಿನಗಳಲ್ಲಿ ರಾಜ್ಯದ ಜಲಾಶಯಗಳಿಗೆ ಹರಿದು ಬಂದಿರುವ ನೀರಿನ ಪ್ರಮಾಣ ಬರೋಬ್ಬರಿ 900 ಟಿಎಂಸಿ. ಇದು ಸಾರ್ವಕಾಲಿಕ ದಾಖಲೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ದೃಢಪಡಿಸಿದೆ.

NEWS Aug 16, 2019, 9:52 AM IST

Puneeth Rajkumar donates 5 lakh to cm relief fund for helping flood victimsPuneeth Rajkumar donates 5 lakh to cm relief fund for helping flood victims

ನೆರೆ ಸಂತ್ರಸ್ತರಿಗೆ ನೆರವಾಗಲು ಪುನೀತ್ 5 ಲಕ್ಷ ರೂ ದೇಣಿಗೆ

 ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನೆರೆ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರು. ದೇಣಿಗೆ ನೀಡಿದ್ದಾರೆ.

NEWS Aug 16, 2019, 9:09 AM IST

Tahasildar Carries food on his head and crosses riverTahasildar Carries food on his head and crosses river

ನೆರೆ ಸಂತ್ರಸ್ತರಿಗಾಗಿ ಆಹಾರ ತಲೆ ಮೇಲೆ ಹೊತ್ತು ನದಿ ದಾಟಿದ ತಹಸೀಲ್ದಾರ್‌!

ನೆರೆ ಸಂದರ್ಭ ಅಧಿಕಾರಿಗಳೂ, ಗ್ರಾಮಸ್ಥರು ಎಲ್ಲರೂ ಒಟ್ಟಾಗಿ ಸಂತ್ರಸ್ತರಿಗೆ ನೆರವಾದರು. ಮಂಗಳೂರಿನ ಬೆಳ್ತಂಗಡಿಯಲ್ಲಿ ತಹಸೀಲ್ದಾರರೊಬ್ಬರು ಸಂತ್ರಸ್ತರಿಗೆ ಆಹಾರ ತಲುಪಿಸಲು ಸಾಹಸ ಮಾಡಿದ್ದಾರೆ. ಆಹಾರ ಸಾಮಾಗ್ರಿ ತುಂಬಿದ್ದ ಮೂಟೆಯನ್ನು ತಲೆ ಮೇಲೆ ಹೊತ್ತುಕೊಂಡು ನದಿ ದಾಟಿದ್ದಾರೆ.

Karnataka Districts Aug 16, 2019, 8:39 AM IST

CM B S Yediyurappa requests to people to join hands for helping flood victimsCM B S Yediyurappa requests to people to join hands for helping flood victims

ಸಂತ್ರಸ್ತರಿಗೆ ನೆರವಾಗಲು ಸರ್ಕಾರದ ಜತೆ ಕೈಜೋಡಿಸಿ

ಪ್ರವಾಹ, ಮಳೆ ಮತ್ತು ಭೂ ಕುಸಿತದಿಂದ ಹಾನಿಗೊಳಗಾಗಿರುವ ಮನೆಗಳನ್ನು ಅಗತ್ಯವಿದ್ದರೆ ದುರಸ್ತಿ ಇಲ್ಲವೇ, ಪುನರ್‌ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಹಾನಿಯ ಅಂದಾಜು ಮಾಡಲಾಗುತ್ತಿದ್ದು, ಕೇಂದ್ರಕ್ಕೆ ಈಗಾಗಲೇ ಸಲ್ಲಿಸಿರುವ ನೆರವಿನ ಕೋರಿಕೆ ಮನವಿಗಳನ್ನು ಪರಿಷ್ಕೃತಗೊಳಿಸಿ ಮತ್ತೊಮ್ಮೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು

NEWS Aug 16, 2019, 8:29 AM IST